AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಸ್ವಚ್ಛತಾ ರಾಯಭಾರಿಯಾಗಿ ಮಂಡ್ಯ ರಮೇಶ್ ಆಯ್ಕೆ; ನಂಬರ್ 1 ಸ್ಥಾನ ಪಡೆಯಲು ಕಸರತ್ತು

ಮೈಸೂರು ನಗರ 2015, 2016ರಲ್ಲಿ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಆದರೆ, ನಂತರದ ವರ್ಷಗಳಲ್ಲಿ ಮೈಸೂರಿಗೆ ಮೊದಲ ಸ್ಥಾನ ಸಿಕ್ಕಿಲ್ಲ. 2021ನೇ ಸಾಲಿನ ಸ್ವಚ್ಛ ನಗರಗ ವಿಭಾಗದಲ್ಲಿ 11ನೇ ಸ್ಥಾನಕ್ಕೆ ಜಾರಿತ್ತು. ಈ ಮೂಲಕ ಟಾಪ್‌ 10 ಪಟ್ಟಿಯಿಂದ ಈ ನಗರ ಹೊರಬಿತ್ತು.

ಮೈಸೂರು ಸ್ವಚ್ಛತಾ ರಾಯಭಾರಿಯಾಗಿ ಮಂಡ್ಯ ರಮೇಶ್ ಆಯ್ಕೆ; ನಂಬರ್ 1 ಸ್ಥಾನ ಪಡೆಯಲು ಕಸರತ್ತು
ಮಂಡ್ಯ ರಮೇಶ್
ರಾಮ್​, ಮೈಸೂರು
| Edited By: |

Updated on:Aug 31, 2023 | 10:42 AM

Share

ಸತತ ಎರಡು ಬಾರಿ ದೇಶದ ನಂಬರ್ 1 ಸ್ವಚ್ಛತಾ ನಗರಿ ಎನ್ನುವ ಹಿರಿಮೆ ಮೈಸೂರಿಗೆ ಸಿಕ್ಕಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಸ್ಥಾನ ಮೈಸೂರಿಗೆ ಸಿಗುತ್ತಿಲ್ಲ. ಇದನ್ನು ಹೇಗಾದರೂ ಮಾಡಿ ಮರಳಿ ಪಡೆಯಲೇಬೇಕು ಎನ್ನುವ ಹಠ ಮೈಸೂರು ಮಹಾನಗರಪಾಲಿಕೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಟ ಮಂಡ್ಯ ರಮೇಶ್ (Mandya Ramesh) ಅವರನ್ನು ಸ್ವಚ್ಛತಾ ರಾಯಭಾರಿ ಆಗಲು ಆಹ್ವನ ನೀಡಲಾಗಿತ್ತು. ಪಾಲಿಕೆಯ ಆಹ್ವಾನವನ್ನು ಮಂಡ್ಯ ರಮೇಶ್ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಸ್ವಚ್ಚತಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವ ಭರವಸೆಯನ್ನು ಅವರು ನೀಡಿದ್ದಾರೆ.

ಮೈಸೂರು ನಗರ 2015, 2016ರಲ್ಲಿ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಆದರೆ, ನಂತರದ ವರ್ಷಗಳಲ್ಲಿ ಮೈಸೂರಿಗೆ ಮೊದಲ ಸ್ಥಾನ ಸಿಕ್ಕಿಲ್ಲ. 2021ನೇ ಸಾಲಿನ ಸ್ವಚ್ಛ ನಗರಗಳ ವಿಭಾಗದಲ್ಲಿ 11ನೇ ಸ್ಥಾನಕ್ಕೆ ಜಾರಿತ್ತು. ಈ ಮೂಲಕ ಟಾಪ್‌ 10 ಪಟ್ಟಿಯಿಂದ ಈ ನಗರ ಹೊರಬಿತ್ತು. 2022ರಲ್ಲಿ ಸ್ವಚ್ಛ ನಗರ ಸ್ಥಾನದಲ್ಲಿ 8ನೇ ಸ್ಥಾನ ಸಿಕ್ಕಿತ್ತು. ಈಗ ಮತ್ತೆ ನಂಬರ್ 1 ಸ್ಥಾನ ಪಡೆಯಲು ಮೈಸೂರು ಪಾಲಿಕೆ ಪ್ರಯತ್ನ ನಡೆಸುತ್ತಿದೆ.

‘ಸ್ವಚ್ಛತಾ ರಾಯಭಾರಿ ಆಗಿರುವ ಬಗ್ಗೆ ಮಂಡ್ಯ ರಮೇಶ್ ಅವರು ಮಾತನಾಡಿದ್ದಾರೆ. ‘ಮೈಸೂರು ಅಂದ್ರೆ ನಿಮಗೂ ಇಷ್ಟ, ನನಗೂ ಇಷ್ಟ ಎಲ್ಲರಿಗೂ ಇಷ್ಟ. ಮೈಸೂರು ಪರಂಪರೆಯ ಕಾರಣಕ್ಕಾಗಿ, ಅದಕ್ಕಿರುವ ಸ್ವಚ್ಛ ಸುಂದರ ಕಾರಣಕ್ಕಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಮೈಸೂರಿನ ಹೆಸರು ಹೇಳಿದರೆ ಒಮ್ಮೆ ಹುಬ್ಬೇರಿಸುತ್ತಾರೆ. ಎಲ್ಲರೂ ಮೈಸೂರು ನಗರಕ್ಕೆ ಸ್ವಚ್ಛ ನಗರ ಎಂಬ ಮತ ನೀಡಿ’ ಎಂದು ಮಂಡ್ಯ ರಮೇಶ್ ಕೋರಿದ್ದಾರೆ.

ಇದನ್ನೂ ಓದಿ: ಮೈಸೂರು ಘಟನೆ ಬಗ್ಗೆ ರಾಜ್ ಬಿ ಶೆಟ್ಟಿ ಪ್ರತಿಕ್ರಿಯೆ: ಅಲ್ಲಿ ನಡೆದಿದ್ದು ಬೇರೆ, ಆದರೆ ಆತ ಮಾಡಿದ್ದು ಅಕ್ಷಮ್ಯ

ಮಂಡ್ಯ ರಮೇಶ್ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಆ ಬಳಿಕ ಅವರು ಚಿತ್ರರಂಗಕ್ಕೂ ಕಾಲಿಟ್ಟರು. ಹಲವು ರೀತಿಯ ಪಾತ್ರಗಳನ್ನು ಮಾಡಿ ಮಂಡ್ಯ ರಮೇಶ್ ಗಮನ ಸೆಳೆದಿದ್ದಾರೆ. ತಮ್ಮದೇ ನಟನಾ ಶಾಲೆಯನ್ನು ಕೂಡ ಅವರು ಮುನ್ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:36 am, Thu, 31 August 23

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ