ಕಾಪಿರೈಟ್ ಉಲ್ಲಂಘನೆ ಕೇಸ್: 20 ಲಕ್ಷ ರೂ ಠೇವಣಿ ಇಡುವಂತೆ ರಕ್ಷಿತ್​ ಶೆಟ್ಟಿಗೆ ಕೋರ್ಟ್​ ಆದೇಶ

‘ಬ್ಯಾಚುಲರ್​ ಪಾರ್ಟಿ’ ಸಿನಿಮಾದಲ್ಲಿ ಎರಡು ಹಾಡುಗಳನ್ನು ಬಳಸಿದ್ದಕ್ಕೆ ನಿರ್ಮಾಪಕ ರಕ್ಷಿತ್​ ಶೆಟ್ಟಿ ಅವರಿಗೆ ಸಂಕಷ್ಟ ಎದುರಾಗಿದೆ. ರಕ್ಷಿತ್​ ಶೆಟ್ಟಿ ಅವರ ‘ಪರಂವಾ ಸ್ಟುಡಿಯೋಸ್​’ ವಿರುದ್ಧ ‘ಎಂಆರ್​ಟಿ ಮ್ಯೂಸಿಕ್​’ ಕಂಪನಿ ಕೇಸ್​ ದಾಖಲಿಸಿದ್ದು, ಕಾನೂನಿನ ಸಮರ ನಡೆಯುತ್ತಿದೆ. ದೆಹಲಿ ಹೈಕೋರ್ಟ್​ ನೀಡಿದ ಆದೇಶದ ಬಗ್ಗೆ ‘ಎಂಆರ್​ಟಿ ಮ್ಯೂಸಿಕ್​’ ಮಾಹಿತಿ ಹಂಚಿಕೊಂಡಿದೆ.

ಕಾಪಿರೈಟ್ ಉಲ್ಲಂಘನೆ ಕೇಸ್: 20 ಲಕ್ಷ ರೂ ಠೇವಣಿ ಇಡುವಂತೆ ರಕ್ಷಿತ್​ ಶೆಟ್ಟಿಗೆ ಕೋರ್ಟ್​ ಆದೇಶ
ರಕ್ಷಿತ್​ ಶೆಟ್ಟಿ
Follow us
Malatesh Jaggin
| Updated By: ಮದನ್​ ಕುಮಾರ್​

Updated on: Aug 17, 2024 | 8:34 PM

ನಟ, ನಿರ್ಮಾಪಕ ರಕ್ಷಿತ್​ ಶೆಟ್ಟಿ ಹಾಗೂ ‘ಎಂಆರ್​ಟಿ ಮ್ಯೂಸಿಕ್​’ ಕಂಪನಿ ನಡುವಿನ ಕಾನೂನು ಜಟಾಪಟಿ ಮುಂದುವರಿದಿದೆ. ರಕ್ಷಿತ್ ಶೆಟ್ಟಿ ಅವರು ‘ಪರಂವಾ ಸ್ಟುಡಿಯೋಸ್​’ ಮೂಲಕ ನಿರ್ಮಾಣ ಮಾಡಿದ ‘ಬ್ಯಾಚುಲರ್​ ಪಾರ್ಟಿ’ ಸಿನಿಮಾದಲ್ಲಿ ‘ಎಂಆರ್​ಟಿ ಮ್ಯೂಸಿಕ್​’ ಸಂಸ್ಥೆಗೆ ಸೇರಿದ ಎರಡು ಹಾಡುಗಳನ್ನು ಅನುಮತಿ ಇಲ್ಲದೇ ಬಳಕೆ ಮಾಡಿಕೊಂಡಿದ್ದಕ್ಕೆ ಕೇಸ್​ ಹಾಕಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್​ ಆದೇಶ ನೀಡಿದೆ. ಕೋರ್ಟ್​ನಲ್ಲಿ 20 ಲಕ್ಷ ರೂಪಾಯಿ ಠೇವಣಿ ಇಡುವಂತೆ ರಕ್ಷಿತ್​ ಶೆಟ್ಟಿ ಹಾಗೂ ‘ಪರಂವಾ ಸ್ಟುಡಿಯೋಸ್​’ ಸಂಸ್ಥೆಗೆ ಸೂಚಿಸಲಾಗಿದೆ.

ದೆಹಲಿ ಹೈಕೋರ್ಟ್​ ನೀಡಿರುವ ಆದೇಶಕ್ಕೆ ಸಂಬಂಧಿಸಿದಂತೆ ‘ಎಂಆರ್​ಟಿ ಮ್ಯೂಸಿಕ್​’ ಕಂಪನಿಯು ಪ್ರಕಟಣೆ ಮೂಲಕ ಮಾಹಿತಿ ಹಂಚಿಕೊಂಡಿದೆ. ‘ಬ್ಯಾಚುಲರ್​ ಪಾರ್ಟಿ’ ಕನ್ನಡ ಸಿನಿಮಾ ಈ ವರ್ಷ ಜನವರಿಯಲ್ಲಿ ರಿಲೀಸ್ ಆಗಿತ್ತು. ಆ ಸಿನಿಮಾದಲ್ಲಿ ‘ನ್ಯಾಯ ಎಲ್ಲಿದೆ..’ ಹಾಗೂ ‘ಒಮ್ಮೆ ನಿನ್ನನ್ನು..’ ಹಾಡುಗಳನ್ನು ಬಳಕೆ ಮಾಡಿಕೊಂಡಿದ್ದಕ್ಕೆ ‘ಎಂಆರ್​ಟಿ ಮ್ಯೂಸಿಕ್​’ ಕೇಸ್​ ದಾಖಲಿಸಿತ್ತು.

ಕಾಪಿರೈಟ್​ ಉಲ್ಲಂಘನೆ ಆರೋಪಕ್ಕೆ ನ್ಯಾಯಾಲಯದಲ್ಲೇ ಉತ್ತರ ನೀಡುವುದಾಗಿ ರಕ್ಷಿತ್​ ಶೆಟ್ಟಿ ಅವರು ನಿರ್ಧರಿಸಿದ್ದರು. ಆ ಕುರಿತು ಜನರಿಗೆ ಮಾಹಿತಿ ನೀಡುವ ಸಲುವಾಗಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದರು. ಸಿನಿಮಾದಲ್ಲಿ ಆ ಎರಡು ಹಾಡುಗಳು ಹೀಗೆ ಬಳಕೆ ಆಗಿದ್ದವು ಎಂಬುದನ್ನು ತಿಳಿಸಲು ಅವರು ವಿಡಿಯೋ ತುಣುಕನ್ನು ಹಂಚಿಕೊಂಡಿದ್ದರು. ಅದನ್ನು ತೆಗೆಯುವಂತೆ ಕೋರ್ಟ್​ ಆದೇಶಿಸಿದೆ.

‘ಸಿನಿಮಾದಲ್ಲಿ ಹಾಡುಗಳನ್ನು ಅನುಮತಿ ಇಲ್ಲದೇ ಬಳಕೆ ಮಾಡಿದ್ದು ಮಾತ್ರವಲ್ಲದೇ ಆ ಹಾಡಿನ ತುಣುಕುಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುವ ಮೂಲಕ ರಕ್ಷಿತ್​ ಶೆಟ್ಟಿ ಮತ್ತು ಪರಂವಾ ಸ್ಟುಡಿಯೋಸ್​ ಕಡೆಯಿಂದ ಮತ್ತೊಮ್ಮೆ ಕಾಪಿರೈಟ್​ ಉಲ್ಲಂಘನೆ ಆಗಿದೆ’ ಎಂದು ಎಂಆರ್​ಟಿ ಮ್ಯೂಸಿಕ್​ ಕಂಪನಿಯು ನ್ಯಾಯಾಲಯದಲ್ಲಿ ವಾದ ಮಂಡಿಸಿದೆ. ಮುಂಚಿತವಾಗಿ ನೋಟಿಸ್​ ನೀಡಿದ್ದರೂ ಕೂಡ ರಕ್ಷಿತ್​ ಶೆಟ್ಟಿ ಅಥವಾ ಪರಂವಾ ಸ್ಟುಡಿಯೋಸ್​ನವರು ವಿಚಾರಣೆಗಾಗಿ ಕೋರ್ಟ್​ಗೆ ಹಾಜರಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಕಾಪಿರೈಟ್​ ಕೇಸ್​; ಕೋರ್ಟ್​ನಲ್ಲೇ ಇತ್ಯರ್ಥ ಮಾಡಿಕೊಳ್ಳಲು ರಕ್ಷಿತ್​ ಶೆಟ್ಟಿ ನಿರ್ಧಾರ

ನಿರ್ಮಾಪಕನಾಗಿ ರಕ್ಷಿತ್​ ಶೆಟ್ಟಿ ಅವರು ಸಕ್ರಿಯರಾಗಿದ್ದಾರೆ. ಈ ಮೊದಲು ಕೂಡ ಹಾಡುಗಳಿಗೆ ಸಂಬಂಧಿಸಿದಂತೆ ಅವರು ಕೋರ್ಟ್​ ಮೆಟ್ಟಿಲು ಏರಿದ್ದರು. ಪದೇಪದೇ ಈ ರೀತಿ ಕೇಸ್​ ದಾಖಲಾಗುತ್ತಿರುವುದರಿಂದ ಕಾಪಿರೈಟ್​ ಬಗ್ಗೆ ಸ್ಪಷ್ಟತೆ ಸಿಗಲಿ ಎಂಬ ಉದ್ದೇಶ ರಕ್ಷಿತ್ ಶೆಟ್ಟಿ ಅವರದ್ದು. ಈಗ ದೆಹಲಿ ಕೋರ್ಟ್​ ಆದೇಶದ ಬಗ್ಗೆ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು