ಸಂಜನಾ ಜೊತೆ ಕಿರಿಕ್ ಮಾಡಿಕೊಂಡ ವಂದನಾ ಯಾರು ಗೊತ್ತಾ? ಕ್ರಿಕೆಟರ್ ಅಮಿತ್ ಜೊತೆ ಮಾಡಿದ್ದೇನು?

|

Updated on: Dec 27, 2019 | 3:30 PM

ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಸಂಜನಾ ಜೊತೆ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಕಿರಿಕ್ ಮಾಡಿಕೊಂಡು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ನಿರ್ಮಾಪಕಿ ವಂದನಾ ಜೈನ್ ಓರ್ವ ವಿಚ್ಛೇದಿತೆ ಮಹಿಳೆಯಾಗಿದ್ದು, ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಆಸ್ತಿ ಹೊಂದಿದ್ದಾಳೆ ಎಂದು ಸಂಜನಾ ಗಂಭೀರ ಆರೋಪ ಮಾಡಿದ್ದಾರೆ. ಬ್ರಿಗೇಡ್ ರಸ್ತೆಯಲ್ಲಿ ವಂದನಾ 100/200 ಅಳತೆಯ ನಿವೇಶನ ಹೊಂದಿದ್ದಾಳೆ. ಅಲ್ಲದೆ, ಸೆಲೆಬ್ರಿಟಿಗಳಿಂದಲೂ ವಂದನಾ ಜೈನ್ ಹಣ ಕೀಳುತ್ತಾಳೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಮನೆ ಕೂಡ ಅಕ್ರಮ ಆಸ್ತಿ ಎಂದು ಸಂಜನಾ ಆರೋಪಿಸಿದ್ದಾಳೆ. ಅಲ್ಲದೆ, ಕ್ರಿಕೆಟರ್ ಅಮಿತ್ […]

ಸಂಜನಾ ಜೊತೆ ಕಿರಿಕ್ ಮಾಡಿಕೊಂಡ ವಂದನಾ ಯಾರು ಗೊತ್ತಾ? ಕ್ರಿಕೆಟರ್ ಅಮಿತ್ ಜೊತೆ ಮಾಡಿದ್ದೇನು?
Follow us on

ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಸಂಜನಾ ಜೊತೆ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಕಿರಿಕ್ ಮಾಡಿಕೊಂಡು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ನಿರ್ಮಾಪಕಿ ವಂದನಾ ಜೈನ್ ಓರ್ವ ವಿಚ್ಛೇದಿತೆ ಮಹಿಳೆಯಾಗಿದ್ದು, ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಆಸ್ತಿ ಹೊಂದಿದ್ದಾಳೆ ಎಂದು ಸಂಜನಾ ಗಂಭೀರ ಆರೋಪ ಮಾಡಿದ್ದಾರೆ.

ಬ್ರಿಗೇಡ್ ರಸ್ತೆಯಲ್ಲಿ ವಂದನಾ 100/200 ಅಳತೆಯ ನಿವೇಶನ ಹೊಂದಿದ್ದಾಳೆ. ಅಲ್ಲದೆ, ಸೆಲೆಬ್ರಿಟಿಗಳಿಂದಲೂ ವಂದನಾ ಜೈನ್ ಹಣ ಕೀಳುತ್ತಾಳೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಮನೆ ಕೂಡ ಅಕ್ರಮ ಆಸ್ತಿ ಎಂದು ಸಂಜನಾ ಆರೋಪಿಸಿದ್ದಾಳೆ. ಅಲ್ಲದೆ, ಕ್ರಿಕೆಟರ್ ಅಮಿತ್ ಮಿಶ್ರಾರನ್ನ ಬೀದಿಗೆ ತಂದವಳು ವಂದನಾ, ಭಾರತ ಕ್ರಿಕೆಟ್ ತಂಡದಿಂದ ಅಮಿತ್ ಮಿಶ್ರಾ ಹೊರಬೀಳಲು ಕಾರಣ ಅವಳೇ ಎಂದು ವಂದನಾ ಜೈನ್ ವಿರುದ್ಧ ನಟಿ ಸಂಜನಾ ಗಂಭೀರ ಆರೋಪ ಮಾಡಿದ್ದಾಳೆ.

ಗಂಡನನ್ನ ಮನೆಯಿಂದ ಓಡಿಸಿದ್ದಾಳೆ:
ವಂದನಾ ಆಸ್ತಿಯನ್ನು ನೋಡಿ, ಆಗ ಎಲ್ಲಾ ಗೊತ್ತಾಗುತ್ತೆ. ನನ್ನ ತಾಯಿಯನ್ನು ತುಂಬಾ ಕೆಟ್ಟದಾಗಿ ಬೈದಿದ್ದಾಳೆ. ನನಗೆ ಅವಳ ಸಹವಾಸ ಬೇಕಾಗಿಲ್ಲ. ನಾನು ಅನಗತ್ಯವಾಗಿ ಯಾರ ತಂಟೆಗೂ ಹೋಗೋದಿಲ್ಲ. ನನ್ನ ತಂಟೆಗೆ ಬಂದ್ರೆ ಸುಮ್ಮನಿರೋದಿಲ್ಲ. ಅವಳಿಗೆ ಯಾರೂ ಇಲ್ಲ, ಇಬ್ಬರು ಮಕ್ಕಳಿದ್ದಾರೆ. ಆ ಮಕ್ಕಳನ್ನೂ ವಿದೇಶಕ್ಕೆ ಕಳಿಸಿಬಿಟ್ಟಿದ್ದಾಳೆ. ಗಂಡನನ್ನು ಮನೆಯಿಂದ ಒದ್ದು ಓಡಿಸಿಬಿಟ್ಟಿದ್ದಾಳೆ ಎಂದು ಟಿವಿ9ಗೆ ನಟಿ ಸಂಜನಾ ಗಲ್ರಾನಿ ಪ್ರತಿಕ್ರಿಯಿಸಿದ್ದಾಳೆ.

₹200 ಕೋಟಿ ಅಕ್ರಮ ಆಸ್ತಿ:
ಬೆಂಗಳೂರಿನಲ್ಲಿ ವಂದನಾ ಜೈನ್​​ಗೆ ಯಾವ್ದೇ ಬ್ಯುಸಿನೆಸ್ ಇಲ್ಲ. ಆದ್ರೂ ವಂದನಾ ಜೈನ್ ಅಕ್ರಮವಾಗಿ 200 ಕೋಟಿ ರೂ. ಆಸ್ತಿ ಮಾಡಿದ್ದಾಳೆ. ವಂದನಾ ಜೈನ್ ಯಾವುದೇ ಕಂಪನಿಯನ್ನೂ ನಡೆಸುತ್ತಿಲ್ಲ. ಅವಳಿಗೆ ಇಷ್ಟೊಂದು ಆಸ್ತಿ ಎಲ್ಲಿಂದ ಬಂತು, ಈ ಬಗ್ಗೆ ತನಿಖೆ ಆಗ್ಬೇಕು. ಆದಾಯ ತೆರಿಗೆ ಇಲಾಖೆಗೆ ನಾನು ಮನವಿ ಮಾಡುತ್ತೇನೆ. ಮುಂಬೈನ ವರ್ಲಿಯಲ್ಲಿ ₹20 ಕೋಟಿ ಮೌಲ್ಯದ ಬಂಗಲೆ ಇದೆ. ರಾಜಕಾರಣಿ ಬಳಿ ವಸೂಲಿ ಮಾಡಿ ಮನೆ ಖರೀದಿಸಿದ್ದಾಳೆ ಎಂದು ವಂದನಾ ವಿರುದ್ಧ ನಟಿ ಸಂಜನಾ ಗಂಭೀರ ಆರೋಪ ಮಾಡಿದ್ದಾಳೆ.

Published On - 3:16 pm, Fri, 27 December 19