KGF 2: ಒಂದರ ಹಿಂದೊಂದು ಅಪ್ಡೇಟ್ ನೀಡುತ್ತಿದೆ ಕೆಜಿಎಫ್ 2 ತಂಡ; ಈ ಬಾರಿ ಏನು ಸಮಾಚಾರ?

Raveena Tandon | Prashanth Neel: ಕೆಜಿಎಫ್ 2 ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಇತ್ತೀಚೆಗೆ ಚಿತ್ರತಂಡದಿಂದ ಹೊಸ ಸಮಾಚಾರ ಬಂದಿದೆ.

KGF 2: ಒಂದರ ಹಿಂದೊಂದು ಅಪ್ಡೇಟ್ ನೀಡುತ್ತಿದೆ ಕೆಜಿಎಫ್ 2 ತಂಡ; ಈ ಬಾರಿ ಏನು ಸಮಾಚಾರ?
‘ಕೆಜಿಎಫ್ 2’ ಚಿತ್ರದಲ್ಲಿ ರವೀನಾ ಟಂಡನ್, ಯಶ್
Edited By:

Updated on: Feb 08, 2022 | 7:49 PM

‘ಕೆಜಿಎಫ್ 2’ (KGF 2) ಚಿತ್ರತಂಡ ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸ್ಟುಡಿಯೋದಲ್ಲಿ ಚಿತ್ರದ ಡಬ್ಬಿಂಗ್ ಕೆಲಸಗಳು ಭರದಿಂದ ಸಾಗುತ್ತಿದೆ. ಇತ್ತೀಚೆಗಷ್ಟೇ ನಾಯಕ ನಟಿ ಶ್ರೀನಿಧಿ ಶೆಟ್ಟಿ ಡಬ್ಬಿಂಗ್ ಪೂರ್ಣಗೊಳಿಸಿದ್ದರು. ಡಬ್ಬಿಂಗ್ ಸಂದರ್ಭದ ಚಿತ್ರಗಳನ್ನು ಹಂಚಿಕೊಂಡಿದ್ದ ಅವರು, ಚಿತ್ರದ ಬಿಡುಗಡೆಗೆ ಕಾಯುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದರು. ಇದೀಗ ಚಿತ್ರ ತಂಡದಿಂದ ಹೊಸ ಅಪ್ಡೇಟ್ ಬಂದಿದೆ. ಹೌದು. ಕೆಜಿಎಫ್​ 2ನ ಮತ್ತೋರ್ವ ಪ್ರಮುಖ ಪಾತ್ರಧಾರಿ ರವೀನಾ ಟಂಡನ್ (Raveena Tandon) ತಮ್ಮ ಡಬ್ಬಿಂಗ್ ಕೆಲಸಗಳನ್ನು ಪೂರ್ತಿ ಮಾಡಿದ್ದಾರೆ. ಈ ಸಂದರ್ಭದ ಚಿತ್ರಗಳನ್ನು ನಟಿ ಹಂಚಿಕೊಂಡಿದ್ದಾರೆ. ‘ನಿಮ್ಮೊಂದಿಗೆಲ್ಲಾ ಕೆಲಸ ಮಾಡುವುದು ಎಷ್ಟೊಂದು ಖುಷಿಯ ವಿಚಾರ!’ ಎಂದು ರವೀನಾ ಪ್ರಶಾಂತ್ ನೀಲ್ (Prashanth Neel), ಯಶ್ ಹಾಗೂ ಹೊಂಬಾಳೆ ಫಿಲ್ಮ್ಸ್​​ಗೆ ಟ್ಯಾಗ್ ಮಾಡಿದ್ದಾರೆ. ಅಲ್ಲದೇ ಚಿತ್ರತಂಡದ ಬಗ್ಗೆ ಅವರು ಸಖತ್ ಖುಷಿ ಹಂಚಿಕೊಂಡಿದ್ದಾರೆ.

ರವೀನಾ ಟಂಡನ್ ಕೆಜಿಎಫ್ 2ನಲ್ಲಿ ಪ್ರಧಾನ ಮಂತ್ರಿ ರಮಿಕಾ ಸೇನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಉಲ್ಲೇಖಿಸಿರುವ ನಿರ್ದೇಶಕ ಪ್ರಶಾಂತ್ ನೀಲ್, ‘ಕೂಲೆಸ್ಟ್ ಪ್ರೈಮ್ ಮಿನಿಸ್ಟರ್’ ಎಂದು ರವೀನಾಗೆ ಹೊಗಳಿಕೆ ನೀಡಿದ್ದಾರೆ.

ರವೀನಾ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಪ್ರಸ್ತುತ ಕೆಜಿಎಫ್ 2 ಚಿತ್ರತಂಡ ಕರಾವಳಿ ಭಾಗದಲ್ಲೇ ಬೀಡುಬಿಟ್ಟಿದೆ. ಇತ್ತೀಚೆಗಷ್ಟೇ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು, ನಟ ಯಶ್, ಸಂಗೀತ ನಿರ್ದೇಶಕ ರವಿ ಬಸ್ರೂರು ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಪ್ರಸ್ತುತ ರವಿ ಬಸ್ರೂರು ಅವರ ಸ್ಟುಡಿಯೋದಲ್ಲಿ ಡಬ್ಬಿಂಗ್ ಹಾಗೂ ಮ್ಯೂಸಿಕ್ ಕೆಲಸಗಳು ನಡೆಯುತ್ತಿವೆ. ಏಪ್ರಿಲ್ 14ರಂದು ಚಿತ್ರ ಎಲ್ಲೆಡೆ ತೆರೆಕಾಣಲಿದೆ.

‘ನಾನು ಇಂದಿರಾ ಗಾಂಧಿ ಪಾತ್ರ ನಿರ್ವಹಿಸುತ್ತಿಲ್ಲ’: ರವೀನಾ ಟಂಡನ್ ಸ್ಪಷ್ಟನೆ

ಕೆಜಿಎಫ್ 2ನಲ್ಲಿ ರವೀನಾ ಟಂಡನ್ ಪ್ರಧಾನ ಮಂತ್ರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪಾತ್ರ ಇಂದಿರಾ ಗಾಂಧಿ ಪಾತ್ರಕ್ಕೆ ಹೋಲಿಕೆ ಇದೆ ಎಂದು ಸುದ್ದಿಯಾಗಿತ್ತು. ಆದರೆ ಇದನ್ನು ರವೀನಾ ಟಂಡನ್ ನಿರಾಕರಿಸಿದ್ದಾರೆ. ಈ ಚಿತ್ರದಲ್ಲಿ ಇಂದಿರಾ ಗಾಂಧಿ ಬಗ್ಗೆ ಏನೂ ಇಲ್ಲ. ನನ್ನ ನೋಟ ಅಥವಾ ನನ್ನ ಪಾತ್ರ ಅವರಿಂದ ಸ್ಪೂರ್ತಿ ಪಡೆದಿಲ್ಲ. ಕೆಜಿಎಫ್ 2 ಚಿತ್ರವು 80 ರ ದಶಕದ ಕಥೆಯನ್ನು ಆಧಾರಿಸಿದೆ. ಚಿತ್ರದಲ್ಲಿ ನಾನು ಪ್ರಧಾನ ಮಂತ್ರಿಯಾಗಿ ನಟಿಸುತ್ತಿದ್ದೇನೆ. ಅದನ್ನ ಹೊರತು ಪಡಿಸಿ ನಾನು ಚಿತ್ರದಲ್ಲಿ ಇಂದಿರಾ ಗಾಂಧಿಜಿ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ ಎಂದು ಅನೇಕ ಊಹಾಪೋಹಗಳು ಕೇಳಿಬರುತ್ತಿರುವುದು ಸುಳ್ಳು ಎಂದು ಅವರು ಹೇಳಿದ್ದರು.

ಇದನ್ನೂ ಓದಿ:

ಯಶ್​ ಟೆಂಪಲ್​ ರನ್​; ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ ‘ಕೆಜಿಎಫ್ 2’​ ತಂಡ

‘ಕೆಜಿಎಫ್​ 2’ ಶೂಟಿಂಗ್​ ಸೆಟ್​ನಲ್ಲಿ ರವೀನಾ ಟಂಡನ್​ಗೆ ನಿರಾಸೆ; ಓಪನ್​ ಆಗಿಯೇ ಹೇಳಿಕೊಂಡ ನಟಿ