ಪೊಲೀಸ್​ ವಾಹನದಲ್ಲಿ ವಿಶ್ರಾಂತಿ ಪಡೆದ ಸಂಜನಾಗೆ ಶುರುವಾಯ್ತು ಕೊರೊನಾ ಢವಢವ, ಯಾಕೆ?

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ನಟಿ ಸಂಜನಾಗೆ ಇದೀಗ ಮತ್ತೊಂದು ತಲೆ ನೋವು ಶುರುವಾಗಿದೆ. ಗಂಡ ಹೆಂಡತಿ ಸಿನಿಮಾ ಖ್ಯಾತಿಯ ಬೆಡಗಿಗೆ ಇದೀಗ ಕೊರೊನಾ ಆತಂಕ ಉಂಟಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ನ್ಯಾಯಾಂಗ ಬಂಧನ ಆದೇಶದ ಹಿನ್ನೆಲೆಯಲ್ಲಿ ಸಂಜನಾಳನ್ನ ಮಹಿಳಾ ಪೊಲೀಸ್ ಸಿಬ್ಬಂದಿ ಜೈಲಿಗೆ ಕರೆದೊಯ್ದಿದ್ದಿದ್ದರು. ವಾಹನದಲ್ಲಿ ಸಂಜನಾಳ ಪಕ್ಕದಲ್ಲೇ ಮಹಿಳಾ PSI ಒಬ್ಬರು ಕುಳಿತುಕೊಂಡು ಪ್ರಯಾಣಿಸಿದ್ದರು. ಜೊತೆಗೆ, ವಾಹನದ ಲಾಸ್ಟ್ ಸೀಟ್​ನಲ್ಲಿ ಆ ಮಹಿಳಾ […]

ಪೊಲೀಸ್​ ವಾಹನದಲ್ಲಿ ವಿಶ್ರಾಂತಿ ಪಡೆದ ಸಂಜನಾಗೆ ಶುರುವಾಯ್ತು ಕೊರೊನಾ ಢವಢವ, ಯಾಕೆ?
Edited By:

Updated on: Sep 20, 2020 | 2:13 PM

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ನಟಿ ಸಂಜನಾಗೆ ಇದೀಗ ಮತ್ತೊಂದು ತಲೆ ನೋವು ಶುರುವಾಗಿದೆ. ಗಂಡ ಹೆಂಡತಿ ಸಿನಿಮಾ ಖ್ಯಾತಿಯ ಬೆಡಗಿಗೆ ಇದೀಗ ಕೊರೊನಾ ಆತಂಕ ಉಂಟಾಗಿದೆ.

ಕಳೆದ ನಾಲ್ಕು ದಿನಗಳ ಹಿಂದೆ ನ್ಯಾಯಾಂಗ ಬಂಧನ ಆದೇಶದ ಹಿನ್ನೆಲೆಯಲ್ಲಿ ಸಂಜನಾಳನ್ನ ಮಹಿಳಾ ಪೊಲೀಸ್ ಸಿಬ್ಬಂದಿ ಜೈಲಿಗೆ ಕರೆದೊಯ್ದಿದ್ದಿದ್ದರು. ವಾಹನದಲ್ಲಿ ಸಂಜನಾಳ ಪಕ್ಕದಲ್ಲೇ ಮಹಿಳಾ PSI ಒಬ್ಬರು ಕುಳಿತುಕೊಂಡು ಪ್ರಯಾಣಿಸಿದ್ದರು. ಜೊತೆಗೆ, ವಾಹನದ ಲಾಸ್ಟ್ ಸೀಟ್​ನಲ್ಲಿ ಆ ಮಹಿಳಾ PSI ಹೆಗಲ ಮೇಲೆ ಸಂಜನಾ ಗಲ್ರಾನಿ ತಲೆ ಒರಗಿಸಿ ವಿಶ್ರಾಂತಿ ಸಹ ಪಡೆದಿದ್ದರು. ಇದೀಗ, ನಟಿಯ ಪಕ್ಕದಲ್ಲಿದ್ದ ಆ ಮಹಿಳಾ PSIಗೆ ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ, ಪರಪ್ಪನ ಅಗ್ರಹಾರಕ್ಕೆ ತೆರಳಿದ್ದ ಪೊಲೀಸ್ ಟೀಂಗೆ ಕೊವಿಡ್​ ಟೆಸ್ಟ್ ಮಾಡಿಸಲಾಗಿದೆ. ಜೊತೆಗೆ, ಸಂಜನಾಗೆ ಕೊರೊನಾ ಟೆಸ್ಟ್ ಮಾಡಿಸುವ ಸಾಧ್ಯತೆ ಇದೆ. ಇನ್ನೂ ಈ ಮಾಹಿತಿ ತಿಳಿದ ಸಂಜನಾ ಫುಲ್ ಟೆನ್ಷನ್ ಆಗಿದ್ದಾರಂತೆ. ಪೊಲೀಸರು ಇಂದು ಜೈಲಿನಲ್ಲೇ ಸಂಜನಾಳನ್ನ ಕೊರೊನಾ ಟೆಸ್ಟ್ ಮಾಡಿಸಲಿದ್ದಾರೆ.