AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಡಲ್​ವುಡ್​ಗೆ ಹೊಸ ನಾಯಕ ನಟ ಎಂಟ್ರಿ, ಹೇಗಿದೆ ಫೋಟೊಶೂಟ್?

Samarjit: ಪತ್ರಿಕೋದ್ಯಮದ ದೈತ್ಯ ಪ್ರತಿಭೆ ಲಂಕೇಶ್​ರ ಮೊಮ್ಮಗ, ನಿರ್ದೇಶಕ ಇಂದ್ರಜಿತ್ ಲಂಕೇಶ್​ರ ಪುತ್ರ ಸಮರ್ಜಿತ್ ಲಂಕೇಶ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಗನ ಸಿನಿಮಾಕ್ಕೆ ಇಂದ್ರಜಿತ್ ಲಂಕೇಶ್ ಆಕ್ಷನ್-ಕಟ್ ಹೇಳುತ್ತಿದ್ದು, ಮಗನ ಭಿನ್ನ ಫೊಟೊಶೂಟ್ ಅನ್ನು ಇಂದ್ರಜಿತ್ ಮಾಡಿಸಿದ್ದಾರೆ.

ಸ್ಯಾಂಡಲ್​ವುಡ್​ಗೆ ಹೊಸ ನಾಯಕ ನಟ ಎಂಟ್ರಿ, ಹೇಗಿದೆ ಫೋಟೊಶೂಟ್?
ಸಮರ್ಜಿತ್ ಲಂಕೇಶ್
Follow us
ಮಂಜುನಾಥ ಸಿ.
|

Updated on: Aug 30, 2023 | 10:45 PM

ಕನ್ನಡ ಚಿತ್ರರಂಗಕ್ಕೆ (Sandalwood) ಮತ್ತೊಬ್ಬ ಯುವನಟನ ಆಗಮನ ಆಗಲಿದೆ. ಕನ್ನಡ ಪತ್ರಿಕಾರಂಗ ಮರೆಯಲಾದ ಪಿ ಲಂಕೇಶ್ ಅವರ ಮೊಮ್ಮಗ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಲಂಕೇಶ್ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ದೇಹವನ್ನು ಹುರಿಗೊಳಿಸಿಕೊಂಡು, ಸಿನಿಮಾಕ್ಕೆ ಬೇಕಾದ ಸಮರಕಲೆಗಳ ಅಭ್ಯಾಸ, ನೃತ್ಯ, ನಟನೆ ತರಬೇತಿಗಳನ್ನು ಪಡೆದುಕೊಂಡಿರುವ ಸಮರ್ಜಿತ್ ಅದ್ಧೂರಿಯಾಗಿಯೇ ಸಿನಿಮಾಕ್ಕೆ ಬರುತ್ತಿದ್ದಾರೆ. ಸಮರ್ಜಿತ್​ಗೆ ಅವರ ತಂದೆಯೇ ಆಕ್ಷನ್-ಕಟ್ ಹೇಳುತ್ತಿರುವುದು ವಿಶೇಷ.

ಈಗಾಗಲೇ ಹಲವು ಸ್ಟೈಲಿಷ್ ಸಿನಿಮಾಗಳನ್ನು ನೀಡಿರುವ ಇಂದ್ರಜಿತ್ ಲಂಕೇಶ್ ತಮ್ಮ ಮಗನನ್ನು ಸಹ ಅದ್ಧೂರಿಯಾಗಿಯೇ ತೆರೆಗೆ ಪರಿಚಯಿಸಲು ಸಜ್ಜಾಗಿದ್ದಾರೆ. ‘ಗೌರಿ’ ಹೆಸರಿನ ಸಿನಿಮಾದ ಮೂಲಕ ಸಮರ್ಜಿತ್ ಲಂಕೇಶ್ ನಾಯಕ ನಟನಾಗಿ ಪರಿಚಯ ಆಗುತ್ತಿದ್ದಾರೆ. ಆಗಸ್ಟ್ 31 ರಂದು ‘ಗೌರಿ’ ಸಿನಿಮಾದ ಮುಹೂರ್ತ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಲಿದೆ. ತಮ್ಮ ಮೊದಲ ಸಿನಿಮಾಕ್ಕಾಗಿ ಸಮರ್ಜಿತ್ ತಯಾರಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಇಂದ್ರಜಿತ್​ ಲಂಕೇಶ್​ ಪುತ್ರನ ಮೊದಲ ಸಿನಿಮಾ ಹೆಸರು ‘ಗೌರಿ’; ಮುಹೂರ್ತಕ್ಕೆ ಸಿದ್ದರಾಮಯ್ಯ ಅತಿಥಿ

ಮಗನ ಮೊದಲ ಸಿನಿಮಾಕ್ಕೆ ನಾಯಕಿಯಾಗಿ ‘ಪುಟ್ಟಗೌರಿ ಮದುವೆ’ ಖ್ಯಾತಿಯ ಸಾನಿಯಾರನ್ನು ನಾಯಕಿಯನ್ನಾಗಿ ಇಂದ್ರಜಿತ್ ಲಂಕೇಶ್ ಆರಿಸಿದ್ದಾರೆ. ಸಿನಿಮಾದ ಮುಹೂರ್ತಕ್ಕೆ ಮೊದಲೇ ಸಮರ್ಜಿತ್ ಹಾಗೂ ಸಾನಿಯಾ ಅವರ ಫೋಟೋಶೂಟ್ ನಡೆಸಲಾಗಿದೆ. ಕನ್ನಡ ಚಿತ್ರರಂಗದ ಸ್ಟಾರ್ ಸಿನಿಮಾಟೋಗ್ರಾಫರ್ ಆಗಿರುವ ‘ಕೆಜಿಎಫ್’ ಸಿನಿಮಾ ಖ್ಯಾತಿಯ ಭುವನ್ ಗೌಡ, ಸಮರ್ಜಿತ್ ರ ಫೋಟೋಶೂಟ್ ಮಾಡಿದ್ದಾರೆ.

ಭುವನ್ ಮಾತ್ರವೇ ಅಲ್ಲದೆ ಎಜೆ ಶೆಟ್ಟಿ ಇಂದಲೂ ಫೋಟೋ ಶೂಟ್ ಮಾಡಿಸಲಾಗಿದ್ದು, ಸಾನಿಯಾ ಹಾಗೂ ಸಮರ್ಜಿತ್ ಇಬ್ಬರ ನಡುವೆ ಒಳ್ಳೆಯ ಕೆಮಿಸ್ಟ್ರಿ ಇರುವುದು ಫೋಟೊಶೂಟ್​ನಲ್ಲಿ ತೋರಿಬರುತ್ತಿದೆ. ತಮ್ಮ ಪುತ್ರ ಯಾವ-ಯಾವ ಪಾತ್ರದಲ್ಲಿ, ಲುಕ್​ನಲ್ಲಿ ಯಾವ ರೀತಿ ಕಾಣಿಸುತ್ತಾರೆ ಎಂಬುದನ್ನು ಪರೀಕ್ಷಿಸಲು ಸುಮಾರು ನಾಲ್ಕೈದು ಭಿನ್ನ ಲುಕ್​ಗಳಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ.

ಕೇವಲ ‘ಗೌರಿ’ ಸಿನಿಮಾದ ಫೋಟೋ ಶೂಟ್ ಮಾತ್ರವೇ ಅಲ್ಲದೇ, ಕೆಲ ಹಳೆ ಸಿನಿಮಾ ಸೀನ್ ಗಳನ್ನ ರೀ ಕ್ರಿಯೇಟ್ ಮಾಡುವ ಮೂಲಕ ಮಗನ ನಟನೆ ಹಾಗೂ ಅನುಕರಣೆ ಕಲೆಯನ್ನು ಸಹ ಇಂದ್ರಜಿತ್ ಪರೀಕ್ಷೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ