ಬಾಲಿವುಡ್ ನಟ ಸಲ್ಮಾನ್ ಖಾನ್ ಸದ್ಯ ದಬಾಂಗ್ 3 ಮೂಲಕ ಅಬ್ಬರಿಸಿ ರಾಧೆ ಅವತಾರದಲ್ಲಿ ಕಮಾಲ್ ಮಾಡೋಕೆ ರೆಡಿಯಾಗಿದ್ದಾರೆ. ಅಂದ್ಹಾಗೆ ರಾಧೆ ಸಿನಿಮಾ ನಂತ್ರ ಬಾಲಿವುಡ್ ಭಾಯ್‌ಜಾನ್ ಈಗಾಗಲೇ ಯಾವ ಸಿನಿಮಾದಲ್ಲಿ ನಟಿಸ್ತಾರೆ ಅನ್ನೋ ಪ್ರಶ್ನೆಗೂ ಉತ್ತರ ಸಿಕ್ಕಿದ್ದು, ಟೈಟಲ್ ಕೇಳಿ ಸಲ್ಮಾನ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 ಚಿತ್ರ ಇನ್ನೂ ಥಿಯೇಟರ್‌ನಲ್ಲಿ ಜರ್ನಿ ಮುಂದುವರಿಸಿ ಪ್ರೇಕ್ಷಕರನ್ನ ರಂಜಿಸ್ತಿದೆ. ಅಂದ್ಹಾಗೆ ಪ್ರತಿ ವರ್ಷ ಸಲ್ಮಾನ್ ಖಾನ್ ಹಬ್ಬಕ್ಕೆ ಗಿಫ್ಟ್ ಆಗಿ ಒಂದೊಂದು ಸಿನಿಮಾ ರಿಲೀಸ್ ಮಾಡ್ತಾನೆ ಇರ್ತಾರೆ. ಆದ್ರಲ್ಲಿ ಬಾಲಿವುಡ್ ಸಲ್ಲುಮಿಯಾಗೆ ರಂಜಾನ್ ಹಬ್ಬ ಬೇರೆ ಹಬ್ಬಕ್ಕಿಂತಲೂ ಸ್ಪೆಷಲ್ ಕೂಡ ಹೌದು.
ರಂಜಾನ್ ಹಬ್ಬಕ್ಕೆ ರಾಧೆ ಗಿಫ್ಟ್:
ಅಂದ್ಹಾಗೆ ಸಲ್ಮಾನ್ ಖಾನ್ ದಬ್ಬಾಂಗ್ 3 ನಂತ್ರ 2020ರ ರಂಜಾನ್ ಹಬ್ಬಕ್ಕೆ ಗಿಫ್ಟ್ ಆಗಿ ರಾಧೆ ರಿಲೀಸ್‌ಗೆ ರೆಡಿಯಾಗ್ತಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ರಾಧೆ ಸಿನಿಮಾಗೆ ಪ್ರಭುದೇವ್ ಆ್ಯಕ್ಷನ್ ಕಟ್ ಹೇಳಿದ್ದು, ಮೇ ತಿಂಗಳಲ್ಲಿ ಚಿತ್ರ ರಿಲೀಸ್ ಆಗಲಿದೆ. ಈ ಹಿಂದೆಯೂ ಕೂಡ ಸಲ್ಮಾನ್ ಖಾನ್ ಅಭಿನಯದ ವಾಂಟೆಡ್, ದಬ್ಬಾಂಗ್, ಏಕ್ತಾ ಟೈಗರ್, ಭಜರಂಗಿ ಭಾಯ್ ಜಾನ್ ಕೂಡ ರಂಜಾನ್ ಹಬ್ಬಕ್ಕೆ ರಿಲೀಸ್ ಆಗಿದ್ದು ವಿಶೇಷ.
ರಾಧೆ ರಿಲೀಸ್ ನಂತ್ರ ಸಲ್ಮಾನ್ ಹೊಸ ಸಿನಿಮಾ ಯಾವುದು ಅನ್ನೋ ಕ್ಯೂರಿಯಾಸಿಟಿಗೂ ಬ್ರೇಕ್ ಬಿದ್ದಿದೆ. ಸದ್ಯ ಸಲ್ಮಾನ್ ಅಭಿನಯದ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದ್ದು, ಸಿನಿಮಾಗೆ ಕಬೀ ಈದ್ ಕಬೀ ದಿವಾಲಿ ಅನ್ನೋ ಟೈಟಲ್ ಫಿಕ್ಸ್ ಆಗಿದೆ. ನಿರ್ದೇಶಕ ಫರಾನ್ ಸಂಜೀ ಆ್ಯಕ್ಷನ್ ಕಟ್ ಹೇಳ್ತಿದ್ದು, ಸಿನಿಮಾಗೆ ಭರ್ಜರಿ ತಯಾರಿ ನಡೆದಿದೆ. ಒಟ್ನಲ್ಲಿ ಸಲ್ಮಾನ್ ಖಾನ್ ರಾಧೇ ನಂತ್ರ ನಟಿಸ್ತಿರೋ ಸಿನಿಮಾದ ಟೈಟಲ್ ಮತ್ತಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿದೆ.
Mumbaikars, aa gaya hai #SwachhSurvekshan2020Mumbai poll. Swagat to karo Mumbai ka! https://t.co/AYH3djRrzP par jaao aur Mumbai ke liye vote karo! #AnythingForMumbai
— Salman Khan (@BeingSalmanKhan) January 12, 2020