ರೀತು ಸಿಂಗ್ ಮೊದಲ ಆಡಿಷನ್ ಹೇಗಿತ್ತು? ಇಲ್ಲಿದೆ ಕ್ಯೂಟ್ ವಿಡಿಯೋ

| Updated By: ರಾಜೇಶ್ ದುಗ್ಗುಮನೆ

Updated on: Dec 18, 2024 | 8:18 AM

ರೀತು ಸಿಂಗ್ ನೇಪಾಳದವಳು. ಆಕೆ, ಡ್ರಾಮಾ ಜೂನಿಯರ್ಸ್ ಮೂಲಕ ಸಖತ್ ಜನಪ್ರಿಯತೆ ಪಡೆದಳು. ಅಲ್ಲಿ ಆಕೆಗೆ ಸಿಕ್ಕ ಜನಪ್ರಿಯತೆ ತುಂಬಾನೇ ದೊಡ್ಡ ಮಟ್ಟದ್ದು. ಆಕೆಯ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡರು. ಸಣ್ಣ ವಯಸ್ಸಿನಲ್ಲಿ ಆಕೆ ಮಾಡುತ್ತಿದ್ದ ಉತ್ತಮ ನಟನೆ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ರೀತು ಸಿಂಗ್ ಹಳೆಯ ವಿಡಿಯೋ ವೈರಲ್ ಆಗಿದೆ.

ರೀತು ಸಿಂಗ್ ಮೊದಲ ಆಡಿಷನ್ ಹೇಗಿತ್ತು? ಇಲ್ಲಿದೆ ಕ್ಯೂಟ್ ವಿಡಿಯೋ
ರೀತು ಸಿಂಗ್
Follow us on

ರೀತು ಸಿಂಗ್ ‘ಸೀತಾ ರಾಮ’ ಧಾರಾವಾಹಿಯಲ್ಲಿ ಸಿಹಿ ಹೆಸರಿನ ಪಾತ್ರ ಮಾಡಿ ಗಮನ ಸೆಳೆಯುತ್ತಿದ್ದಾಳೆ. ಆಕೆ ಸಿಹಿ ಪಾತ್ರವನ್ನು ಅದ್ಭುತವಾಗಿ ನಡೆಸಿಕೊಟ್ಟಿದ್ದಾಳೆ. ಈಗ ಸಿಹಿ ಪಾತ್ರ ಕೊನೆ ಆಗಿದೆ. ಹಾಗಂದ ಮಾತ್ರಕ್ಕೆ ರೀತು ಸಿಂಗ್ ಪಾತ್ರವೇ ಕೊನೆ ಆಯಿತು ಎಂದಲ್ಲ. ಡಬಲ್ ರೋಲ್ ಮಾಡಿಸಿ ಈಗ ಆಕೆಯನ್ನು ಮತ್ತೆ ಕರೆತರಲಾಗಿದೆ. ಈ ಬಾರಿ ಅವಳು ಲೋಕಲ್ ಹುಡುಗಿ ಸುಬ್ಬಿ ಆಗಿ ಕಾಣಿಸಿಕೊಂಡಿದ್ದಾಳೆ.

ರೀತು ಸಿಂಗ್ ನೇಪಾಳದವಳು. ಆಕೆ, ಡ್ರಾಮಾ ಜೂನಿಯರ್ಸ್ ಮೂಲಕ ಸಖತ್ ಜನಪ್ರಿಯತೆ ಪಡೆದಳು. ಅಲ್ಲಿ ಆಕೆಗೆ ಸಿಕ್ಕ ಜನಪ್ರಿಯತೆ ತುಂಬಾನೇ ದೊಡ್ಡ ಮಟ್ಟದ್ದು. ಆಕೆಯ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡರು. ಸಣ್ಣ ವಯಸ್ಸಿನಲ್ಲಿ ಆಕೆ ಮಾಡುತ್ತಿದ್ದ ಉತ್ತಮ ನಟನೆ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ರೀತು ಸಿಂಗ್ ಹಳೆಯ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ರೀತು ‘ಡ್ರಾಮಾ ಜೂನಿಯರ್ಸ್ 4’ ಆಡಿಷನ್​ಗೆ ವೇದಿಕೆ ಏರಿ ತನ್ನ ಹಿನ್ನೆಲೆ ಹೇಳಿಕೊಂಡಳು. ‘ನಾನು ನೇಪಾಳದವಳು’ ಎಂದು ಆಕೆ ಹೇಳಿದಳು. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಯಿತು. ರೀತು ಸಿಂಗ್ ಆ ಬಳಿಕ ಆನಂದ್ ಅವರ ಮಿಮಿಕ್ರಿ ಮಾಡಿದರು. ಅವರ ಡೈಲಾಗ್​ ಹೇಳಿ ಎಲ್ಲರಿಗೂ ಇಷ್ಟ ಆದಳು. ಅವಳು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಳು. ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

ರೀತು ಸಿಂಗ್ ಸಣ್ಣ ವಯಸ್ಸಿಗೆ ಕುಟುಂಬದ ಜವಾಬ್ದಾರಿ ತೆಗೆದುಕೊಂಡಿದ್ದಾಳೆ. ಅವಳು ಶಾಲೆಯ ನಟನೆಯ ಜೊತೆ ಜೊತೆಗೆ ಸ್ಕೂಲ್​ಗೂ ಹೋಗುತ್ತಿದ್ದಾಳೆ. ಅವಳು ನಟನೆ ಮಾಡುತ್ತಿರುವುದಕ್ಕೆ ಕುಟುಂಬ ಮುಂದಕ್ಕೆ ಸಾಗುತ್ತಿದೆ. ಅವಳು ಈಗ ‘ಸೀತಾ ರಾಮ’ ಧಾರಾವಾಹಿಯಲ್ಲಿ ಸುಬ್ಬಿ ಹೆಸರಿನ ಪಾತ್ರ ಮಾಡುತ್ತಿದ್ದಾಳೆ.

ಇದನ್ನೂ ಓದಿ: ‘ರಿಲೀಸ್ ಡೇಟ್ ಹೇಳದೇ ನಟಿಸಲ್ಲ’ ಎಂದು ಹಠ ಹಿಡಿದ ‘ಸೀತಾ ರಾಮ’ ರೀತು ಸಿಂಗ್; ವಿಡಿಯೋ ವೈರಲ್  

ರೀತು ಸಿಂಗ್ ಪಾತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಸಿಹಿ ಪಾತ್ರಧಾರಿಯಾಗಿದ್ದಾಗ ಅವಳು ಸಖತ್ ಕ್ಯೂಟ್ ಹಾಗೂ ಪೆದ್ದಿ ತರ ಇದ್ದಳು. ಆದರೆ, ಅವಳ ಪಾತ್ರ ಈಗ ರಡಗ್ ಆಗಿದೆ. ಬೇರೆಯದೇ ಅವತಾರದಲ್ಲಿ ಅವರು ಕಾಣಿಸಿಕೊಳ್ಳುತ್ತಾ ಇದ್ದಾಳೆ. ಧಾರಾವಾಹಿ ನಾನಾ ತಿರುವುಗಳನ್ನು ಪಡೆದು ಸಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.