ಕಂಗನಾ BJP ಸೇರಿದರೆ ತುಂಬು ಹೃದಯದಿಂದ ಸ್ವಾಗತಿಸ್ತೇವೆ -ಕೇಂದ್ರ ಸಚಿವ ಅಠಾವಳೆ
ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಏನಾದರೂ BJP ಅಥವಾ ನನ್ನ ಪಕ್ಷವಾದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(A) ಗೆ ಸೇರಲು ಬಯಸಿದರೆ ಅವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ ಎಂದು ಕೇಂದ್ರ ಸಚಿವ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(A) ಅಧ್ಯಕ್ಷ ರಾಮದಾಸ್ ಅಠವಾಳೆ ಹೇಳಿದ್ದಾರೆ. ನಟಿಯ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆ ಧ್ವಂಸ ಮಾಡಿದ ಬಳಿಕ ಆಕೆಯ ಮನೆಗೆ ಭೇಟಿ ಕೊಟ್ಟಿದ್ದ ಕೇಂದ್ರ ಸಚಿವ ಅಠವಾಳೆ, ಬಾಲಿವುಡ್ ನಟ ಸುಶಾಂತ್ ಸಿಂಗ್ ನಿಗೂಢ ಸಾವಿನ ಬಗ್ಗೆ […]
ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಏನಾದರೂ BJP ಅಥವಾ ನನ್ನ ಪಕ್ಷವಾದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(A) ಗೆ ಸೇರಲು ಬಯಸಿದರೆ ಅವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ ಎಂದು ಕೇಂದ್ರ ಸಚಿವ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(A) ಅಧ್ಯಕ್ಷ ರಾಮದಾಸ್ ಅಠವಾಳೆ ಹೇಳಿದ್ದಾರೆ.
ನಟಿಯ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆ ಧ್ವಂಸ ಮಾಡಿದ ಬಳಿಕ ಆಕೆಯ ಮನೆಗೆ ಭೇಟಿ ಕೊಟ್ಟಿದ್ದ ಕೇಂದ್ರ ಸಚಿವ ಅಠವಾಳೆ, ಬಾಲಿವುಡ್ ನಟ ಸುಶಾಂತ್ ಸಿಂಗ್ ನಿಗೂಢ ಸಾವಿನ ಬಗ್ಗೆ ಕಂಗನಾ ನೀಡಿದ ಹೇಳಿಕೆಗಳಿಂದ ಅವರ ಮೇಲೆ ಸೇಡು ತೀರಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಮುಂಬೈ -POK ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕುರಿತು ಹೇಳಿಕೆಗಳನ್ನು ನೀಡಿದ್ದ ಕಂಗನಾ ರಣಾವತ್ ಬಹಳಷ್ಟು ಸುದ್ದಿ ಮಾಡಿದ್ದರು. ಜೊತೆಗೆ, ಕೆಲವು ದಿನಗಳ ಹಿಂದೆ ಇವರ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಗಳು, ಕಟ್ಟಡ ನಿಯಮ ಉಲ್ಲಂಘನೆ ಅಡಿಯಲ್ಲಿ ಧ್ವಂಸಗೊಳಿಸಿದ್ದರು.
ಇದಾದ ಬಳಿಕ ಸಚಿವ ಅಠವಾಳೆ ನಟಿಯ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸದ್ಯ ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇಲ್ಲ. ಚಿತ್ರರಂಗದಲ್ಲಿ ನಾನು ಕೆಲಸ ಮಾಡುವವರೆಗೂ ನಾನು ರಾಜಕೀಯ ಕಣಕ್ಕೆ ಇಳಿಯುವುದಿಲ್ಲ ಎಂದು ಕಂಗನಾ, ರಾಮದಾಸ್ ಅಠವಾಳೆಗೆ ತಿಳಿಸಿದರಂತೆ.
Published On - 2:34 pm, Fri, 11 September 20