AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಾರ್ಕ್’, ‘45’ ರಿಲೀಸ್ ಬಳಿಕ ‘ಡೆವಿಲ್’ ಗಳಿಕೆ ಮಾಡಿದ್ದು ಎಷ್ಟು?

'ಮಾರ್ಕ್' ಹಾಗೂ '45' ಚಿತ್ರಗಳ ಬಿಡುಗಡೆಯ ನಡುವೆಯೂ ದರ್ಶನ್ ಅಭಿನಯದ 'ಡೆವಿಲ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿದೆ. ಡಿಸೆಂಬರ್ 11ರಂದು ಬಿಡುಗಡೆಯಾದ ಈ ಚಿತ್ರ 15 ದಿನಗಳಲ್ಲಿ 33.83 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದು, ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡುತ್ತಿದೆ. ಇದರ ಯಶಸ್ಸು ಚಿತ್ರೋದ್ಯಮಕ್ಕೆ ಖುಷಿ ನೀಡಿದೆ.

‘ಮಾರ್ಕ್’, ‘45’ ರಿಲೀಸ್ ಬಳಿಕ ‘ಡೆವಿಲ್’ ಗಳಿಕೆ ಮಾಡಿದ್ದು ಎಷ್ಟು?
ದರ್ಶನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 26, 2025 | 8:11 AM

Share

ಸ್ಯಾಂಡಲ್​​ವುಡ್​ನಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆ ಕಾಣುತ್ತಾ ಇದ್ದರೆ ಪ್ರೇಕ್ಷಕನಿಗೂ ಖುಷಿ ಆಗುತ್ತದೆ. ಸಿನಿಮಾಗಳನ್ನು ನೋಡುವ ಕೆಲಸ ಮಾಡುತ್ತಾರೆ. ಇದರಿಂದ ಚಿತ್ರರಂಗವೂ ಬೆಳೆಯುತ್ತದೆ ಎನ್ನಬಹುದು. ಈಗ ‘ಮಾರ್ಕ್’ (Mark Movie) ಹಾಗೂ ‘45’ ಚಿತ್ರಗಳು ಒಟ್ಟೊಟ್ಟಿಗೆ ರಿಲೀಸ್ ಆಗಿವೆ. ಇದು ಸಿನಿಮಾ ಪ್ರೇಕ್ಷಕರ ಖುಷಿಗೆ ಕಾರಣ ಆಗಿದೆ. ಈಗ ‘ಮಾರ್ಕ್’ ಹಾಗೂ ‘45’ ಸಿನಿಮಾಗಳು ಅಬ್ಬರದ ನಡುವೆ ‘ಡೆವಿಲ್’ ಚಿತ್ರವು ಎಷ್ಟು ಗಳಿಸಿತು ಎಂಬುದನ್ನು ನೋಡೋಣ.

‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ಬಿಡುಗಡೆ ಕಂಡಿದೆ. ಅಂದರೆ ಸಿನಿಮಾ ರಿಲೀಸ್ ಆಗಿ ಎರಡು ವಾರಗಳು ಕಳೆದಿವೆ ಎಂದೇ ಹೇಳಬಹುದು. ಈ ಚಿತ್ರದ ಒಟ್ಟಾರೆ ಕಲೆಕ್ಷನ್ ಎಷ್ಟು ಕೋಟಿ ರೂಪಾಯಿ ಆಗಬಹುದು ಎಂಬ ಕುತೂಹಲ ಮೂಡಿತ್ತು. ಅದಕ್ಕೆ ಕೊನೆಗೂ ಉತ್ತರ ಸಿಗುವ ಸಮಯ ಬಂದಿದೆ. ಹಾಗಾದರೆ, ಈ ಸಿನಿಮಾ ಮೂರನೇ ಗುರುವಾರ ಎಷ್ಟು ಗಳಿಸಿದೆ ಎಂಬುದನ್ನು ನೋಡೋಣ.

‘ಡೆವಿಲ್’ ಸಿನಿಮಾ 15ನೇ ದಿನ 24 ಲಕ್ಷ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಿನಿಮಾ ಶೋಗಳ ಸಂಖ್ಯೆಯಲ್ಲಿ ಇಳಿಕೆ ಆದರೂ ಕೆಲವು ಶೋಗಳು ಹೌಸ್​ಫುಲ್ ಆಗಿವೆ. ಇದು ಚಿತ್ರಕ್ಕೆ ಸಹಕಾರಿ ಆಗಿದೆ. ಈ ಚಿತ್ರದ ಗ್ರಾಸ್ ಕಲೆಕ್ಷನ್ 33.83 ಕೋಟಿ ರೂಪಾಯಿ ಆಗಿದೆ ಎನ್ನಬಹುದು. ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ದರ್ಶನ್, ಶರ್ಮಿಳಾ ಮಾಂಡ್ರೆ, ರಚನಾ ರೈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಮೊದಲ ದಿನವೇ ಅಬ್ಬರದ ಕಲೆಕ್ಷನ್ ಮಾಡಿದ ‘ಮಾರ್ಕ್’ ಹಾಗೂ ‘45’ ಸಿನಿಮಾ

ಮಿಲನ ಪ್ರಕಾಶ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವೈಷ್ಣೋ ಸ್ಟುಡಿಯೋ ಹಾಗೂ ಜೈ ಮಾತಾ ಕಂಬೈನ್ಸ್ ಒಟ್ಟಾಗಿ ಈ ಸಿನಿಮಾ ನಿರ್ಮಾಣ ಮಾಡಿದೆ. ಈ ಚಿತ್ರವು ದರ್ಶನ್ ಅವರು ಜೈಲಿನಲ್ಲಿ ಇರುವಾಗಲೇ ತೆರೆಗೆ ಬಂತು. ಈ ಸಿನಿಮಾದ ಒಟ್ಟಾರೆ ಗಳಿಕೆ ಮೇಲೆ ಚಿತ್ರದ ಲಾಭ ನಷ್ಟವು ನಿರ್ಧಾರವಾಗಲಿದೆ. ಅನೇಕರ ಸಿಂಗಲ್ ಸ್ಕ್ರೀನ್​​ಗಳಲ್ಲಿ ಸಿನಿಮಾ ಇನ್ನೂ ಪ್ರದರ್ಶನ ಕಾಣುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.