ಹೊಸಬರ ಸಸ್ಪೆನ್ಸ್ ಕತೆಗೆ ಮರುಳಾದ ನಟ ನೀನಾಸಂ ಸತೀಶ್

|

Updated on: Oct 05, 2024 | 9:20 PM

Satish Neenasam: ನಟ ಸತೀಶ್ ನೀನಾಸಂ, ಹೊಸಬರ ತಂಡವೊಂದಕ್ಕೆ ಬೆಂಬಲ ನೀಡಿದ್ದಾರೆ. ಹೊಸಬರ ತಂಡ ಕಟ್ಟಿಕೊಟ್ಟಿರುವ ‘ವೃತ್ತ’ ಸಿನಿಮಾಕ್ಕೆ ಬೆಂಬಲ ನೀಡುತ್ತಿದ್ದು, ಸಿನಿಮಾವನ್ನು ಪ್ರೆಸೆಂಟ್ ಮಾಡಲಿದ್ದಾರೆ.

ಹೊಸಬರ ಸಸ್ಪೆನ್ಸ್ ಕತೆಗೆ ಮರುಳಾದ ನಟ ನೀನಾಸಂ ಸತೀಶ್
Follow us on

ಗಾಂಧಿ ನಗರದಲ್ಲಿ ಬಹುತೇಕ ಪ್ರತಿದಿನ ಹೊಸದೊಂದು ಸಿನಿಮಾ ಸೆಟ್ಟೇರುತ್ತವೆ. ಅದರಲ್ಲಿ ಕೆಲವು ಸಿನಿಮಾಗಳಷ್ಟೆ ಬಿಡುಗಡೆ ಆಗುತ್ತವೆ, ಹಿಟ್ ಆಗುವ ಸಿನಿಮಾಗಳಂತೂ ಬೆರಳೆಣಿಕೆಯಷ್ಟೆ. ಹೀಗೆ ಸೆಟ್ಟೇರುವ ಸಿನಿಮಾಗಳಲ್ಲಿ ಹೊಸಬರ ಸಿನಿಮಾಗಳೇ ಹೆಚ್ಚು. ಆದರೆ ಇತ್ತೀಚೆಗೆ ಹೊಸ ಸಿನಿಮಾ ತಂಡಗಳು ತುಸು ಹೆಚ್ಚೇ ಗಮನ ಸೆಲೆಯುತ್ತಿವೆ. ಇದೀಗ ‘ವೃತ್ತ’ ಹೆಸರಿನ ಸಿನಿಮಾ ಒಂದು ಗಮನ ಸೆಳೆಯುತ್ತಿದೆ. ಈ ಸಿನಿಮಾವನ್ನು ಸಹ ಹೊಸಬರ ತಂಡವೇ ಕಟ್ಟಿದೆ. ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಹೊಸಬರ ಪ್ರತಿಭೆ ಮೇಲೆ ನಂಬಿಕೆ ಇಟ್ಟು ನಟ ಸತೀಶ್ ನೀನಾಸಂ ಅವರು ಸಿನಿಮಾವನ್ನು ಪ್ರೆಸೆಂಟ್ ಮಾಡಲು ಮುಂದೆ ಬಂದಿದ್ದಾರೆ.

‘ವೃತ್ತ’ ಸಿನಿಮಾವನ್ನು ಮುಗಿಸಿರುವ ಯುವ ತಂಡ ಮಾಡಿ ಟೀಸರ್‌ ಸಹ ಬಿಡುಗಡೆ ಮಾಡಿದ್ದಾರೆ. ಸಿನಿಮಾ ತಂಡದ ಮೇಲೆ ನಂಬಿಕೆ ಇರಿಸಿರುವ ನಟ ನೀನಾಸಂ ಸತೀಶ್ ‘ವೃತ್ತ’ ಸಿನಿಮಾಕ್ಕೆ ಬೆಂಬಲ ಸೂಚಿಸಿದ್ದಾರೆ. ಸಿನಿಮಾ ಟೀಸರ್‌, ಟ್ರೇಲರ್‌ ನೋಡಿ ಮೆಚ್ಚಿಕೊಂಡಿರುವ ನೀನಾಸಂ ಸತೀಶ್, ತಮ್ಮದೇ ಬ್ಯಾನರ್‌ ಅಡಿಯಲ್ಲಿ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೂ ಬಂದಿದ್ದ ಸತೀಶ್, ಹೊಸಬರ ತಂಡವಾಗಿದ್ದರೂ ಸಹ ಚೆನ್ನಾಗಿಯೇ ತಯಾರಿ ಮಾಡಿಕೊಂಡು ಚಿತ್ರರಂಗಕ್ಕೆ ಬಂದಿದ್ದಾರೆ ಎಂದರು. ಟೀಸರ್ ಅನ್ನು ಸಹ ಬಹುವಾಗಿ ಮೆಚ್ಚಿಕೊಂಡರು.

ಇದನ್ನೂ ಓದಿ:ದಳಪತಿ ವಿಜಯ್ ಸಿನಿಮಾಕ್ಕೆ ಎಂಟ್ರಿಕೊಟ್ಟ ನಟಿ ಪ್ರಿಯಾಮಣಿ

‘ವೃತ್ತ’ ಸಿನಿಮಾವನ್ನು ಲಿಖಿಕ್‌ ಕುಮಾರ್‌ ಎಸ್ ನಿರ್ದೇಶನ ಮಾಡಲಿದ್ದಾರೆ. ಲಕ್ಷ್ಯ ಆರ್ಟ್ಸ್‌ ಬ್ಯಾನರ್‌ ಅಡಿಯಲ್ಲಿ ಟಿ ಶಿವಕುಮಾರ್‌ ‘ವೃತ್ತ’ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಒಂದು ಪಾತ್ರದ ಸುತ್ತ ಸುತ್ತುವ ಕತೆಯಾಗಿದೆ. ಸಿನಿಮಾಕ್ಕೆ ಸಿಂಕ್ರೋನೈಸ್‌ ಮಾಡಿದ ಧ್ವನಿಯನ್ನು ಬಳಸಿಕೊಳ್ಳಲಾಗಿದೆ. ಯೋಗೀಶ್‌ ಗೌಡ ಅವರು ಈ ಸಿನಿಮಾಕ್ಕೆ ಕಥೆ ಬರೆದಿದ್ದಾರೆ. ಸುರೇಶ್‌ ಆರ್ಮುಗಂ ಸಂಕಲನ, ಶಂಕರ್‌ ರಾಮನ್‌ ಅವರ ಸಂಭಾಷಣೆ, ಗೌತಮ್‌ ಕೃಷ್ಣ ಅವರ ಛಾಯಾಗ್ರಹಣ ಮತ್ತು ಆಂಟನಿ ಹಾಗೂ ಹರಿ ಕ್ರಿಶಾಂತ್‌ ಎಸ್‌ ಅವರ ಸಂಗೀತ ಚಿತ್ರಕ್ಕಿದೆ.

ಮಾಹಿರ್‌ ಮೊಹಿದ್ದೀನ್‌ ಈ ಸಿನಿಮಾದ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ‘ಸಪ್ತ ಸಾಗರ’ ಚೆಲುವೆ ಚೈತ್ರಾ ಜೆ ಆಚಾರ್‌ ನಾಯಕಿಯಾಗಿ ನಟಿಸಿದ್ದಾರೆ. ಹತಿಣಿ ಸುಂದರ ರಾಜನ್‌ ಸಹ ಸಿನಿಮಾದಲ್ಲಿ ನಟಿಸಿದಾರೆ. ನಾಯಕನಾಗಿ ಕಾಣಿಸಿಕೊಳ್ತಿರೋ ಮಾಹಿರ್‌ ಸಾಕಷ್ಟು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಟೀಸರ್​ನಲ್ಲಿ ಮಾಹಿರ್‌ ಅಭಿನಯ ಗಮನ ಸೆಳೆದಿದ್ದು ಮುಂದಿನ ದಿನಗಳಲ್ಲಿ ಮಾಹಿರ್‌ ಅದ್ಬುತ ಕಲಾವಿದನಾಗಿ ಚಿತ್ರರಂಗದಲ್ಲಿ ಉಳಿದುಕೊಳ್ಳುವ ಎಲ್ಲಾ ಭರವಸೆಗಳು ಕಾಣ್ತಿದೆ ಎಂದಿದ್ದಾರೆ.

ಸಿನಿಮಾದ ನಾಯಕ ಮಾಹೀರ್‌ ಮಾತನಾಡಿ, ‘ಸಿನಿಮಾಗಳಲ್ಲಿ ನಟಿಸುವುದು ನನ್ನ ಬಹಳ ವರ್ಷಗಳ ಕನಸು. ಈ ಮುಂಚೆ ನಾನು ನಾಟಕಗಳಲ್ಲಿ ನಟಿಸುತ್ತಿದ್ದೆ. ಈಗ ‘ವೃತ್ತ’ ಸಿನಿಮಾ ಮೂಲಕ ದೊಡ್ಡ ಪರದೆಗೆ ಕಾಲಿಡುತ್ತಿದ್ದೇನೆ’ ಎಂದರು. ನಿರ್ದೇಶಕ ಲಿಖಿತ್‌, ‘ಮಾತನಾಡಿ ಹೊಸ ಸಿನಿಮಾಗೆ ಸತೀಶ್‌ ಅವರ ಸಪೋರ್ಟ್‌ ಸಿಕ್ಕಿರೋದು ಖುಷಿ ತಂದಿದೆ. ಕಿರು ಚಿತ್ರಗಳನ್ನು ಮಾಡುತ್ತಾ ಇದ್ದ ತಂಡ ಇವತ್ತು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ದರಾಗಿಗಿದ್ದೇವೆ’ ಎಂದರು.

‘ಸಿನಿಮಾ ಚೆನ್ನಾಗಿದೆ ಅನ್ನೋ ಕಾರಣಕ್ಕೆ ಸಪೋರ್ಟ್‌ ಮಾಡುತ್ತಿದ್ದೇನೆ ಎಂದರು ಸತೀಶ್ ನೀನಾಸಂ. ವೃತ್ತ ಚಿತ್ರತಂಡ ಸತೀಶ್ ನೀನಾಸಂ ಅವರ ಸಹಾಯಕ್ಕೆ ಧನ್ಯವಾದ ಅರ್ಪಿಸಿದರು. ಸದ್ಯ ಟೀಸರ್‌ ಬಿಡುಗಡೆ ಮಾಡಿರುವ ತಂಡ ಆದಷ್ಟು ಬೇಗ ಟ್ರೇಲರ್‌ ಲಾಂಚ್‌ ಮಾಡಿ ಇದೇ ವರ್ಷಾಂತ್ಯದಲ್ಲಿ ಬಿಡುಗಡೆ ಮಾಡುವ ತಯಾರಿಯಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ