ಬೆಂಗಳೂರು: ರಾಬರ್ಟ್ ಸಿನಿಮಾ ನಿರ್ಮಾಪಕರ ಅಣ್ಣನ ಕೊಲೆಗೆ ಸ್ಕೆಚ್ ಹಾಕಿದ್ದ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ. ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸಹೋದರ ದೀಪಕ್ ಕೊಲೆಗೆ ಸ್ಕೆಚ್ ಹಾಕಿದ್ದ 7 ಜನರನ್ನು ಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೀಪಕ್ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಬಗ್ಗೆ ಆರೋಪಿ ಮಂಜುನಾಥ್ ಹಾಗೂ ಆತನ ಸಹಚರರು ಸ್ಕೆಚ್ ಹಾಕುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಸುಳಿವು ಸಿಕ್ಕ ಕೂಡಲೇ ದಾಳಿ ಮಾಡಿದ್ದ ಜಯನಗರ ಪೊಲೀಸರು ಸದ್ಯ ಏಳು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ, ನಿರ್ಮಾಪಕ ಉಮಾಪತಿಯವರ ಅಣ್ಣನಿಗೆ ಘಟನೆಯ ಬಗ್ಗೆ ಮಾಹಿತಿ ಸಹ ನೀಡಿದ್ದಾರೆ.
ರೌಡಿಶೀಟರ್ ಪಳನಿ ಗ್ಯಾಂಗ್ಗೆ ಸೇರಿರುವ ನೀಲಸಂದ್ರ ನಿವಾಸಿಯಾದ ಮಂಜುನಾಥ್ನಿಂದ ಕೃತ್ಯಕ್ಕೆ ಪ್ಲಾನ್ ನಡೆದಿದೆ ಎಂದು ಹೇಳಲಾಗಿದೆ. ಯಾವ ಕಾರಣಕ್ಕೆ ಕೊಲೆಗೆ ಸ್ಕೆಚ್ ಹಾಕಲಾಗಿತ್ತು ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಟಿವಿ 9ಗೆ ದಕ್ಷಿಣ ವಿಭಾಗ DCP ಹರೀಶ್ ಪಾಂಡೆ ಮಾಹಿತಿ ಕೊಟ್ಟಿದ್ದಾರೆ.
ಸೈಕಲ್ ರವಿ ಹತ್ಯೆಗೂ ಪ್ಲಾನ್ ಮಾಡಿದ್ದ ಆರೋಪಿಗಳು
ಅಂದ ಹಾಗೆ, ದೀಪಕ್ರ ಕೊಲೆಗೆ ಸ್ಕೆಚ್ ಹಾಕಿದ್ದ ಆರೋಪಿಗಳು ಕುಖ್ಯಾತ ರೌಡಿಶೀಟರ್ ಸೈಕಲ್ ರವಿ ಹಾಗೂ ಆತನ ಸಹಚರ ಬೇಕರಿ ರಘು ಸೇರಿದಂತೆ ನಾಲ್ವರ ಹತ್ಯೆಗೆ ಸಂಚುರೂಪಿಸಿದ್ದರು ಎಂದು ಹೇಳಲಾಗಿದೆ. ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಮುಂಜಾನೆ 5ರ ಸುಮಾರಿಗೆ ಬಸವನಗುಡಿ ನ್ಯಾಷನಲ್ ಕಾಲೇಜು ಬಳಿ ಸೆರೆಹಿಡಿಯಲಾಗಿದೆ. ಆರೋಪಿಗಳು ರಜತಾದ್ರಿ ಹೋಟೆಲ್ ಮುಂದೆ ಹೊಂಚುಹಾಕುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶಾಸಕ ಯಾದವಾಡ ಕಚೇರಿಯಲ್ಲಿ ಕಳ್ಳತನ: ಆದ್ರೆ ಏನು ಕಳ್ಳತನವಾಗಿದೆ ಎಂದು ಬಾಯಿಬಿಡದ ಕಚೇರಿ ಸಿಬ್ಬಂದಿ!
Published On - 4:46 pm, Sun, 20 December 20