ವ್ಹೀಲ್​ ಚೇರ್​ನಲ್ಲಿ ರಶ್ಮಿಕಾ, ನಡೆಯಲು ಸಹ ಆಗುತ್ತಿಲ್ಲ, ಏನಾಯ್ತು ನಟಿಗೆ?

|

Updated on: Jan 22, 2025 | 4:16 PM

Rashmika Mandanna: ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿರುವ, ಟಾಲಿವುಡ್ ಹಾಗೂ ಬಾಲಿವುಡ್​ನಲ್ಲಿ ಹವಾ ಎಬ್ಬಿಸಿರುವ ನಟಿ ರಶ್ಮಿಕಾ ಇದೀಗ ವ್ಹೀಲ್ ಚೇರ್​ ಮೇಲೆ ಓಡಾಡುತ್ತಿದ್ದಾರೆ. ಸ್ವಂತ ಶಕ್ತಿಯಿಂದ ನಡೆದಾಡಲು ಸಹ ಸಾಧ್ಯವಾಗುತ್ತಿಲ್ಲ. ನಡೆಯಲು ಆಗಂಥಹದ್ದು ಏನಾಯ್ತು ರಶ್ಮಿಕಾಗೆ? ಇಲ್ಲಿದೆ ಅವರ ಆರೋಗ್ಯದ ಬಗ್ಗೆ ಮಾಹಿತಿ.

ವ್ಹೀಲ್​ ಚೇರ್​ನಲ್ಲಿ ರಶ್ಮಿಕಾ, ನಡೆಯಲು ಸಹ ಆಗುತ್ತಿಲ್ಲ, ಏನಾಯ್ತು ನಟಿಗೆ?
Rashmika Mandanna Di
Follow us on

ಸಿನಿಮಾಗಳಲ್ಲಿ ಜಿಂಕೆಯಂತೆ ಕುಣಿಯುತ್ತಾ, ಆಡುತ್ತಾ ಎಲ್ಲರನ್ನೂ ರಂಜಿಸುತ್ತಿರುವ, ತಮ್ಮ ಸ್ಪೀಡ್​ನಿಂದಾಗಿ ಕಡಿಮೆ ಸಮಯದಲ್ಲಿಯೇ ಟಾಲಿವುಡ್, ಬಾಲಿವುಡ್​ನ ಬೇಡಿಕೆಯ ನಟಿ, ನಂಬರ್ 1 ಎಂದೆಲ್ಲ ಕರೆಸಿಕೊಂಡಿರುವ ರಶ್ಮಿಕಾಗೆ ಈಗ ನಡೆಯಲು ಸಹ ಸಾಧ್ಯವಾಗುತ್ತಿಲ್ಲ. ರಶ್ಮಿಕಾ ಮಂದಣ್ಣ ಏರ್​ಪೋರ್ಟ್​ನಲ್ಲಿ ಸಿಬ್ಬಂದಿಯ ಸಹಾಯದಿಂದ ಕುಂಟುಂತಾ ನಡೆಯುತ್ತಿರುವ ಆ ನಂತರ ನಡೆಯಲಾಗದೆ ವ್ಹೀಲ್​ಚೇರ್​ ಮೇಲೆ ಕುಳಿತಿರುವ ದೃಶ್ಯಗಳು ವೈರಲ್ ಆಗಿದ್ದು, ನಟಿಯ ಅಭಿಮಾನಿಗಳಿಗೆ ಆತಂಕ ಮೂಡಿಸಿದೆ.

ಅಸಲಿಗೆ ರಶ್ಮಿಕಾಗೆ ಕೆಲವು ದಿನಗಳ ಹಿಂದೆ ಕಾಲಿಗೆ ಪೆಟ್ಟಾಗಿದೆ. ಜಿಮ್ ಮಾಡುವ ಸಮಯದಲ್ಲಿ ತಾವೇ ತಮ್ಮ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ ರಶ್ಮಿಕಾ. ವ್ಯಾಯಾಮ ಮಾಡುವ ಸಮಯದಲ್ಲಿ ಆದ ಗಾಯದಿಂದ ರಶ್ಮಿಕಾರ ಕಾಲಿನ ಮೂಳೆಯಲ್ಲಿ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಇದಕ್ಕೆ ಚಿಕಿತ್ಸೆಯನ್ನೂ ಸಹ ರಶ್ಮಿಕಾ ಪಡೆಯುತ್ತಿದ್ದಾರೆ. ವಾರದ ಹಿಂದೆ, ಪ್ಲಾಸ್ಟರ್ ಹಾಕಿದ ತಮ್ಮ ಕಾಲಿನ ಚಿತ್ರವನ್ನು ಸಹ ರಶ್ಮಿಕಾ ಹಂಚಿಕೊಂಡಿದ್ದರು.

ಇದೇ ಕಾರಣಕ್ಕೆ ರಶ್ಮಿಕಾ ಮಂದಣ್ಣ ಕುಟುಂತ್ತಾ ನಡೆಯುವ ಸ್ಥಿತಿ ನಿರ್ಮಾಣವಾಗಿದೆ. ನಡೆಯಲು ಕಷ್ಟಪಡುತ್ತಿರುವ ಕಾರಣ ವ್ಹೀಲ್​ಚೇರ್​ನ ಸಹಾಯವನ್ನು ರಶ್ಮಿಕಾ ಪಡೆದಿದ್ದಾರೆ. ಕಾಲು ನೋವಿನ ನಡೆಯುವೆಯೂ ಸಹ ರಶ್ಮಿಕಾ ಮಂದಣ್ಣ ಸಿನಿಮಾ ಕೆಲಸಕ್ಕಾಗಿ ಮುಂಬೈಗೆ ತೆರಳಿದ್ದಾರೆ. ಇಂದು ಬೆಳಿಗ್ಗೆ ಅವರು ಹೈದರಾಬಾದ್ ವಿಮಾನ ನಿಲ್ದಾಣದಿಂದ ಮುಂಬೈಗೆ ಹೋಗಿದ್ದು, ಅಲ್ಲಿ ಅವರ ನಟನೆಯ ಹಿಂದಿ ಸಿನಿಮಾ ‘ಛಾವಾ’ದ ಡಬ್ಬಿಂಗ್ ಮತ್ತು ಪ್ಯಾಚ್ ವರ್ಕ್ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಛತ್ರಪತಿ ಶಿವಾಜಿಯ ಸೊಸೆಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ನಟನೆಯ ‘ಛಾವಾ’ ಸಿನಿಮಾ ಫೆಬ್ರವರಿ 14 ಕ್ಕೆ ತೆರೆಗೆ ಬರುತ್ತಿದೆ. ಸಿನಿಮಾದ ಡಬ್ಬಿಂಗ್ ಹಾಗೂ ಮುಖ್ಯವಾಗಿ ಪ್ರಚಾರ ಕಾರ್ಯದಲ್ಲಿ ರಶ್ಮಿಕಾ ಪಾಲ್ಗೊಳ್ಳಬೇಕಿದೆ. ಆದರೆ ರಶ್ಮಿಕಾಗೆ ನಡೆಯಲು ಸಹ ಸಾಧ್ಯವಾಗುತ್ತಿಲ್ಲ. ಇಂಥಹಾ ಕಠಿಣ ಸ್ಥಿತಿಯಲ್ಲಿ ರಶ್ಮಿಕಾ ಸಿನಿಮಾ ಕಾರ್ಯವನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ.

ರಶ್ಮಿಕಾ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ. ಸಲ್ಮಾನ್ ಖಾನ್ ನಟನೆಯ ‘ಸಿಖಂಧರ್’, ತೆಲುಗಿನಲ್ಲಿ ‘ಗರ್ಲ್​ಫ್ರೆಂಡ್’, ವಿಜಯ್ ದೇವರಕೊಂಡ ಜೊತೆಗೆ ಇನ್ನೂ ಹೆಸರಿಡದ ಸಿನಿಮಾ. ತಮಿಳಿನಲ್ಲಿ ಧನುಶ್ ಜೊತೆ ‘ಕುಬೇರ’, ಹಿಂದಿಯ ‘ತಮಾ’, ವಿಜಯ್ ದೇವರಕೊಂಡ ಜೊತೆಗೆ ‘ಗೀತ ಗೋವಿಂದಂ 2’ ಇನ್ನೂ ಕೆಲ ಸಿನಿಮಾಗಳು ರಶ್ಮಿಕಾ ಕೈಯಲ್ಲಿವೆ. ಆದರೆ ಅವರ ಕಾಲಿಗೆ ಪೆಟ್ಟಾಗಿರುವ ಕಾರಣ ಎಲ್ಲ ಸಿನಿಮಾಗಳ ಚಿತ್ರೀಕರಣಗಳು ನಿಂತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:03 pm, Wed, 22 January 25