ತನ್ನ ಲಾಸ್ಟ್​ ಕಾಲ್​ ಡಿಟೇಲ್ ಮುಳುವಾಗಲಿದೆ ‘ಪಾರ್ಟಿ ಅನಿಮಲ್’ ಸಂಜನಾಗೆ! ಹೇಗೆ?

[lazy-load-videos-and-sticky-control id=”ZgOt04WK2Is”] ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟಿನ ಪ್ರಕರಣದಲ್ಲಿ ಬಂಧಿತರಾಗಿರುವ ಸೆಲೆಬ್ರಿಟಿ ನಟಿ, ಪಾರ್ಟಿ ಅನಿಮಲ್ ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ಇಂದು ಕೋರ್ಟ್​ಗೆ ಹಾಜರುಪಡಿಸಬೇಕಾಗಿದೆ. ಆದ್ರೆ ಅದಕ್ಕೂ ಮುನ್ನ.. ವಿಚಾರಣೆ ವೇಳೆ ಅಸಹಕಾರ ಚಳುವಳಿ ಮುಂದುವರಿಸಿರುವ ಸಂಜನಾ ಕುರಿತು.. ಸಿಸಿಬಿ ಪೊಲೀಸರು ಪ್ರಕರಣದಲ್ಲಿ ಸರಿಯಾಗಿ ವರ್ಕ್​ ಮಾಡಿದ್ದಾರೆ. ಕಳೆದ ವಾರ ಸಿಸಿಬಿ ಪೊಲೀಸರು ಇಂದಿರಾನಗರದಲ್ಲಿರುವ ಸಂಜನಾ ಮನೆಗೆ ಹೋಗಿ ಅವರನ್ನು ವಶಕ್ಕೆ ತೆಗೆದುಕೊಂಡು, ತಮ್ಮ ಕಚೇರಿಗೆ ಕರೆತಂದಿದ್ದರು. ಸಿಸಿಬಿ ಇನ್ನೇನು ತನ್ನ ಮನೆ ಮೇಲೆ ರೇಡ್ ಮಾಡುತ್ತದೆ […]

ತನ್ನ ಲಾಸ್ಟ್​ ಕಾಲ್​ ಡಿಟೇಲ್ ಮುಳುವಾಗಲಿದೆ ‘ಪಾರ್ಟಿ ಅನಿಮಲ್’ ಸಂಜನಾಗೆ! ಹೇಗೆ?
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:Sep 14, 2020 | 9:52 AM

[lazy-load-videos-and-sticky-control id=”ZgOt04WK2Is”]

ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟಿನ ಪ್ರಕರಣದಲ್ಲಿ ಬಂಧಿತರಾಗಿರುವ ಸೆಲೆಬ್ರಿಟಿ ನಟಿ, ಪಾರ್ಟಿ ಅನಿಮಲ್ ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ಇಂದು ಕೋರ್ಟ್​ಗೆ ಹಾಜರುಪಡಿಸಬೇಕಾಗಿದೆ. ಆದ್ರೆ ಅದಕ್ಕೂ ಮುನ್ನ.. ವಿಚಾರಣೆ ವೇಳೆ ಅಸಹಕಾರ ಚಳುವಳಿ ಮುಂದುವರಿಸಿರುವ ಸಂಜನಾ ಕುರಿತು.. ಸಿಸಿಬಿ ಪೊಲೀಸರು ಪ್ರಕರಣದಲ್ಲಿ ಸರಿಯಾಗಿ ವರ್ಕ್​ ಮಾಡಿದ್ದಾರೆ. ಕಳೆದ ವಾರ ಸಿಸಿಬಿ ಪೊಲೀಸರು ಇಂದಿರಾನಗರದಲ್ಲಿರುವ ಸಂಜನಾ ಮನೆಗೆ ಹೋಗಿ ಅವರನ್ನು ವಶಕ್ಕೆ ತೆಗೆದುಕೊಂಡು, ತಮ್ಮ ಕಚೇರಿಗೆ ಕರೆತಂದಿದ್ದರು. ಸಿಸಿಬಿ ಇನ್ನೇನು ತನ್ನ ಮನೆ ಮೇಲೆ ರೇಡ್ ಮಾಡುತ್ತದೆ ಎಂಬುದನ್ನು ಅರಿತ ಸಂಜನಾ, ಕೊನೆಯ ಬಾರಿಗೆ ಎಂಬಂತೆ ಒಬ್ಬರಿಗೆ ಮೊಬೈಲ್ ಕರೆ ಮಾಡಿದ್ದರು. ಅದೇ ಈಗ ಸಂಜನಾಗೆ ಪ್ರಕರಣದಲ್ಲಿ ಮುಳುವಾಗಿರುವುದು.  ಸಂಜನಾ ಅಂದು ಮೊಬೈಲ್​ ಕರೆ ಮಾಡಿದ್ದು ಯಾರಿಗಪ್ಪಾ ಅಂದ್ರೆ ಕೊಲೊಂಬೋದ ಕ್ಯಾಸಿನೋ ಗೆಳೆಯ ಶೇಖ್ ಫಾಝಿಲ್​ಗೆ!

ಅಂದಹಾಗೆ ಸಿಸಿಬಿ ಪೊಲೀಸರು ಡ್ರಗ್ಸ್​ ದಂಧೆ ಪ್ರಕರಣ ಬಿಚ್ಚಿಕೊಂಡಾಗಿನಿಂದ ಇದೇ ಪಾಖಂಡಿ ಫಾಝಿಲ್​ನ ಬೆನ್ನುಹತ್ತಿದ್ದಾರೆ. ಆದ್ರೆ ಅವನ Where abouts  ಇದುವರೆಗೂ ಗೊತ್ತಾಗಿಲ್ಲ. ಆದ್ರೆ ಇದೇ ಸಂಜನಾಗೆ ನೇರವಾಗಿ ಮೊಬೈಲ್​ ಕರೆಗೆ ಸಿಕ್ಕಿದ್ದಾನೆ. ತನ್ಮೂಲಕ ಸಂಜನಾ ಮತ್ತು ಫಾಝಿಲ್​ ಸಿಸಿಬಿ ಪೊಲೀಸರಿಗೆ ಇನ್ನೂ ಹತ್ತಿರವಾಗಿದ್ದಾರೆ! ಈಗಾಗಲೇ ತಮ್ಮ ವಶದಲ್ಲಿರುವ ಸಂಜನಾ ಮೇಲಿನ ಪಕಡ್​ಬಂಧಿ ಸಿಸಿಬಿ ಪೊಲೀಸರಿಗೆ ಬಿಗಿಯಾಗಿದ್ದರೆ, ಅತ್ತ ಪಾಖಂಡಿ ಫಾಝಿಲ್​ನ ಸುಳಿವೂ ಸಹ ಸಿಸಿಬಿ ವ್ಯಾಪ್ತಿ ಪ್ರದೇಶಕ್ಕೆ ದೊರೆಯುತ್ತಿದೆ.

ನಿಮಗೂ, ಮತ್ತೊಬ್ಬ ಆರೋಪಿ ಶೇಖ್ ಫಾಝಿಲ್​ಗೂ ಎತ್ತಣ ಸಂಬಂಧ? ಅಷ್ಟಕ್ಕೂ ನಿಮ್ಮ ಕಾಲ್​ ಡಿಟೇಲ್ಸ್ ಪ್ರಕಾರ ನೀವು ಕೊನೆಯ ಕರೆ ಅವನಿಗೇ ಮಾಡಿದ್ದೀರಿ! ಯಾಕೆ? ವಿಷಯ ಏನು ಎಂದು ಸಿಸಿಬಿ ಇನ್ಸ್​ಪೆಕ್ಟರ್​ ಅಂಜುಮಾಲಾ ಸಂಜನಾರನ್ನು ಅದಾಗಲೇ ಗದರಿಕೊಂಡಿದ್ದಾರೆ. ಸಂಜನಾ ಬೆಬ್ಬೆಬ್ಬೆ ಎಂದಿದ್ದಾರೆ. ಈ ಕರೆಯೇ ಇಂದು ಕೋರ್ಟ್​ನಲ್ಲಿ ಸಂಜನಾ ವಿರುದ್ಧ ಪ್ರಮುಖ ಸಾಕ್ಷ್ಯ ನುಡಿಯಲಿದೆ!

ಇದನ್ನೂ ಓದಿ:

ಕ್ಯಾಸಿನೋ ಫಾಝಿಲ್ ವಿಷವ್ಯೂಹ ಹೆಣೆಯುತ್ತಿದ್ದು ಹೇಗೆ? ಇಂಥಾ ನಟಿಯರೇ ಸಾಫ್ಟ್​ ಟಾರ್ಗೆಟ್!

ನಟಿ ಸಂಜನಾ ಕಳ್ಳಾಟ: ಮೊಬೈಲ್​ನಲ್ಲಿದ್ದ ವಾಟ್ಸಪ್ ಮೆಸೆಜ್ Delete! ಆದ್ರೆ..

Published On - 9:34 am, Mon, 14 September 20

ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ