ಮುಖ್ಯಮಂತ್ರಿ ಚಂದ್ರುಗೆ ಲಂಡನ್ನಲ್ಲಿ ಸಿಕ್ಕಿದ್ದ ಶಂಕರ್ ನಾಗ್: ನಂತರ ಆಗಿದ್ದೇನು?
Shankar Nag: ಶಂಕರ್ ನಾಗ್ ಅವರದ್ದು ಅದೆಂಥಹಾ ದೂರದೃಷ್ಟಿ, ಎಷ್ಟೆಲ್ಲ ಯೋಜನೆಗಳು, ಅವಕ್ಕಾಗಿ ಅವರು ಮಾಡುತ್ತಿದ್ದ ಕೆಲಸಗಳು ಇದಕ್ಕೆ ಉದಾಹರಣೆಯಾಗಿ ಮುಖ್ಯ ಮಂತ್ರಿ ಚಂದ್ರು ಅವರು ಘಟನೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ.
ನಟ, ನಿರ್ದೇಶಕ ಶಂಕರ್ ನಾಗ್ ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಕಲಾವಿದರಲ್ಲಿ ಒಬ್ಬರು. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಇಂದು ನಮ್ಮ ಜೊತೆ ಇಲ್ಲ. ಅವರು ಅಂದು ನೀಡಿದ ಹಲವು ಸಿನಿಮಾಗಳು ಈಗಲೂ ಅನೇಕರ ಫೇವರಿಟ್ ಎನಿಸಿಕೊಂಡಿದೆ. ಶಂಕರ್ ನಾಗ್ ಅವರು ಹಲವರ ಮೆಚ್ಚುಗೆಯ ನಟ. ಅವರು ದೇಶ-ವಿದೇಶ ಓಡಾಡಿ ಚಿತ್ರರಂಗಕ್ಕಾಗಿ, ರಾಜ್ಯದ ಏಳ್ಗೆಗೆ ಹೊಸ ಯೋಜನೆ ತರಲು ಅವರು ಮುಂದಾಗಿದ್ದರು. ಮುಖ್ಯಮಂತ್ರಿ ಚಂದ್ರು ಅವರು ಲಂಡನ್ ತೆರಳಿದ್ದಾಗ ಅಲ್ಲಿ ಶಂಕರ್ ನಾಗ್ ಸಿಕ್ಕಿದ್ದರು. ಈ ಘಟನೆ ಬಗ್ಗೆ ಚಂದ್ರು ಮಾತನಾಡಿದ್ದಾರೆ.
‘ಮುಖ್ಯಮಂತ್ರಿ’ ನಾಟಕ ಭಾರೀ ಫೇಮಸ್ ಆಯಿತು. ಈ ನಾಟಕದಿಂದಲೇ ಅವರಿಗೆ ಮುಖ್ಯಮಂತ್ರಿ ಎನ್ನುವ ಬಿರುದು ಸಿಕ್ಕಿತ್ತು. ಈ ನಾಟಕ ಹಲವು ದೇಶಗಳಲ್ಲಿ ಪ್ರದರ್ಶನ ಕಂಡಿತ್ತು. ಈಗಲೂ ನಾಟಕ ಪ್ರದರ್ಶನ ಕಾಣುತ್ತಿದೆ. ಈ ನಾಟಕದ ಬಗ್ಗೆ ಮುಖ್ಯಮಂತ್ರಿ ಚಂದ್ರು ಅಪರೂಪದ ವಿಚಾರ ಹೇಳಿದ್ದರು. ಲಂಡನ್ನಲ್ಲಿ ನಡೆದ ಘಟನೆ ಬಗ್ಗೆ ಅವರು ಕಲಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ವಿವರಿಸಿದ್ದಾರೆ.
ಇದನ್ನೂ ಓದಿ:‘ಈ ಪ್ರಶಸ್ತಿಯನ್ನು ಶಂಕರ್ ನಾಗ್ಗೆ ಅರ್ಪಿಸುತ್ತೇನೆ’; ಭಾವುಕರಾಗಿ ಪತ್ರ ಬರೆದ ರಿಷಬ್ ಶೆಟ್ಟಿ
‘86ರ ಸಮಯ. ಮ್ಯಾಂಚೆಸ್ಟರ್ಗೆ ಹೋಗಬೇಕಿತ್ತು. ರಿವರ್ರಾಂಧೆ ಹೋಟೆಲ್ಗೆ ಹೋಗಬೇಕಿತ್ತು. ನಾವು ಟ್ರೇನ್ ಹತ್ತಿದೆವು. ಯಾವ ಸ್ಟಾಪ್ಗೆ ಇಳಿಯಬೇಕೋ ಅದಕ್ಕೂ ಮುಂದಿನ ಸ್ಟಾಪ್ನಲ್ಲಿ ಇಳಿದಿದ್ದೆವು. ನಂತರ ಇಳಿದು ಹೋಟೆಲ್ಗೆ ಹೊರಟೆವು’ ಎಂದು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ ಮುಖ್ಯಮಂತ್ರಿ ಚಂದ್ರು.
‘ಲಂಡನ್ನಲ್ಲಿ ಶಂಕರ್ ನಾಗ್ ಸಿಕ್ಕಿದ್ದರು. ಭಾರತದ ಆಹಾರ ಸಿಗುತ್ತದೆ ಎಂದು ಹೋದೆವು. ಇನ್ನೇನು ಆರ್ಡರ್ ಹೇಳಬೇಕು ಎನ್ನುವಾಗ ಶಂಕರ್ನಾಗ್ ಕಂಡರು. ಮುಖ್ಯಮಂತ್ರಿ ಚಂದ್ರು ಬಾ ಇಲ್ಲಿ ಎಂದರು. ಸಿವಿಎನ್ ಶಾಸ್ತ್ರಿ ಹಾಗೂ ಶಂಕರ್ ನಾಗ್ ಬಂದಿದ್ದರು. ಲಂಡನ್ನ ಅಂಡರ್ಗ್ರೌಂಡ್ ಟ್ರೇನ್ನ ನೋಡಿಕೊಂಡು ಹೋಗೋಕೆ ಶಂಕರ್ ನಾಗ್ ಬಂದಿದ್ದರು. ಅದನ್ನು ಬೆಂಗಳೂರಲ್ಲಿ ಮಾಡಿಸೋ ಆಲೋಚನೆ ಅವರಿಗೆ ಇತ್ತು. ಆ ಬಗ್ಗೆ ಅವರಿಗೆ ಹುಚ್ಚಿತ್ತು. ನನ್ನನ್ನು ಕರೆದರು. ಅವರ ಜೊತೆ ಸರಿಯಾಗಿ ತಿಂದೆವು. ಅವರೇ ಬಿಲ್ ಕೊಟ್ಟರು. ಅವರ ಕಾರಲ್ಲೇ ಹೋಟೆಲ್ಗೆ ಬಿಟ್ಟರು’ ಎಂದು ನೆನಪು ಮಾಡಿಕೊಂಡಿದ್ದಾರೆ ಅವರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:07 pm, Sat, 17 August 24