ಸಿನಿಮೀಯ ರೀತಿಯಲ್ಲಿ ದರೋಡೆಕೋರರನ್ನು ಹಿಡಿದ ನಟ

ಸಿನಿಮೀಯ ರೀತಿಯಲ್ಲಿ ದರೋಡೆಕೋರರನ್ನು ಹಿಡಿದ ನಟ

ಬೆಂಗಳೂರು: ಸಿನಿಮೀಯ ರೀತಿ ನಟ ದರೋಡೆಕೋರರನ್ನು ಹಿಡಿದಿರುವ ಘಟನೆ ನಗರದ ಸೇಂಟ್‌ ಜಾನ್ ಸರ್ಕಲ್ ಬಳಿ ನಡೆದಿದೆ. ನಟ ರಘುಭಟ್ ಮಧ್ಯರಾತ್ರಿ ತನ್ನ ಕುಟುಂಬಸ್ಥರ ಜೊತೆ ಅವನೇ ಶ್ರೀಮನ್ನಾರಯಣ ಸಿನಿಮಾ ಮುಗಿಸಿ ಹಿಂತಿರುಗುತ್ತಿರುವಾಗ‌ ಈ ಘಟನೆ ನಡೆದಿದೆ. ಸಿಗ್ಮಾ ಮಾಲ್ ನಲ್ಲಿ ಸಿನಿಮಾ ನೋಡಿ ಮನೆಗೆ ತೆರಳುತ್ತಿದ್ದ ವೇಳೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ RMZ ಬಳಿ ಕಾರೊಂದನ್ನು ಅಡ್ಡ ಗಟ್ಟಿ ಇಬ್ಬರು ದರೋಡೆಕೋರರು ದರೋಡೆ ಮಾಡಿ ಎಸ್ಕೇಪ್ ಆಗ್ತಿದ್ದರು. ಈ ವೇಳೆ ರಘುಭಟ್ ಇಬ್ಬರನ್ನು ಸಿನಿಮೀಯ […]

sadhu srinath

|

Dec 27, 2019 | 10:28 AM

ಬೆಂಗಳೂರು: ಸಿನಿಮೀಯ ರೀತಿ ನಟ ದರೋಡೆಕೋರರನ್ನು ಹಿಡಿದಿರುವ ಘಟನೆ ನಗರದ ಸೇಂಟ್‌ ಜಾನ್ ಸರ್ಕಲ್ ಬಳಿ ನಡೆದಿದೆ. ನಟ ರಘುಭಟ್ ಮಧ್ಯರಾತ್ರಿ ತನ್ನ ಕುಟುಂಬಸ್ಥರ ಜೊತೆ ಅವನೇ ಶ್ರೀಮನ್ನಾರಯಣ ಸಿನಿಮಾ ಮುಗಿಸಿ ಹಿಂತಿರುಗುತ್ತಿರುವಾಗ‌ ಈ ಘಟನೆ ನಡೆದಿದೆ.

ಸಿಗ್ಮಾ ಮಾಲ್ ನಲ್ಲಿ ಸಿನಿಮಾ ನೋಡಿ ಮನೆಗೆ ತೆರಳುತ್ತಿದ್ದ ವೇಳೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ RMZ ಬಳಿ ಕಾರೊಂದನ್ನು ಅಡ್ಡ ಗಟ್ಟಿ ಇಬ್ಬರು ದರೋಡೆಕೋರರು ದರೋಡೆ ಮಾಡಿ ಎಸ್ಕೇಪ್ ಆಗ್ತಿದ್ದರು. ಈ ವೇಳೆ ರಘುಭಟ್ ಇಬ್ಬರನ್ನು ಸಿನಿಮೀಯ ರೀತಿಯಲ್ಲಿ ಸುಮಾರು 2 ಕಿ.ಮೀ. ಚೇಸ್ ಮಾಡಿ ಸೇಂಟ್‌ ಜಾನ್ ಸರ್ಕಲ್ ಬಳಿ ಹಿಡಿದಿದ್ದಾರೆ.

ಸಿಕ್ಕಿಬಿದ್ದ ದರೋಡೆಕೋರರಾದ ಅಬ್ದುಲ್, ಮೊಹೀನ್‌ನನ್ನು ಹಲಸೂರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಚೇಸಿಂಗ್ ವೇಳೆ ಸೆಲ್ಫ್‌ ಌಕ್ಸಿಡೆಂಟ್ ಮಾಡಿಕೊಂಡಿದ್ದ ದರೋಡೆಕೋರರಿಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Follow us on

Most Read Stories

Click on your DTH Provider to Add TV9 Kannada