700 ಬ್ಯಾಕ್​ಗ್ರೌಂಡ್ ಡಾನ್ಸರ್​ಗಳ ಜೊತೆ ನೃತ್ಯ ಮಾಡಲಿದ್ದಾರೆ ರಶ್ಮಿಕಾ ಮಂದಣ್ಣ

ಡ್ಯಾನ್ಸ್​ ಮಾಡುವಾಗ ಸಾಮನ್ಯವಾಗಿ ಬ್ಯಾಕ್​ಗ್ರೌಂಡ್​ನಲ್ಲಿ ಡ್ಯಾನ್ಸರ್​ಗಳು ಇರುತ್ತಾರೆ. ಈ ವೇಳೆ 50-100 ಮಂದಿ ಕಾಣಿಸಿಕೊಳ್ಳೋದು ಸಾಮಾನ್ಯ. ಆದರೆ, ಬರೋಬ್ಬರಿ 700 ಮಂದಿ ಕಾಣಿಸಿಕೊಂಡರೆ? ಹೀಗೊಂದು ಅಪರೂಪದ ಘಟನೆಗೆ ‘ಛವ್ವಾ’ ಸಿನಿಮಾ ಸಾಕ್ಷಿ ಆಗಲಿದೆ.

700 ಬ್ಯಾಕ್​ಗ್ರೌಂಡ್ ಡಾನ್ಸರ್​ಗಳ ಜೊತೆ ನೃತ್ಯ ಮಾಡಲಿದ್ದಾರೆ ರಶ್ಮಿಕಾ ಮಂದಣ್ಣ
ರಶ್ಮಿಕಾ

Updated on: Sep 28, 2024 | 12:01 PM

ಲಕ್ಷ್ಮಣ್ ಉಟೇಕರ್ ನಿರ್ದೇಶನದ ‘ಛವ್ವಾ’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಛತ್ರಪತಿ ಸಾಂಬಾಜಿ ಪಾತ್ರದಲ್ಲಿ ವಿಕ್ಕಿ ನಟಿಸಿದರೆ ಅವರ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಒಂದು ದೊಡ್ಡ ಅಪ್​​ಡೇಟ್ ಸಿಕ್ಕಿದೆ.

ಡ್ಯಾನ್ಸ್​ ಮಾಡುವಾಗ ಸಾಮನ್ಯವಾಗಿ ಬ್ಯಾಕ್​ಗ್ರೌಂಡ್​ನಲ್ಲಿ ಡ್ಯಾನ್ಸರ್​ಗಳು ಇರುತ್ತಾರೆ. ಈ ವೇಳೆ 50-100 ಮಂದಿ ಕಾಣಿಸಿಕೊಳ್ಳೋದು ಸಾಮಾನ್ಯ. ಆದರೆ, ಬರೋಬ್ಬರಿ 700 ಮಂದಿ ಕಾಣಿಸಿಕೊಂಡರೆ? ಹೀಗೊಂದು ಅಪರೂಪದ ಘಟನೆಗೆ ‘ಛವ್ವಾ’ ಸಿನಿಮಾ ಸಾಕ್ಷಿ ಆಗಲಿದೆ. ಎಆರ್​ ರೆಹಮಾನ್ ಕಂಪೋಸ್​ನಲ್ಲಿ ಈ ಹಾಡು ಮೂಡಿ ಬಂದಿದೆ. ಈ ಹಾಡಿನ ಶೂಟ್​ಗೆ ಸಿದ್ಧತೆ ನಡೆದಿದೆ.

ಮರಾಠಿ ಜಾನಪದ ಮ್ಯೂಸಿಕ್​ನಲ್ಲಿ ಈ ಹಾಡು ಮೂಡಿ ಬರುತ್ತಿದೆ. ಈ ಹಾಡಿನ ಶೂಟ್​ಗೆ ಸಿದ್ಧತೆ ನಡೆದಿದೆ. ರಾಜರ ಕಾಲವನ್ನು ರೀ ಕ್ರಿಯೇಟ್ ಮಾಡಬೇಕಾಗಿರುವುದರಿಂದ ಹೆಚ್ಚಿನ ಸಂಖ್ಯೆ ಬ್ಯಾಕ್​ಡ್ಯಾನ್ಸರ್​ಗಳು ಇರಲಿದ್ದಾರೆ. ಬ್ಯಾಕ್​ಗ್ರೌಂಡ್​ನಲ್ಲಿ ಬರೋಬ್ಬರಿ 700ಕ್ಕೂ ಅಧಿಕ ಮಂದಿ ಡ್ಯಾನ್ಸ್ ಮಾಡಲಿದ್ದಾರೆ ಎನ್ನಲಾಗಿದೆ.

ವಿಜಯ್ ಗಂಗೂಲಿ ಅವರು ಈ ಹಾಡಿಗೆ ಕೊರಿಯೋಗ್ರಫಿ ಮಾಡುತ್ತಿದ್ದಾರೆ. ಅವರು ಈ ಮೊದಲು ‘ಸ್ತ್ರೀ 2’ ಸಾಂಗ್​ಗಳನ್ನು ಕೊರಿಯೋಗ್ರಫಿ ಮಾಡಿದ್ದರು. ಈ ಹಾಡಿಗಾಗಿ ಸುಮಾರು 1500 ಜನರು ಒಟ್ಟಿಗೆ ಸೇರಲಿದ್ದಾರೆ. ಹಿನ್ನೆಲೆಯಲ್ಲಿ 700ಕ್ಕೂ ಅಧಿಕ ಜನರು ಕಾಣಿಸಲಿದ್ದಾರೆ.

ಇದನ್ನೂ ಓದಿ: 2.74 ಲಕ್ಷ ರೂಪಾಯಿ ಬೆಲೆಯ ಬ್ಯಾಗ್​ ಹಿಡಿದು ಬಂದ ರಶ್ಮಿಕಾ ಮಂದಣ್ಣ

ಈ ಸಿನಿಮಾದ ಕಥೆ 1681ರಲ್ಲಿ ಸಾಗಲಿದೆ. ಇದಕ್ಕಾಗಿ ಬೃಹತ್ ಸೆಟ್​ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರ ಡಿಸೆಂಬರ್ 6ರಂದು ರಿಲೀಸ್ ಆಗಲಿದೆ. ಅದೇ ದಿನ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಕೂಡ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us