ಹವಾಲಾ ದಂಧೆ: ED ಪ್ರಶ್ನೆಗಳಿಗೆ ಜೈಲುಹಕ್ಕಿ ಸಂಜನಾ ಕಕ್ಕಾಬಿಕ್ಕಿ

| Updated By: ಸಾಧು ಶ್ರೀನಾಥ್​

Updated on: Sep 29, 2020 | 1:42 PM

ಬೆಂಗಳೂರು: ಡ್ರಗ್ಸ್ ನಶೆಯ ನಂಟಲ್ಲಿ ಜೈಲಿ ಸೇರಿರುವ ನಟಿ ಸಂಜನಾ ಗಲ್ರಾನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹವಾಲಾ ದಂಧೆಯಲ್ಲಿ ಸಂಜನಾ ಹಣ ತೊಡಗಿಸಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ED ಅಧಿಕಾರಿಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲೇ ಸಂಜನಾ ಗಲ್ರಾನಿ ವಿಚಾರಣೆ ನಡೆದಿದೆ. ಸಂಜನಾ ಬಿಟ್ ಕಾಯಿನ್ ವ್ಯವಹಾರದಲ್ಲಿ ಭಾಗಿ?: ಹವಾಲಾ ದಂಧೆಯಲ್ಲಿ ಹಣ ತೊಡಗಿಸಿರುವ ಬಗ್ಗೆ ತನಿಖೆ ನಡೆಸಲಾಗಿದೆ. ವಿಚಾರಣೆ ವೇಳೆ ಅಧಿಕಾರಿಗಳು ಹಲವು ಪ್ರಶ್ನೆಗಳನ್ನು ಕೇಳಿದ್ರು. ಈ ವೇಳೆ ED ಪ್ರಶ್ನೆಗಳಿಗೆ ಸಂಜನಾ ಕಕ್ಕಾಬಿಕ್ಕಿಯಾಗಿದ್ದಾರೆಂತೆ. ಸಂಜನಾ ವಾಟ್ಸಾಪ್ […]

ಹವಾಲಾ ದಂಧೆ: ED ಪ್ರಶ್ನೆಗಳಿಗೆ ಜೈಲುಹಕ್ಕಿ ಸಂಜನಾ ಕಕ್ಕಾಬಿಕ್ಕಿ
Follow us on

ಬೆಂಗಳೂರು: ಡ್ರಗ್ಸ್ ನಶೆಯ ನಂಟಲ್ಲಿ ಜೈಲಿ ಸೇರಿರುವ ನಟಿ ಸಂಜನಾ ಗಲ್ರಾನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹವಾಲಾ ದಂಧೆಯಲ್ಲಿ ಸಂಜನಾ ಹಣ ತೊಡಗಿಸಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ED ಅಧಿಕಾರಿಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲೇ ಸಂಜನಾ ಗಲ್ರಾನಿ ವಿಚಾರಣೆ ನಡೆದಿದೆ.

ಸಂಜನಾ ಬಿಟ್ ಕಾಯಿನ್ ವ್ಯವಹಾರದಲ್ಲಿ ಭಾಗಿ?:
ಹವಾಲಾ ದಂಧೆಯಲ್ಲಿ ಹಣ ತೊಡಗಿಸಿರುವ ಬಗ್ಗೆ ತನಿಖೆ ನಡೆಸಲಾಗಿದೆ. ವಿಚಾರಣೆ ವೇಳೆ ಅಧಿಕಾರಿಗಳು ಹಲವು ಪ್ರಶ್ನೆಗಳನ್ನು ಕೇಳಿದ್ರು. ಈ ವೇಳೆ ED ಪ್ರಶ್ನೆಗಳಿಗೆ ಸಂಜನಾ ಕಕ್ಕಾಬಿಕ್ಕಿಯಾಗಿದ್ದಾರೆಂತೆ. ಸಂಜನಾ ವಾಟ್ಸಾಪ್ ಮೆಸೇಜ್‌ಗಳ ಪರಿಶೀಲನೆ ನಡೆಸಿದ ಇಡಿ ವಾಟ್ಸಾಪ್ ಮೂಲಕ ಹವಾಲಾ ವ್ಯವಹಾರ ಬಗ್ಗೆಯೂ ತನಿಖೆ ನಡೆಸಿದ್ದಾರೆ.

ಸಂಜನಾ ಬಿಟ್ ಕಾಯಿನ್ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಕಳ್ಳದಾರಿಯಲ್ಲಿ ಆನ್ ಲೈನ್ ಮೂಲಕ ವ್ಯವಹಾರ ನಡೆಸುವ ಬಿಟ್ ಕಾಯಿನ್ ದಂಧೆ ಇದಾಗಿದೆ. ಡ್ರಗ್ಸ್ ಡೀಲ್​ನಲ್ಲಿ ಬರ್ತಿದ್ದ ಹಣ ಹವಾಲಾದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಈ ಎಲ್ಲಾ ಸಂಶಯಗಳ ಮೇಲೆ EDಯಿಂದ ವಿಚಾರಣೆ ನಡೆಯುತ್ತಿದೆ.