ನಟ ಸತೀಶ್ ನೀನಾಸಂ (Sathish Ninasam) ಅವರು ಕಥೆ ಮತ್ತು ಪಾತ್ರಗಳ ಆಯ್ಕೆಯಲ್ಲಿ ಕಾಳಜಿ ವಹಿಸುತ್ತಾರೆ. ಡಿಫರೆಂಟ್ ಆದ ಕಥೆಯನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ‘ಲೂಸಿಯಾ’ ಸಿನಿಮಾ. 2013ರ ಸೆ.6ರಂದು ಬಿಡುಗಡೆ ಆದ ಆ ಚಿತ್ರದ ಬಗ್ಗೆ ಸಿನಿಪ್ರಿಯರು ಈಗಲೂ ಮಾತನಾಡುತ್ತಾರೆ. ಈಗ ‘ಲೂಸಿಯಾ’ ಸಿನಿಮಾ (Lucia Movie) 10 ವರ್ಷಗಳನ್ನು ಪೂರೈಸಿದೆ. ಆ ಪ್ರಯುಕ್ತ ಸೆಪ್ಟೆಂಬರ್ 6ರಂದು ಈ ಚಿತ್ರ ಮತ್ತೆ ರಿಲೀಸ್ ಆಗುತ್ತಿದೆ. ಅಂದು ದೊಡ್ಡ ಪರದೆಯಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡವರು ಈಗ ನೋಡಿ ಎಂಜಾಯ್ ಮಾಡಬಹುದು. ನಿರ್ದೇಶಕ ಪವನ್ ಕುಮಾರ್ (Pawan Kumar) ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟ ಸಿನಿಮಾ ಇದು.
ನಿರ್ದೇಶಕ ಪವನ್ ಕುಮಾರ್ ಅವರು ಡಿಫರೆಂಟ್ ಆಗಿ ಗುರುತಿಸಿಕೊಂಡಿದ್ದಾರೆ. ‘ಲೂಸಿಯಾ’ ಸಿನಿಮಾದಲ್ಲಿ ಅವರು ಹೇಳಿಕೆ ಕಥೆ ಸಖತ್ ಭಿನ್ನವಾಗಿತ್ತು. ಕನಸು ಮತ್ತು ವಾಸ್ತವದ ಜಗತ್ತನ್ನು ಒಟ್ಟಾಗಿ ತೋರಿಸುವ ಮೂಲಕ ಅವರು ಪ್ರೇಕ್ಷಕರ ಮನ ಗೆದ್ದರು. ಈ ಭಿನ್ನವಾದ ಕಥೆಯನ್ನು ಹೇಳಲು ಅವರು ಬ್ಲಾಕ್ ಆ್ಯಂಡ್ ವೈಟ್ ಮತ್ತು ಕಲರ್ ತಂತ್ರ ಬಳಸಿದ್ದರು. ಈ ಸಿನಿಮಾವನ್ನು ಮತ್ತೊಮ್ಮೆ ಚಿತ್ರಮಂದಿರದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಈಗ ಸಿಗುತ್ತಿದೆ. ಅದು ಸಿನಿಪ್ರಿಯರಿಗೆ ಖುಷಿ ನೀಡಿದೆ.
ಇದನ್ನೂ ಓದಿ: Dhoomam Review: ಸಿಗರೇಟ್ ಬಗ್ಗೆ ಸಂದೇಶ ನೀಡಲು ಎಷ್ಟೆಲ್ಲ ಸರ್ಕಸ್; ಸರಳವಾಗಿಲ್ಲ ‘ಧೂಮಂ’
‘ಲೂಸಿಯಾ’ ಸಿನಿಮಾದಲ್ಲಿ ಸತೀಶ್ ನೀನಾಸಂ ಮತ್ತು ಶ್ರುತಿ ಹರಿಹರನ್ ಅವರು ಜೋಡಿಯಾಗಿ ನಟಿಸಿದ್ದರು. ಇಬ್ಬರ ಕಾಂಬಿನೇಷನ್ ಬಹಳ ಚೆನ್ನಾಗಿ ಮೂಡಿಬಂದಿತ್ತು. ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್ ಮುಂತಾದ ಕಲಾವಿದರು ನಿಭಾಯಿಸಿದ ಪಾತ್ರಗಳು ಕೂಡ ಗಮನ ಸೆಳೆದಿದ್ದವು. ಮಂಡ್ಯ ಸೊಗಡಿನ ಭಾಷೆಯಲ್ಲಿ ಸತೀಶ್ ನೀನಾಸಂ ಅವರು ಹೇಳಿದ ಡೈಲಾಗ್ಗಳು ತುಂಬ ಕ್ಯಾಚಿ ಆಗಿದ್ದವು. ಒಟ್ಟಾರೆ ಈ ಸಿನಿಮಾದ ಮೇಕಿಂಗ್ ಡಿಫರೆಂಟ್ ಆಗಿತ್ತು. ಕ್ರೌಡ್ ಫಂಡಿಂಗ್ ಮೂಲಕ ಈ ಚಿತ್ರ ನಿರ್ಮಾಣ ಆಗಿತ್ತು.
ಇದನ್ನೂ ಓದಿ: ‘ಏನಮ್ಮಿ..’ ಬಳಿಕ ಮತ್ತೊಂದು ಹಿಟ್ ಹಾಡು ನೀಡಿದ ರಚಿತಾ ರಾಮ್-ಸತೀಶ್ ನೀನಾಸಂ; ‘ಮ್ಯಾಟ್ನಿ’ ಗೀತೆಗೆ ಮೆಚ್ಚುಗೆ
‘ಲೂಸಿಯಾ’ ಚಿತ್ರದ ಯಶಸ್ಸಿನಲ್ಲಿ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರ ಕೊಡುಗೆ ಕೂಡ ಇದೆ. ಈ ಸಿನಿಮಾದ ಎಲ್ಲ ಹಾಡುಗಳು ಕೂಡ ಸೂಪರ್ ಹಿಟ್. ಇಂದಿಗೂ ಕೂಡ ಕೇಳುಗರ ಫೇವರಿಟ್ ಪಟ್ಟಿಯಲ್ಲಿ ಈ ಹಾಡುಗಳಿಗೆ ಸ್ಥಾನ ಇದೆ. ‘ನೀ ತೊರೆದ ಘಳಿಗೆಯಲಿ..’, ‘ಯಾಕೋ ಬರ್ಲಿಲ್ಲಾ..’, ‘ಜಮ್ಮ ಜಮ್ಮ..’ ಮುಂತಾದ ಹಾಡುಗಳನ್ನು ಜನರು ಈಗಲೂ ಗುನುಗುತ್ತಿದ್ದಾರೆ. ಗಾಯಕ ನವೀನ್ ಸಜ್ಜು ಅವರಿಗೆ ಈ ಸಿನಿಮಾದಿಂದ ಸಖತ್ ಜನಪ್ರಿಯತೆ ಸಿಕ್ಕಿತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.