ಸಂಜನಾಗೆ CCB ಬುಲಾವ್ ಸಾಧ್ಯತೆ, ಆದ್ರೆ ದಿಢೀರನೆ ಷೇರ್ ಆಗಿದೆ ಈ ಫೋಟೋ!

| Updated By: ಸಾಧು ಶ್ರೀನಾಥ್​

Updated on: Sep 07, 2020 | 12:21 PM

ಬೆಂಗಳೂರು: ಸ್ಯಾಂಡಲ್‌ವುಡ್​ನಲ್ಲಿ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಟಿ ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್​ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಸಂಜನಾಗೆ ಡವ ಡವ ಶುರುವಾಗಿದೆ. ಇದು ಯಾವುದರ ಸೂಚಕವೋ ಸಿಸಿಬಿ ಅಧಿಕಾರಿಗಳೇ ಅರ್ಥ ಮಾಡಿಕೊಳ್ಳಬೇಕು! ಈಗಾಗಲೇ ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿರುವ ರಾಹುಲ್‌ಗೆ ನಟಿ ಸಂಜನಾ ರಾಖಿ ಕಟ್ಟಿರುವ ಫೋಟೋ ಒಂದು ನಿನ್ನೆ ರಾತ್ರಿ 12 […]

ಸಂಜನಾಗೆ CCB ಬುಲಾವ್ ಸಾಧ್ಯತೆ, ಆದ್ರೆ ದಿಢೀರನೆ ಷೇರ್ ಆಗಿದೆ ಈ ಫೋಟೋ!
Follow us on

ಬೆಂಗಳೂರು: ಸ್ಯಾಂಡಲ್‌ವುಡ್​ನಲ್ಲಿ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಟಿ ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್​ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಸಂಜನಾಗೆ ಡವ ಡವ ಶುರುವಾಗಿದೆ.

ಇದು ಯಾವುದರ ಸೂಚಕವೋ ಸಿಸಿಬಿ ಅಧಿಕಾರಿಗಳೇ
ಅರ್ಥ ಮಾಡಿಕೊಳ್ಳಬೇಕು!

ಈಗಾಗಲೇ ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿರುವ ರಾಹುಲ್‌ಗೆ ನಟಿ ಸಂಜನಾ ರಾಖಿ ಕಟ್ಟಿರುವ ಫೋಟೋ ಒಂದು ನಿನ್ನೆ ರಾತ್ರಿ 12 ಗಂಟೆ ಸಮಯದಲ್ಲಿ ಶೇರ್ ಮಾಡಿದ್ದಾರೆ. ತಮಗೆಲ್ಲಿ ಸಿಸಿಬಿ ನೋಟಿಸ್ ಕೊಡ್ತಾರೋ ಎಂಬ ಆತಂಕಕ್ಕಿಂತ ರಾಹುಲ್ ಕಥೆ ಏನೋ ಎಂಬ ಚಿಂತೆಯೇ ಸಂಜನಾಗೆ ಹೆಚ್ಚಾಗಿದೆ. ತಮ್ಮ ವಾಟ್ಸಾಪ್ ಗ್ರೂಪ್​ನಲ್ಲಿ ಅವರು.. ‘ನೋಡಿ ನನ್ ಮೊಬೈಲ್​ನಲ್ಲಿ ಈ ಫೋಟೋ ಇತ್ತು’ ಎಂದು ರಾಹುಲ್​ಗೆ ರಾಖಿ ಕಟ್ಟಿರುವ ಫೋಟೋ ಶೇರ್ ಮಾಡಿದ್ದಾರೆ.

ಸಿಸಿಬಿ ಬಂಧಿಸಿದ ದಿನದಿಂದ ಸಂಜನಾ, ರಾಹುಲ್ ಪರ ನಿಂತಿದ್ದಾರೆ. ಆರು ದಿನಗಳಿಂದ ಸಿಸಿಬಿ ಅಧಿಕಾರಿಗಳು ರಾಹುಲ್ ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಶುಕ್ರವಾರ ರಾಹುಲ್​ನನ್ನು ಸಂಜನಾ ಮನೆ ಬಳಿ ಕರೆತಂದು ಸ್ಥಳ ಮಹಜರು ಸಹ ಮಾಡಿದ್ದರು. ಸಂಜನಾಗೆ ರಾಹುಲ್ ಆಪ್ತನಾದ ಕಾರಣ ವಿಚಾರಣೆಗೆ ಬರುವಂತೆ ಸಿಸಿಬಿ ಯಾವುದೇ ಕ್ಷಣದಲ್ಲಿ ಸಂಜನಾಗೆ ನೊಟೀಸ್ ನೀಡುವ ಸಾಧ್ಯತೆ ಇದೆ.

ತಾಯಿ ಜೊತೆಗೂಡಿ Temple Run ಮುಂದುವರಿಸಿದ ಸಂಜನಾ
ಈ ಮಧ್ಯೆ, ಸಂಜನಾ ಗಲ್ರಾನಿ ತಮ್ಮ ತಾಯಿಯ ಜೊತೆಗೂಡಿ Temple Run ಮುಂದುವರಿಸಿದ್ದಾರೆ. ಕಳೆದ ವಾರವೂ ಶಿವನ ಪಾದಕ್ಕೆ ಎರಗಿದ್ದ ಸಂಜನಾ ಇಂದೂ ಶಿವನ ದರ್ಶನಕ್ಕೆ ಹೊರಟಿದ್ದಾರೆ. ಇದೀಗತಾನೆ ಗಲ್ರಾನಿ, ಅಮ್ಮನೊಂದಿಗೆ ‌ದೇವರ ದರ್ಶನಕ್ಕೆ ಹೊರಟರು.

ಓದಿ: ತಾಯಿಯ ಜತೆ ಶಿವನ ಪಾದಕ್ಕೆ ಅಡ್ಡಬಿದ್ದ ನಟಿ ಸಂಜನಾ

Published On - 10:04 am, Mon, 7 September 20