ಸಂಜನಾ Drugs ಪ್ರಕರಣ ಒಂದೇ ಅಲ್ಲ; ಬೇರೆ ಅಕ್ರಮ ದಂಧೆಯಲ್ಲೂ ಭಾಗಿಯಾಗಿರುವ ಶಂಕೆ

| Updated By: ಸಾಧು ಶ್ರೀನಾಥ್​

Updated on: Sep 11, 2020 | 1:55 PM

ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಟಿ ಸಂಜನಾ ಗಲ್ರಾನಿ ಕೇವಲ ಡ್ರಗ್ಸ್ ಪ್ರಕರಣ ಒಂದರಲ್ಲೇ ಅಲ್ಲ, ಬೇರೆ ಬೇರೆ ಅಕ್ರಮ ದಂಧೆಯಲ್ಲೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಹವಾಲಾ, ಮಾನಿನಿಯರ ರವಾನೆ ಮತ್ತಿತ್ತರ ಅಕ್ರಮ ದಂಧೆಗಳಲ್ಲಿ ದೊಡ್ಡಮಟ್ಟದಲ್ಲಿ ಪಾಲ್ಗೊಂಡಿರುವ ಆರೋಪ ಕೇಳಿಬಂದಿದೆ. ಜೊತೆಗೆ, ಈ ಚಟುವಟಿಕೆಗಳಲ್ಲಿ ಒಂದೇ ಸಮುದಾಯದ ಮುಖಂಡರನ್ನ ಹೆಚ್ಚಾಗಿ ಬಳಸಿಕೊಂಡಿರುವುದಾಗಿ ಕೇಳಿಬಂದಿದೆ. ಶೇಖ್​ ಫಾಝಿಲ್​ , ನಿಯಾಜ್, ಡಾ.ಅಜೀಜ್ ಪಾಷಾ ಹಾಗೂ ಜಮೀರ್ ಹೀಗೆ ಒಂದೇ ಸಮುದಾಯಕ್ಕೆ ಸೇರಿದ ಹಲವರನ್ನು […]

ಸಂಜನಾ Drugs ಪ್ರಕರಣ ಒಂದೇ ಅಲ್ಲ; ಬೇರೆ ಅಕ್ರಮ ದಂಧೆಯಲ್ಲೂ ಭಾಗಿಯಾಗಿರುವ ಶಂಕೆ
Follow us on

ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಟಿ ಸಂಜನಾ ಗಲ್ರಾನಿ ಕೇವಲ ಡ್ರಗ್ಸ್ ಪ್ರಕರಣ ಒಂದರಲ್ಲೇ ಅಲ್ಲ, ಬೇರೆ ಬೇರೆ ಅಕ್ರಮ ದಂಧೆಯಲ್ಲೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಹವಾಲಾ, ಮಾನಿನಿಯರ ರವಾನೆ ಮತ್ತಿತ್ತರ ಅಕ್ರಮ ದಂಧೆಗಳಲ್ಲಿ ದೊಡ್ಡಮಟ್ಟದಲ್ಲಿ ಪಾಲ್ಗೊಂಡಿರುವ ಆರೋಪ ಕೇಳಿಬಂದಿದೆ. ಜೊತೆಗೆ, ಈ ಚಟುವಟಿಕೆಗಳಲ್ಲಿ ಒಂದೇ ಸಮುದಾಯದ ಮುಖಂಡರನ್ನ ಹೆಚ್ಚಾಗಿ ಬಳಸಿಕೊಂಡಿರುವುದಾಗಿ ಕೇಳಿಬಂದಿದೆ.

ಶೇಖ್​ ಫಾಝಿಲ್​ , ನಿಯಾಜ್, ಡಾ.ಅಜೀಜ್ ಪಾಷಾ ಹಾಗೂ ಜಮೀರ್ ಹೀಗೆ ಒಂದೇ ಸಮುದಾಯಕ್ಕೆ ಸೇರಿದ ಹಲವರನ್ನು ಬಳಸಿಕೊಂಡಿರುವುದರ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಇದಲ್ಲದೆ, ಈ ಅಕ್ರಮ ಚಟುವಟಿಕೆಗಳಿಗಾಗಿ ಕೆಲವೊಂದು ಫ್ಲ್ಯಾಟ್‌ಗಳನ್ನು ಕೂಡ ಬೇನಾಮಿಯಾಗಿ ಬಳಸಿಕೊಂಡಿರುವ ಗುಮಾನಿ ವ್ಯಕ್ತವಾಗಿದೆ. ಹೀಗಾಗಿ, ನಟಿ ಸಂಜನಾರನ್ನ ED ಅಧಿಕಾರಿಗಳು ವಿಚಾರಣೆ ಮಾಡುವ ಸಾಧ್ಯತೆಯಿದೆ. ಈಗಾಗಲೇ ಬಂಧಿತ ವಿರೇನ್ ಖನ್ನಾ , ರಾಹುಲ್‌ನನ್ನ ವಿಚಾರಣೆ ನಡೆಸಿ ಮಾಹಿತಿ ಪಡೆದಿರುವ ED ಅಧಿಕಾರಿಗಳು ಸಂಜನಾಳನ್ನು ಸಹ ವಿಚಾರಣೆ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಈಗಾಗಲೇ, ಸಂಜನಾ 7ರಿಂದ8 ಅಕ್ರಮ ಫ್ಲ್ಯಾಟ್‌ಗಳನ್ನ ಗಳಿಸಿರುವ ಆರೋಪ ಕೇಳಿಬಂದಿದೆ. ಒಂದು ಫ್ಲ್ಯಾಟ್‌ಗೆ ಕೋಟ್ಯಂತರ ರೂಪಾಯಿ ಇದ್ರು ಸಹ ಅತೀ ಕಡಿಮೆ ಬೆಲೆಗೆ ಪಡೆದಿರುವ ಬಗ್ಗೆ ದಾಖಲೆಗೆಳು ಸಿಕ್ಕಿದೆ. ಇನ್ನೂ ಆಕೆಯ ಮೊಬೈಲ್‌ನಲ್ಲಿ ಸಹ ಆಸ್ತಿಪಾಸ್ತಿಗೆ ಸಂಬಂಧಿಸಿದಂತೆ ಮಾಹಿತಿ ಲಭ್ಯವಾಗಿರುವುದಾಗಿ ತಿಳಿದುಬಂದಿದೆ.