ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಪುತ್ರ ನವೀನ್ ತಮ್ಮ ಬಹುಕಾಲದ ಗೆಳತಿ ಮೋನಿಕಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Doctors Family..
ತಂದೆ ತಾಯಿ ಜೊತೆಗೆ ಅಮೇರಿಕಾದಲ್ಲೇ ವಾಸವಾಗಿರುವ ನವೀನ್ ಅಲ್ಲಿ ಸರ್ಜನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೆ ವಧು ಮೋನಿಕಾ ಗುಜರಾತಿ ಮೂಲದವರಾಗಿದ್ದು, ಅಮೆರಿಕಾದಲ್ಲಿ ಡಾಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕಾಗೋದಲ್ಲಿ ಸರಳವಾಗಿ ಮದುವೆ ಆಗುತ್ತಿರುವ ಈ ಜೋಡಿಗೆ ಶುಭ ಹಾರೈಸಲು ಸಮೀಪದ ಕುಟುಂಬಸ್ಥರು ಮಾತ್ರ ಭಾಗಿ ಆಗಿದ್ರು.
ಇನ್ನು ಸಂಗೀತ ನಿರ್ದೇಶಕ ಮನೋಮೂರ್ತಿ ಕನ್ನಡದಲ್ಲಿ ಸಾಕಷ್ಟು ಹಿಟ್ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅವುಗಳಲ್ಲಿ ಮುಂಗಾರು ಮಳೆ, ಮಿಲನ, ಅಮೃತಧಾರೆ ಹಿಟ್ ಚಿತ್ರಗಳು ಸೇರಿವೆ.
ಕೊರೊನಾ ಹೊಸ ರೂಪಾಂತರ: ಲಂಡನ್ನಲ್ಲಿ ಶೂಟಿಂಗ್ ಮುಗಿಸಿ ಬಂದಿರೋ ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದೇನು?
Published On - 12:23 pm, Tue, 22 December 20