ಬೆಂಗಳೂರು:ನಟಿ ರಾಗಿಣಿಯನ್ನು ಅವರ ಯಲಹಂಕದ ಮನೆಯಿಂದ ಇಂದು ಬೆಳಗ್ಗೆ ಕರೆತಂದ ಸಿಸಿಬಿ ಅಧಿಕಾರಿಗಳು ಚಾಮರಾಜಪೇಟೆಯಲ್ಲಿರುವ ತಮ್ಮ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. CCB ತಂಡದ ಲೇಡಿ ಇನ್ಸ್ಪೆಕ್ಟರ್ ಅಂಜುಮಾಲಾ ನಾಯಕ್, DCP ರವಿಕುಮಾರ್ ಮತ್ತು ACP ಗೌತಮ್‌ರಿಂದ ನಟಿ ರಾಗಿಣಿ ದ್ವಿವೇದಿ ವಿಚಾರಣೆ ನಡೆಸಲಾಗುತ್ತಿದೆ.
ಇದಕ್ಕೂ ಮುನ್ನ ನಟಿ ರಾಗಿಣಿ ನಿವಾಸದ ಮೇಲೆ ದಾಳಿ ಮಾಡಲು ಕಾರಣವಾಗಿದ್ದು ನಟಿಯ ಆಪ್ತ ರವಿಶಂಕರ್ ನಿನ್ನೆ ರಾತ್ರಿ ಪೊಲೀಸ್ ವರ್ಕೌಟ್ ಬಳಿಕ ನೀಡಿದ್ದ ಹೇಳಿಕೆಯಂತೆ.. ಹೌದು, ರವಿಶಂಕರ್ ನೀಡಿದ ಮಾಹಿತಿಯಿಂದ ರಾಗಿಣಿ ತಗಲಾಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಿಸಿಬಿಯಿಂದ ನಿನ್ನೆ ರಾತ್ರಿಯಿಡಿ ರವಿಶಂಕರ್ ವಿಚಾರಣೆ ನಡೆಸಲಾಗಿದ್ದು ಆರಂಭದಲ್ಲಿ ದಾರಿ ತಪ್ಪಿಸುವ ಹೇಳಿಕೆ ನೀಡಿದ ರವಿಶಂಕರ್ ಬಳಿಕ ಆತನ ಮೊಬೈಲ್ನಲ್ಲಿ ಪಡೆದ ಮಾಹಿತಿಯನ್ನು CCB ಅಧಿಕಾರಿಗಳು ಮುಂದಿಟ್ಟಾಗ ಎಲ್ಲವನ್ನೂ ಬಾಯಿಬಿಟ್ಟಿದ್ದಾನಂತೆ.
ರಾತ್ರಿ ರವಿಶಂಕರ್ನನ್ನ ತೀವ್ರ ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು ಆತನಿಗೆ ಪೊಲೀಸ್ ಭಾಷೆಯಲ್ಲಿ ಪ್ರಶ್ನೆ ಕೇಳಿದ್ದಾರಂತೆ. ವೀಡ್ ಬಗ್ಗೆ ಮಾಹಿತಿ ನೀಡುವಂತೆ ಪ್ರಶ್ನಿಸಿದ್ದ ಅಧಿಕಾರಿಗಳಿಗೆ ಮೊದಲು ನನಗೇನೂ ಗೊತ್ತಿಲ್ಲವೆಂದಿದ್ದ ಆರೋಪಿ ರವಿಶಂಕರ್ ಬಳಿಕ ನಿಧಾನವಾಗಿ ಹಲವು ವಿಚಾರ ಬಾಯ್ಬಿಟ್ಟನಂತೆ.
ಹೀಗೆ ಹಲವು ರೀತಿಯ ವಿಚಾರಣೆ ಬಳಿಕ ಡ್ರಗ್ಸ್ ಬಗ್ಗೆ ಮಾಹಿತಿ ನೀಡಿದ ರವಿಶಂಕರ್ ಇದೇ ವೇಳೆ ರಾಗಿಣಿಯ ವಿಚಾರವನ್ನೂ ಬಹಿರಂಗ ಪಡಿಸಿದ್ದಾನೆ ಎಂದು ತಿಳಿದುಬಂದಿದೆ. ನೇರವಾಗಿ ನನಗೆ ಗೊತ್ತಿಲ್ಲ. ಆದರೆ, ಕೆಲ ಪಾರ್ಟಿಗಳಲ್ಲಿ ರಾಗಿಣಿ ಮತ್ತು ನಾನು ಗಾಂಜಾ ಸೇವಿಸುತ್ತಿದ್ದೆವು. ಆ ಪಾರ್ಟಿಗಳಲ್ಲಿ ಹಲವು ಗಣ್ಯರ ಮಕ್ಕಳು ಭಾಗಿಯಾಗುತ್ತಿದ್ದರು. ಅಪರೂಪಕ್ಕೆ ಒಮ್ಮೆ ಪಾರ್ಟಿಗಳಲ್ಲಿ ಡ್ರಗ್ಸ್ ಸೇವಿಸಿದ್ದಾಗಿ ಹೇಳಿಕೆ ಕೊಟ್ಟಿದ್ದಾನಂತೆ.
ಆದರೆ, ಡ್ರಗ್ಸ್ ಸಪ್ಲೈ ಮಾಡುವವರು ಯಾರು ಅನ್ನೋದು ಗೊತ್ತಿಲ್ಲ. ನಾನೂ ಯಾರಿಗೂ ಡ್ರಗ್ಸ್ ಸಪ್ಲೈ ಮಾಡಿಲ್ಲವೆಂದು ಒಪ್ಪಿಕೊಂಡಿದ್ದಾನಂತೆ. ಕೇವಲ ಪಾರ್ಟಿಗಳಲ್ಲಿ ನಾನು ಡ್ರಗ್ಸ್ ಸೇವನೆ ಮಾಡಿದ್ದೇನೆ ಎಂದು ಹೇಳಿದ್ದಾನಂತೆ.
ಇದನ್ನೂ ಓದಿ: ಸಿಸಿಬಿ ದಾಳಿ ಬಳಿಕ ಬಯಲಾಗುತ್ತಿದೆ ರೋಚಕ ಕಹಾನಿ, ರಾಗಿಣಿ ವಶಕ್ಕೆ ಪಡೆಯುವ ಸಾಧ್ಯತೆ
Published On - 12:12 pm, Fri, 4 September 20