ಇತ್ತೀಚೆಗಷ್ಟೇ ರಾಷ್ಟ್ರ ಪ್ರಶಸ್ತಿ ಘೋಷಣೆ ಆಗಿದೆ. ‘ಕೆಜಿಎಫ್ 2’ ಚಿತ್ರಕ್ಕೆ ಎರಡು ಪ್ರಶಸ್ತಿಗಳು ಸಿಕ್ಕಿವೆ. ಈ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್ ಖ್ಯಾತಿ ಹೆಚ್ಚಾಗಿದೆ. ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಪ್ರಶಾಂತ್ ನೀಲ್ ಅವರನ್ನು ಭೇಟಿ ಮಾಡಲು ರವೀನಾ ಟಂಡನ್ ಪತಿ ಅನಿಲ್ ತಡಾನಿ ಹೈದರಾಬಾದ್ಗೆ ಓಡಿದ್ದಾರಂತೆ. ಈ ವಿಚಾರವನ್ನು ರವೀನಾ ತಿಳಿಸಿದ್ದಾರೆ. ಬಾಲಿವುಡ್ನಲ್ಲಿ ಪ್ರಶಾಂತ್ ನೀಲ್ ನಿರ್ದೇಶನ ಮಾಡುವ ಮುಂದಿನ ಚಿತ್ರಗಳ ಹಂಚಿಕೆ ಹಕ್ಕನ್ನು ತಮಗೆ ನೀಡಬೇಕು ಎಂದು ಅವರು ಕೋರಿದ್ದಾರೆ ಎನ್ನಲಾಗುತ್ತಿದೆ.
‘ಕೆಜಿಎಫ್ 2’ ಚಿತ್ರದಲ್ಲಿ ರವೀನಾ ಟಂಡನ್ ನಟಿಸಿದ್ದರು. ಅವರ ಪತಿ ಅನಿಲ್ ಅವರು ಈ ಚಿತ್ರವನ್ನು ಹಿಂದಿಯಲ್ಲಿ ಹಂಚಿಕೆ ಮಾಡಿದ್ದರು. ಈ ಚಿತ್ರ ಹಿಂದಿ ಭಾಗದಲ್ಲಿ 500 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಕಾರಣಕ್ಕೆ ಅವರಿಗೆ ಸಿನಿಮಾ ಮೇಲೆ ವಿಶೇಷ ಪ್ರೀತಿ. ಹೀಗಾಗಿ, ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಅವರು ಹೈದರಾಬಾದ್ಗೆ ಹಾರಿದ್ದಾರೆ.
ಈ ಬಗ್ಗೆ ಅವರು ನ್ಯೂಸ್ 18 ಇಂಗ್ಲಿಷ್ ಜೊತೆ ರವೀನಾ ಮಾತನಾಡಿದ್ದಾರೆ. ‘ಇದು ನಿಜಕ್ಕೂ ಹೆಮ್ಮೆಯ ವಿಚಾರ. ನನಗೆ ಟೀಂನ ಯಾರ ಜೊತೆಯೂ ಮಾತನಾಡೋಕೆ ಸಾಧ್ಯವಾಗಿಲ್ಲ. ನನ್ನ ಪತಿ ಪ್ರಶಾಂತ್ ನೀಲ್ ಅವರನ್ನು ಭೇಟಿ ಮಾಡಲು ಹೈದರಾಬಾದ್ಗೆ ತೆರಳಿದ್ದಾರೆ’ ಎಂದಿದ್ದಾರೆ ಅವರು. ರವೀನಾ ಟಂಡನ್ ಅವರಿಗೆ 2001ರಲ್ಲಿ ‘ದಮನ್’ ಚಿತ್ರಕ್ಕೆ ಅತ್ಯುತ್ತಮ ನಟಿ ಅವಾರ್ಡ್ ಸಿಕ್ಕಿತ್ತು.
ಇದನ್ನೂ ಓದಿ: ಶಾರುಖ್ ಖಾನ್ ಜತೆಗಿನ ಸಿನಿಮಾವನ್ನೂ ಮುಲಾಜಿಲ್ಲದೇ ರಿಜೆಕ್ಟ್ ಮಾಡಿದ್ದ ರವೀನಾ ಟಂಡನ್; ಕಾರಣ?
‘ಪ್ರಶಸ್ತಿಗಳು ಈಗಲೂ ನನಗೆ ಎಗ್ಸೈಟಿಂಗ್ ಅನಿಸುತ್ತವೆ. ಕೆಜಿಎಫ್ ಎರಡನೇ ಚಾಪ್ಟರ್ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡಿತು, ವಿಮರ್ಶಕರಿಂದಲೂ ಮೆಚ್ಚುಗೆ ಪಡೆಯಿತು. ಈಗ ಸಿನಿಮಾಗೆ ಎರಡು ರಾಷ್ಟ್ರ ಪ್ರಶಸ್ತಿ ಪಡೆದಿರೋದು ನಿಜಕ್ಕೂ ಖುಷಿಯ ವಿಚಾರ’ ಎಂದಿದ್ದಾರೆ ರವೀನಾ.
‘ಕೆಜಿಎಫ್ 2’ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಇದೆ. ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ. ಈ ಸಂಸ್ಥೆ ಬಂಡವಾಳ ಹೂಡಿದ ಸಿನಿಮಾಗಳಿಂದ ನಾಲ್ಕು ಅವಾರ್ಡ್ಗಳು ಲಭ್ಯವಾಗಿವೆ. ‘ಕಾಂತಾರ’ ಚಿತ್ರಕ್ಕೆ 2 ಅವಾರ್ಡ್ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.