ಗೆಳೆಯ ಸಂಚಾರಿ ವಿಜಯ್​ ಅಗಲಿಕೆ ನೋವಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡ ನೀನಾಸಂ ಸತೀಶ್​

ಸಂಚಾರಿ ವಿಜಯ್​ ಮೃತಪಟ್ಟ ನೋವನ್ನು ಸತೀಶ್​ಗೆ ಮರೆಯೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಜನ್ಮದಿನ ಆಚರಿಸಿಕೊಳ್ಳಲೇ ಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಗೆಳೆಯ ಸಂಚಾರಿ ವಿಜಯ್​ ಅಗಲಿಕೆ ನೋವಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡ ನೀನಾಸಂ ಸತೀಶ್​

Updated on: Jun 18, 2021 | 9:52 PM

ನೀನಾಸಂ ಸತೀಶ್​ ಹಾಗೂ ಸಂಚಾರಿ ವಿಜಯ್​ ಆಪ್ತ ಗೆಳೆಯರಾಗಿದ್ದರು. ವಿಜಯ್​ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರನ್ನು ಕಳೆದುಕೊಂಡಿದ್ದಕ್ಕೆ ವಿಜಯ್​ಗೆ ಸಾಕಷ್ಟು ನೋವುಂಟಾಗಿದೆ. ಈ ನೋವಿನ ಹಿನ್ನೆಲೆಯಲ್ಲಿ ಈ ಬಾರಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಸತೀಶ್​ ಘೋಷಣೆ ಮಾಡಿದ್ದಾರೆ.

ಜೂನ್​ 20 ಸತೀಶ್​ ಜನ್ಮದಿನ. ಪ್ರತಿ ವರ್ಷ ಅವರು ಅಭಿಮಾನಿಗಳ ಜತೆ ಸೇರಿ ಕೇಕ್​ ಕತ್ತರಿಸುತ್ತಿದ್ದರು. ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದರು. ಆದರೆ, ಸಂಚಾರಿ ವಿಜಯ್​ ಮೃತಪಟ್ಟ ನೋವನ್ನು ಸತೀಶ್​ಗೆ ಮರೆಯೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಜನ್ಮದಿನ ಆಚರಿಸಿಕೊಳ್ಳಲೇ ಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಗೆಳೆಯರೇ ಇದೇ 20 ನನ್ನ ಹುಟ್ಟು ಹಬ್ಬ. ವಿಜಿ ಇಲ್ಲದ ಈ ಸಂದರ್ಭದಲ್ಲಿ ತುಂಬ ನೋವಿನಲ್ಲಿ ನನ್ನ ಗೆಳೆಯರ ಬಳಗವಿದೆ. ಹಾಗಾಗಿ ಆ ದಿನ ಯಾವುದೇ ಸಂಭ್ರಮಗಳಿರುವುದಿಲ್ಲ. ಬಿಡುಗಡೆಯಾಗಬೇಕಿದ್ದ ಪೆಟ್ರೋಮ್ಯಾಕ್ಸ್ ಟೀಸರ್ ಕೂಡ ಮುಂದೂಡಿದ್ದೇವೆ ಥ್ಯಾಂಕ್ ಯೂ’ ಎಂದು ಬರೆದುಕೊಂಡಿದ್ದಾರೆ.

ವಿಜಯ್​ ಆಸ್ಪತ್ರೆಗೆ ದಾಖಲಾಗಿದ್ದ ದಿನ ಮಾಧ್ಯಮಗಳ ಜತೆ ಮಾತನಾಡಿದ್ದ ಸತೀಶ್​, ‘ವಿಜಯ್​ಗೆ ಯಾವುದೇ ತೊಂದರೆ ಆಗಿಲ್ಲ. ಅವರು ಆರೋಗ್ಯವಾಗಿದ್ದಾರೆ. ಆಪರೇಷನ್​ ಮಾಡಿದ್ದರಿಂದ ಪ್ರಜ್ಞೆ ಬಂದಿಲ್ಲ ಅಷ್ಟೇ’ ಎಂದಿದ್ದರು. ಮರುದಿನ ಮಾತನಾಡಿದ್ದ ಸತೀಶ್​ ‘ನಾನು ಮಾಧ್ಯಮಗಳ ಎದುರು ಸುಳ್ಳು ಹೇಳಿದ್ದೆ. ವಿಜಯ್​ ಆರೋಗ್ಯ ತುಂಬಾ ಗಂಭೀರವಾಗಿತ್ತು. ಆದರೆ, ಅದನ್ನು ಒಪ್ಪಿಕೊಳ್ಳೋಕೆ ಸಾಧ್ಯವಾಗುತ್ತಿರಲಿಲ್ಲ. ಅವರು ಇರುವುದಿಲ್ಲ ಎನ್ನುವುದನ್ನು ಕಲ್ಪಿಸಿಕೊಳ್ಳೋಕೆ ಕಷ್ಟ’ ಎಂದು ಅತ್ತಿದ್ದರು.

ಇತ್ತೀಚೆಗೆ ಸಂಚಾರಿ ವಿಜಯ್​ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯರ ಸತತ ಪ್ರಯತ್ನಗಳ ನಡುವೆಯೂ ವಿಧಿಯಾಟವೇ ಮೇಲುಗೈ ಸಾಧಿಸಿತು. ಸಂಚಾರಿ ವಿಜಯ್​ ಮೃತಪಟ್ಟ ಬಗ್ಗೆ ಜೂನ್​ 15ರಂದು ವೈದ್ಯರು ಘೋಷಣೆ ಮಾಡಿದರು. ನಂತರ ಅವರ ಕಳೇಬರವನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಗೆ ಕೊಂಡೊಯ್ಯಲಾಯಿತು. ಮೂರು ಸುತ್ತು ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಲಿಂಗಾಯತ ವಿಧಿವಿಧಾನಗಳೊಂದಿಗೆ ಗೆಳೆಯನ ತೋಟದಲ್ಲಿ ವಿಜಯ್​ ಅಂತ್ಯಸಂಸ್ಕಾರ ನೆರವೇರಿತು.

ಇದನ್ನೂ ಓದಿ: Actor Satish Ninasam Help : ದಿನಕ್ಕೆ ಸಾವಿರ ಫುಡ್ ಕಿಟ್ ವಿತರಣೆ ಮಾಡ್ತಿರುವ ನಟ ಸತೀಶ್ ನೀನಾಸಂ!

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us