ಬೆಂಗಳೂರಿಗೆ ಕಾಲಿಟ್ಟ ಬಾಲಿವುಡ್‌ ಸುಲ್ತಾನ, ಸಲ್ಲುಗೆ ಕಿಚ್ಚ ಸಾಥ್

|

Updated on: Dec 18, 2019 | 12:17 PM

ಸಿಲಿಕಾನ್ ಸಿಟಿ ನಿನ್ನೆ ಫುಲ್ ಸಲ್ಲು ಮಯವಾಗಿತ್ತು. ಬೆಂಗಳೂರಿಗೆ ಎಂಟ್ರಿಕೊಟ್ಟ ಬಾಲಿವುಡ್‌ ಸುಲ್ತಾನನ್ನ ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ರು. ದಬಾಂಗ್-3 ಪ್ರಮೋಷನ್‌ಗಾಗಿ ಬಂದ ಸಲ್ಲುಗೆ ಕಿಚ್ಚ ಸುದೀಪ್‌ ಸಾಥ್ ನೀಡಿದ್ರು. ದಬಾಂಗ್‌ -3.. ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್‌ನಲ್ಲಿ ಹಲ್‌ ಚಲ್ ಎಬ್ಬಿಸಿರುವ ಸಿನಿಮಾ. ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ಒಟ್ಟಿಗೆ ನಟಿಸಿರುವ ಸಿನಿಮಾ ಹಿಂದಿ ಮತ್ತು ಕನ್ನಡದಲ್ಲಿ ರಿಲೀಸ್ ಆಗುತ್ತಿರುವ ಬೆನ್ನಲ್ಲೇ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಮಾಡೋಕೆ ಚಿತ್ರತಂಡ ಭರ್ಜರಿ ಕಸರತ್ತು ನಡೆಸುತ್ತಿದೆ. […]

ಬೆಂಗಳೂರಿಗೆ ಕಾಲಿಟ್ಟ ಬಾಲಿವುಡ್‌ ಸುಲ್ತಾನ, ಸಲ್ಲುಗೆ ಕಿಚ್ಚ ಸಾಥ್
Follow us on

ಸಿಲಿಕಾನ್ ಸಿಟಿ ನಿನ್ನೆ ಫುಲ್ ಸಲ್ಲು ಮಯವಾಗಿತ್ತು. ಬೆಂಗಳೂರಿಗೆ ಎಂಟ್ರಿಕೊಟ್ಟ ಬಾಲಿವುಡ್‌ ಸುಲ್ತಾನನ್ನ ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ರು. ದಬಾಂಗ್-3 ಪ್ರಮೋಷನ್‌ಗಾಗಿ ಬಂದ ಸಲ್ಲುಗೆ ಕಿಚ್ಚ ಸುದೀಪ್‌ ಸಾಥ್ ನೀಡಿದ್ರು.

ದಬಾಂಗ್‌ -3.. ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್‌ನಲ್ಲಿ ಹಲ್‌ ಚಲ್ ಎಬ್ಬಿಸಿರುವ ಸಿನಿಮಾ. ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ಒಟ್ಟಿಗೆ ನಟಿಸಿರುವ ಸಿನಿಮಾ ಹಿಂದಿ ಮತ್ತು ಕನ್ನಡದಲ್ಲಿ ರಿಲೀಸ್ ಆಗುತ್ತಿರುವ ಬೆನ್ನಲ್ಲೇ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಮಾಡೋಕೆ ಚಿತ್ರತಂಡ ಭರ್ಜರಿ ಕಸರತ್ತು ನಡೆಸುತ್ತಿದೆ. ಅದಕ್ಕಾಗಿ ಭರ್ಜರಿ ಪ್ರಮೋಷನ್ ಮಾಡುತ್ತಿದೆ.

ಸಿಲಿಕಾನ್ ಸಿಟಿಯಲ್ಲಿ ‘ಕಿಚ್ಚು’ ಹಚ್ಚಿಸಿದ ಬಾಲಿವುಡ್ ಸುಲ್ತಾನ್!
ಯೆಸ್‌ ನಿನ್ನೆ ಸಂಜೆ ಬಾಲಿವುಡ್ ಸುಲ್ತಾನ್ ಸಲ್ಮಾನ್ ಅಂಡ್ ಟೀಂ ಬೆಂಗಳೂರಿಗೆ ಆಗಮಿಸಿ, ಭರ್ಜರಿಯಾಗಿ ದಬಾಂಗ್-3 ಚಿತ್ರದ ಪ್ರಮೋಷನ್ ಮಾಡಿದ್ರು. ಸಂಜೆ 5 ಘಂಟೆ ಹೊತ್ತಿಗೆ ಮುಂಬೈನಿಂದ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಪ್ರೈವೇಟ್ ಜೆಟ್​ನಲ್ಲಿ ಆಗಮಿಸಿದ ಸಲ್ಮಾನ್‌ಗೆ ಕಿಚ್ಚ ಸುದೀಪ್, ಪ್ರಭುದೇವ್, ನಾಯಕಿ ಸಾಯಿ ಮಜರ್ ಕರ್ ಸಾಥ್ ನೀಡಿದ್ರು. ಸಲ್ಮಾನ್ ಖಾನ್ ನೋಡಲು ಸಾವಿರಾರು ಅಭಿಮಾನಿಗಳು ಹೆಚ್.ಎಲ್ ವಿಮಾನ ನಿಲ್ದಾಣದ ಮುಂದೆ ಜಮಾಯಿಸಿದ್ರು.

ಕನ್ನಡದಲ್ಲೇ ನಮಸ್ಕಾರ ತಿಳಿಸಿದ ಸಲ್ಮಾನ್:
ಅಭಿಮಾನಿಗಳನ್ನು ನೋಡಿದ ಸಲ್ಮಾನ್ ಕನ್ನಡದಲ್ಲೇ ನಮಸ್ಕಾರ ತಿಳಿಸಿದ್ರು. ಅಲ್ಲಿಂದ ಕಾರಿನಲ್ಲಿ ಹೊರಟ ಸಲ್ಮಾನ್​ರನ್ನ ನೋಡಲು, ಸೆಲ್ಫಿ ತೆಗೆದುಕೊಳ್ಳೋದಕ್ಕೆ ಅಭಿಮಾನಿಗಳು ಕಾರನ್ನು ಚೇಸ್ ಮಾಡಿದ್ರು. ಅಲ್ಲಿಂದ ನೇರವಾಗಿ ಖಾಸಗಿ ಹೋಟೆಲ್ ನಲ್ಲಿ ನಡೆದ ಪ್ರತಿಕಾಗೋಷ್ಟಿಗೆ ಸಲ್ಮಾನ್ ಹಾಜರಾದ್ರು. ಇದೇ ಸಮಯದಲ್ಲಿ ಸಿಎಂ ಪುತ್ರ ವಿಜಯೇಂದ್ರ ಕೂಡ ಸಲ್ಮಾನ್​ರನ್ನು ಭೇಟಿ ಮಾಡಿದ್ರು. ಬಳಿಕ ಮಾಲ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಬಾಂಗ್-3 ಚಿತ್ರದ ಪ್ರಮೋಷನ್​ನಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು.

ಮೊದಲಿಗೆ ಮೈಕ್ ಕೈಗೆ ತೆಗೆದುಕೊಂಡ ಸಲ್ಲು ‘ಸುದೀಪ್ ನನ್ನ ಜೊತೆ ಇರೋವರೆಗೂ ನಾನು ನರ್ವಸ್ ಆಗಲ್ಲ’ ಅಂತ ಸ್ಮೈಲ್ ಮಾಡಿದ್ರು. ಜೊತೆಗೆ ದಬಾಂಗ್-3 ಕನ್ನಡ ಪ್ರೇಕ್ಷಕರಿಗೆ ಎಷ್ಟು ಮಜಾ ಕೊಡುತ್ತೆ ಎನ್ನುವುದನ್ನು ವಿವರಿಸಿದ್ರು.

ಇನ್ನು ಕಾರ್ಯಕ್ರಮದ ಸೆಂಟರ್ ಆಫ್ ಅಟ್ರಾಕ್ಷನ್ ಕಿಚ್ಚ ಸುದೀಪ್ ಮಾತನಾಡಿ ದಬಾಂಗ್-3 ಖಂಡಿತ ಕನ್ನಡಿಗರಿಗೂ ಮನರಂಜನೆ ಕೊಡುತ್ತೆ. ನಾವೆಲ್ಲರೂ ಕನ್ನಡದ ಬೆಳವಣಿಗೆಗೆ ಕೆಲಸ ಮಾಡ್ತಿರೋದು ಅಂತ ತಮ್ಮ ಕನ್ನಡ ಪ್ರೇಮವನ್ನ ಮೆರೆದ್ರು. ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿರುವ ದಬಾಂಗ್-3 ಈ ತಿಂಗಳ 20ರಂದು ರಿಲೀಸ್ ಆಗಲಿದ್ದು, ಸಲ್ಮಾನ್ ಮತ್ತು ಕಿಚ್ಚ ಸುದೀಪ್‌ರನ್ನ ಒಟ್ಟಿಗೆ ಕಣ್ತುಂಬಿಕೊಳ್ಳುಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Published On - 12:02 pm, Wed, 18 December 19