ನ್ಯಾಯಾಲಯದಲ್ಲಿ ಇಂದು ನಡೆದಿದ್ದೇನು? ವಿವರಿಸಿದ ದರ್ಶನ್ ಪರ ವಕೀಲ

|

Updated on: Jun 15, 2024 | 8:37 PM

ರೇಣುಕಾ ಸ್ವಾಮಿ ಪ್ರಕರಣದ ಆರೋಪಿ ದರ್ಶನ್ ತೂಗುದೀಪ, ಪವಿತ್ರಾ ಗೌಡ ಹಾಗೂ ಇತರರನ್ನು ಮತ್ತೆ ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ. ಈ ಬಗ್ಗೆ ದರ್ಶನ್ ಪರ ವಕೀಲರು ಪ್ರತಿಕ್ರಿಯಿಸಿದ್ದಾರೆ. ನ್ಯಾಯಾಲಯದಲ್ಲಿ ನಡೆದ ಪ್ರಕ್ರಿಯೆಗಳನ್ನು ವಿವರಿಸಿದ್ದಾರೆ.

ನ್ಯಾಯಾಲಯದಲ್ಲಿ ಇಂದು ನಡೆದಿದ್ದೇನು? ವಿವರಿಸಿದ ದರ್ಶನ್ ಪರ ವಕೀಲ
ನ್ಯಾಯಾಲಯದಲ್ಲಿ ಹಿನ್ನಡೆ, ದರ್ಶನ್, ಪವಿತ್ರಾ ಗೌಡ ವಕೀಲರು ಹೇಳಿದ್ದೇನು?
Follow us on

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ದರ್ಶನ್, ಪವಿತ್ರಾ ಗೌಡ ಹಾಗೂ ಇನ್ನೂ ಹಲವು ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಮುಗಿಯುತ್ತಿದ್ದ ಕಾರಣ ಒಂದು ದಿನ ಮುಂಚಿತವಾಗಿ ಇಂದು (ಜೂನ್ 15) ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪೊಲೀಸರು, ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿಯನ್ನು ಮುಂದುವರೆಸುವಂತೆ ಮನವಿ ಮಾಡಿದ್ದರು, ದರ್ಶನ್, ಪವಿತ್ರಾ ಗೌಡ ಪರ ವಕೀಲರು ನ್ಯಾಯಾಲಯದಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸಿದರಾದರೂ ಪೊಲೀಸರ ಮನವಿಗೆ ಓಗೊಟ್ಟ ನ್ಯಾಯಾಲಯವು, ಮತ್ತೆ ಐದು ದಿನಗಳ ಕಾಲ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.

ನ್ಯಾಯಾಲಯದಲ್ಲಿ ಇಂದು (ಜೂನ್ 15) ನಡೆದ ಪ್ರಕ್ರಿಯೆಗಳ ಬಗ್ಗೆ ಮಾಧ್ಯಮದವರೊಟ್ಟಿಗೆ ಮಾತನಾಡಿರುವ ನಟ ದರ್ಶನ್​ ಪರ ವಕೀಲ ಅನಿಲ್ ಬಾಬು, ‘ಪೊಲೀಸರು ಆರೋಪಿಗಳನ್ನು 6 ದಿನಗಳ ಕಾಲ ಕಸ್ಟಡಿಗೆ ಕೇಳಿ ಪಡೆದಿದ್ದರು, ಒಂದು ದಿನ ಮುಂಚಿತವಾಗಿಯೇ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಹೀಗಾಗಿ ಮತ್ತೆ ಕಸ್ಟಡಿಗೆ ಪಡೆಯುವುದಿಲ್ಲ ಎಂದು ನಾವು ತಿಳಿದಿದ್ದೆವು. ಆದರೆ ಮತ್ತೆ ಅವರು ಆರೋಪಿಗಳನ್ನು ಕಸ್ಟಡಿಗೆ ಪಡೆದಿದ್ದಾರೆ. ಇಬ್ಬರು ಆರೋಪಿಗಳು, ಪೊಲೀಸರು ತಮಗೆ ತೊಂದರೆ ನೀಡಿದ್ದಾರೆಂದು ಆರೋಪಿಸಿದ್ದಾರೆ. ಪೊಲೀಸರು ಮೈಸೂರಿನಲ್ಲಿ ಮಹಜರು ಮಾಡಬೇಕು, ಆರೋಪಿಗಳ ಬಟ್ಟೆಗಳನ್ನು, ಚಪ್ಪಲಿಗಳನ್ನು ವಶಕ್ಕೆ ಪಡೆಯಬೇಕು ಎಂದೆಲ್ಲ ಕಾರಣಗಳನ್ನು ನೀಡಿದ್ದಾರೆ. ಆದರೆ ಇದ್ಯಾವುದೂ ಸಹ ದರ್ಶನ್​ಗೆ ಸಂಬಂಧಿಸಿದ್ದಲ್ಲ. ಅಲ್ಲದೆ ಎಲ್ಲ ಆರೋಪಿಗಳನ್ನು ಏಕೆ ವಶಕ್ಕೆ ಪಡೆಯಬೇಕು ಎಂದು ಪೊಲೀಸರು ಪ್ರತ್ಯೇಕವಾಗಿ ಉಲ್ಲೇಖಿಸಿಲ್ಲ’ ಎಂಬುದನ್ನು ನಾವು ನ್ಯಾಯಾಲಯದಲ್ಲಿ ಉಲ್ಲೇಖಿಸಿದೆವು ಎಂದು ದರ್ಶನ್ ಪರ ವಕೀಲ ರಂಗನಾಥ ರೆಡ್ಡಿ ಹೇಳಿದರು.

ಇದನ್ನೂ ಓದಿ:ರೇಣುಕಾ ಸ್ವಾಮಿ ಹತ್ಯೆ ಪ್ರಕರಣ: ಜೂನ್ 20ರವರೆಗೆ ದರ್ಶನ್ ಹಾಗೂ ಗ್ಯಾಂಗ್​ ಪೊಲೀಸ್ ಕಸ್ಟಡಿ ಮುಂದುವರಿಕೆ

ಆರೋಪಿಗಳ ಮೊಬೈಲ್ ಡಾಟಾ ರಿಕವರಿ ಬಗ್ಗೆಯೂ ಪೊಲೀಸರು ಉಲ್ಲೇಖಿಸಿದ್ದಾರೆ. ಆದರೆ ಮೊಬೈಲ್ ಮಾಹಿತಿಯ ಬಗ್ಗೆ ಈ ಹಿಂದಿನ ಕೆಲವು ವರದಿಗಳನ್ನು ಉಲ್ಲೇಖಿಸಿ ನಾವು ನ್ಯಾಯಾಧೀಶರಿಗೆ ಮನವಿ ಮಾಡಿದೆವು, ಆರೋಪಿಗಳು ಮೊಬೈಲ್ ಪಾಸ್​ವರ್ಡ್ ನೀಡುವಂತೆ ಒತ್ತಾಯಿಸುವಂತಿಲ್ಲವೆಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಂಡೆವು. ಪೊಲೀಸರು ಒಂಬತ್ತು ದಿನಗಳ ಕಾಲ ಕಸ್ಟಡಿಗೆ ಕೇಳಿದ್ದೆವು. ಆದರೆ ನಾವು ಹೈಕೋರ್ಟ್​ನ ಕೆಲವು ಆದೇಶಗಳನ್ನು ತೀರ್ಪುಗಳನ್ನು ಉಲ್ಲೇಖಿಸಿ ತಕರಾರು ಸಲ್ಲಿಸಿದ ಬಳಿಕ ನ್ಯಾಯಾಲಯವು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ’ ಎಂದಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಮಂಗಳವಾರ ದರ್ಶನ್ ಬಂಧನವಾಗಿದೆ. ದರ್ಶನ್ ಅವರನ್ನು ಎರಡನೇ ಆರೋಪಿ ಅನ್ನಾಗಿ ಮಾಡಲಾಗಿದೆ. ಅದೇ ದಿನ ನ್ಯಾಯಾಲಯದ ಮುಂದೆ ದರ್ಶನ್, ಪವಿತ್ರಾ ಹಾಗೂ ಇತರರನ್ನು ಹಾಜರುಪಡಿಸಲಾಗಿತ್ತು. ಆರು ದಿನಗಳ ಕಾಲ ಎಲ್ಲ ಆರೋಪಿಗಳನ್ನು ಪೊಲೀಸರ ವಶಕ್ಕೆ ನ್ಯಾಯಾಲಯ ನೀಡಿತ್ತು. ಜೂನ್ 16ಕ್ಕೆ ಮುಗಿಯಬೇಕಿತ್ತು, ಆದರೆ ಜೂನ್ 15ಕ್ಕೆ ದರ್ಶನ್ ಮತ್ತು ಗ್ಯಾಂಗ್ ಅನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಮತ್ತೆ ಈಗ ಜೂನ್ 20ರ ವರೆಗೆ ದರ್ಶನ್ ಹಾಗೂ ಗ್ಯಾಂಗ್ ಅನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ