A5 ಜೈನ್ ಆಯೋಜಿಸಿದ್ದ ಪಾರ್ಟಿಯಲ್ಲಿ ಶಾಸಕ ಜಮೀರ್ ಮುಖ್ಯ ಅತಿಥಿ.. ನಟಿ ಸಂಜನಾ ಭಾಗಿ?

A5 ಜೈನ್ ಆಯೋಜಿಸಿದ್ದ ಪಾರ್ಟಿಯಲ್ಲಿ ಶಾಸಕ ಜಮೀರ್ ಮುಖ್ಯ ಅತಿಥಿ.. ನಟಿ ಸಂಜನಾ ಭಾಗಿ?

[lazy-load-videos-and-sticky-control id=”79HSFeyBtTY”]

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಬಂಧಿತನಾಗಿರುವ A5 ಆರೋಪಿ ವೈಭವ್ ಜೈನ್ ಆಯೋಜಿಸಿದ್ದ ಪಾರ್ಟಿಗೆ ಶಾಸಕ ಜಮೀರ್ ಅಹ್ಮದ್ ಖಾನ್​ರಿಗೆ ಮುಖ್ಯ ಅತಿಥಿಯಾಗಿ ಆಹ್ವಾನ ಇರುತಿತ್ತು ಎಂಬ ಸ್ಫೋಟಕ ಸುದ್ದಿ ಹೊರಬಿದ್ದಿದೆ.

ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್ ಖಾನ್ ಮುಖ್ಯ ಅತಿಥಿ ಆಗಿದ್ದ ಪಾರ್ಟಿಯಲ್ಲಿ ಸಂಜನಾ ಸಹ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಆದರೆ, ಸಂಜನಾ ತನಗೆ ಜಮೀರ್ ಅಹ್ಮದ್‌ ಯಾರು ಎಂದು ಗೊತ್ತೇ ಇಲ್ಲ ಅಂತಾ ಹೇಳಿದ್ದರು. ಬಟ್​, ಚೀಫ್ ಗೆಸ್ಟ್‌ ಲಿಸ್ಟ್‌ನಲ್ಲೇ ಶಾಸಕ ಜಮೀರ್ ಅಹ್ಮದ್​ರ ಹೆಸರು ಇರುತಿತ್ತು ಎಂದು ಹೇಳಲಾಗಿದೆ. ಅಲ್ಲದೆ, ಕಾರ್ಯಕ್ರಮದ ಪ್ರಾಯೋಜಕರು ಸಹ ಶಾಸಕರೇ ಆಗಿದ್ದರೂ ಸಹ ಸಂಜನಾ ನನಗೆ ಶಾಸಕರು ಯಾರು ಅಂತಾನೇ ಗೊತ್ತಿಲ್ಲ ಎಂದು ಈ ಹಿಂದೆ ಹೇಳಿದ್ದರು.

ಪ್ರಶಾಂತ್ ಸಂಬರಗಿ ವಿಚಾರದಲ್ಲಿ ಶಾಸಕರು ಗೊತ್ತಿಲ್ಲ ಎಂದಿದ್ದ ನಟಿ ಸಂಜನಾ ಚೀಫ್ ಗೆಸ್ಟ್‌ ಬಗ್ಗೆ ಮಾಹಿತಿ ಇಲ್ಲದೆ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ರಾ ಎಂಬ ಪ್ರಶ್ನೆ ಮೂಡಿದೆ. ಜೊತೆಗೆ ಇದೇ ಕಾರ್ಯಕ್ರಮದಲ್ಲಿ ಅರೆಸ್ಟ್ ಆಗಿರುವ ವೈಭವ್ ಜೈನ್ ಸಹ ಭಾಗಿಯಾಗುತ್ತಿದ್ದ ಎಂಬುದು ತಿಳಿದುಬಂದಿದೆ.

Click on your DTH Provider to Add TV9 Kannada