ಹೇಗಿದ್ದಾರೆ ನೋಡಿ ರಶ್ಮಿಕಾ ಮಂದಣ್ಣ ತಾಯಿ; ಮಿಸ್ಸಿಂಗ್ ಫೀಲ್​ನಲ್ಲಿ ನಟಿ

|

Updated on: Oct 04, 2023 | 10:29 AM

ಈ ಫೋಟೋ ಅಭಿಮಾನಿಗಳಿಗೆ ಸಾಕಷ್ಟು ಇಷ್ಟ ಆಗಿದೆ. ರಶ್ಮಿಕಾ ಹಾಗೂ ಅವರ ತಾಯಿ ಸುಮನ್ ಇಬ್ಬರೂ ನಗುತ್ತಿದ್ದಾರೆ. ಈ ಫೋಟೋ ನೋಡಿದ ಅನೇಕರು ದೃಷ್ಟಿ ತೆಗೆಸಿಕೊಳ್ಳುವಂತೆ ಇವರಿಗೆ ಕೋರಿದ್ದಾರೆ. ಇನ್ನೂ ಕೆಲವರು ‘ತಾಯಿಯಂತೆ ಮಗಳು’ ಎಂದು ಕಮೆಂಟ್ ಮಾಡಿದ್ದಾರೆ.

ಹೇಗಿದ್ದಾರೆ ನೋಡಿ ರಶ್ಮಿಕಾ ಮಂದಣ್ಣ ತಾಯಿ; ಮಿಸ್ಸಿಂಗ್ ಫೀಲ್​ನಲ್ಲಿ ನಟಿ
ಸುಮನ್-ರಶ್ಮಿಕಾ
Follow us on

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಕುಟುಂಬದ ಮೇಲೆ ಸಾಕಷ್ಟು ಪ್ರೀತಿ ಇದೆ. ಇವರ ಮನೆಯಲ್ಲಿ ಅಮ್ಮ, ಅಪ್ಪ, ತಂಗಿ ಇದ್ದಾರೆ. ಆದರೆ, ರಶ್ಮಿಕಾ ಮಂದಣ್ಣ ಶೂಟಿಂಗ್ ಕಾರಣದಿಂದ ಬೇರೆ ಬೇರೆ ನಗರಗಳಿಗೆ ತೆರಳುತ್ತಾ ಇರುತ್ತಾರೆ. ಸಮಯ ಸಿಗದ ಕಾರಣ ಅವರಿಗೆ ಕೊಡಗಿನಲ್ಲಿರುವ ಮನೆಗೆ ಬರೋಕೆ ಆಗುತ್ತಿಲ್ಲ. ತಾಯಿಯನ್ನು ಅವರು ಸಖತ್ ಮಿಸ್ ಮಾಡಿಕೊಳ್ಳುತ್ತಾ ಇದ್ದಾರೆ. ಈ ಕುರಿತು ಫೋಟೋ ಒಂದನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ 12 ಗಂಟೆಯಲ್ಲಿ 9 ಲಕ್ಷ ಲೈಕ್ಸ್ ಸಿಕ್ಕಿದೆ.

ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ. ಅವರ ತಾಯಿ ಸುಮನ್ ಜೊತೆ ಇರುವ ಫೋಟೋನ ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅವರು ‘ಅಮ್ಮನ ಜೊತೆ ಗಾಸಿಪ್ ಮಾಡುತ್ತಿದ್ದೇನೆ. ನಾಲ್ಕು ವರ್ಷ ಹಿಂದಿನ ಫೋಟೋ. ಮಿಸ್ಸಿಂಗ್ ಫೀಲ್ ಆರಂಭ ಆಗಿದೆ’ ಎಂದು ಅವರು ಕ್ಯಾಪ್ಶನ್ ನೀಡಿದ್ದಾರೆ.

ಈ ಫೋಟೋ ಅಭಿಮಾನಿಗಳಿಗೆ ಸಾಕಷ್ಟು ಇಷ್ಟ ಆಗಿದೆ. ರಶ್ಮಿಕಾ ಹಾಗೂ ಅವರ ತಾಯಿ ಸುಮನ್ ಇಬ್ಬರೂ ನಗುತ್ತಿದ್ದಾರೆ. ಈ ಫೋಟೋ ನೋಡಿದ ಅನೇಕರು ದೃಷ್ಟಿ ತೆಗೆಸಿಕೊಳ್ಳುವಂತೆ ಇವರಿಗೆ ಕೋರಿದ್ದಾರೆ. ಇನ್ನೂ ಕೆಲವರು ‘ತಾಯಿಯಂತೆ ಮಗಳು’ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಮೂರನೇ ಬಾರಿಗೆ ಒಂದಾದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ; ಅಭಿಮಾನಿಗಳಲ್ಲಿ ಮೂಡಿದೆ ನಿರೀಕ್ಷೆ

ರಶ್ಮಿಕಾ ಮಂದಣ್ಣ ಅವರು ಸದ್ಯ ಸಾಲು ಸಾಲು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರು ಗೀತಾಂಜಲಿ ಆಗಿ ನಟಿಸಿರುವ ‘ಅನಿಮಲ್’ ಚಿತ್ರ ರಿಲೀಸ್​ಗೆ ರೆಡಿ ಇದೆ. ಡಿಸೆಂಬರ್ 1ರಂದು ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ರಣಬೀರ್ ಕಪೂರ್  ಹೀರೋ. ಇನ್ನು, ‘ಪುಷ್ಪ 2’ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಸಿನಿಮಾ ಮುಂದಿನ ವರ್ಷ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ತಮಿಳಿನ ಧನುಷ್ ಚಿತ್ರಕ್ಕೂ ರಶ್ಮಿಕಾ ನಾಯಕಿ. ಈ ಕಾರಣದಿಂದ ಅವರು ಮುಂಬೈ, ಹೈದರಾಬಾದ್ ಹಾಗೂ ಚೆನ್ನೈ ಓಡಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:59 am, Wed, 4 October 23