ಕೃಷಿ ಕೆಲಸದಲ್ಲಿ ಬ್ಯುಸಿ ಆದ ಖ್ಯಾತ ಫೈಟ್ ಮಾಸ್ಟರ್ ರವಿವರ್ಮ
ರವಿ ವರ್ಮ ತಮ್ಮ ಊರಿಗೆ ತೆರಳಿ ತೋಟದ ಕೆಲಸ ಮಾಡಿಕೊಂಡು ಹಾಯಾಗಿ ದಿನ ಕಳೆಯುತ್ತಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೊರೊನಾ ವೈರಸ್ನಿಂದ ಸಿನಿಮಾ ಕೆಲಸಗಳು ಅರ್ಧಕ್ಕೆ ನಿಂತಿವೆ. ಕೆಲ ಸ್ಟಾರ್ಗಳು ಮನೆಯಲ್ಲಿ ಕುಳಿತರೆ ಇನ್ನೂ, ಕೆಲ ಸ್ಟಾರ್ಗಳು ಕೊವಿಡ್ ವಾರಿಯರ್ ಆಗಿದ್ದಾರೆ. ಕಷ್ಟದಲ್ಲಿರುವವರ ಸಹಾಯಕ್ಕೆ ನಿಂತಿದ್ದಾರೆ. ಈ ಮಧ್ಯೆ ಕೆಲವರು ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡದ ಖ್ಯಾತ ಫೈಟ್ ಮಾಸ್ಟರ್ ರವಿವರ್ಮ ಲಾಕ್ಡೌನ್ ಸಂದರ್ಭದಲ್ಲಿ ಕೃಷಿ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ರವಿವರ್ಮ ತಮ್ಮ ಊರಿಗೆ ತೆರಳಿ ತೋಟದ ಕೆಲಸ ಮಾಡಿಕೊಂಡು ಹಾಯಾಗಿ ದಿನ ಕಳೆಯುತ್ತಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅನೇಕರು ರವಿವರ್ಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಹುಬೇಡಿಕೆಯ ಸಾಹಸ ನಿರ್ದೇಶಕರ ಪೈಕಿ ರವಿ ವರ್ಮ ಹೆಸರು ಕೂಡ ಮುಂಚೂಣಿಯಲ್ಲಿದೆ. ಇವರು ಕನ್ನಡ, ಹಿಂದಿ, ಮಲಯಾಳಂ, ತೆಲುಗು, ತಮಿಳು ಭಾಷೆಯ ಅನೇಕ ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ:
Ashika Ranganath: ‘ಚುಟುಚುಟು’ ಬೆಡಗಿ ಆಶಿಕಾಗೆ ಈಗ ತೋಟದಲ್ಲಿ ಕೆಲಸ; ಲಾಕ್ಡೌನ್ನಲ್ಲಿ ಹೊಸ ಕಸುಬು