‘ಯಶ್ ನನ್ನ ಸ್ನೇಹಿತ’: ದುಬೈನಲ್ಲಿ ಕೂಗಿ ಹೇಳಿದ ಶಾರುಖ್ ಖಾನ್; ವಿಡಿಯೋ ವೈರಲ್

ನಟ ಯಶ್ ಅವರ ಬೆಳವಣಿಗೆ ಸಣ್ಣದಲ್ಲ. ವಿಶ್ವಮಟ್ಟದಲ್ಲಿ ಅವರು ಖ್ಯಾತಿ ಪಡೆದಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ಅವರು ‘ಯಶ್​ ನನ್ನ ಗೆಳಯ’ ಎಂದು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಒಂದು ವಿಡಿಯೋ ವೈರಲ್​ ಆಗಿದೆ. ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಅವರು ಈ ಮಾತು ಹೇಳಿದ್ದಾರೆ.

‘ಯಶ್ ನನ್ನ ಸ್ನೇಹಿತ’: ದುಬೈನಲ್ಲಿ ಕೂಗಿ ಹೇಳಿದ ಶಾರುಖ್ ಖಾನ್; ವಿಡಿಯೋ ವೈರಲ್
Shah Rukh Khan, Yash

Updated on: Jan 28, 2025 | 7:14 PM

ಒಂದು ಕಾಲದಲ್ಲಿ ಯಶ್ ಹೆಸರು ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿತ್ತು. ಯಾವಾಗ ‘ಕೆಜಿಎಫ್​: ಚಾಪ್ಟರ್​ 1’ ಮತ್ತು ‘ಕೆಜಿಎಫ್: ಚಾಪ್ಟರ್​ 2’ ಸಿನಿಮಾಗಳು ಸೂಪರ್​ ಹಿಟ್​ ಆದವೋ ಆಗ ಯಶ್​ ಅವರು ಪ್ಯಾನ್ ಇಂಡಿಯಾ ನಟನಾಗಿ ಹೊರಹೊಮ್ಮಿದರು. ಈಗ ಬಾಲಿವುಡ್​ನ ಟಾಪ್​ ನಟರೆಲ್ಲ ಯಶ್ ಬಗ್ಗೆ ಮಾತನಾಡುತ್ತಿದ್ದಾರೆ. ಸ್ಟಾರ್​ ನಟ ಶಾರುಖ್ ಖಾನ್ ಅವರು ಕೂಡ ತಮ್ಮ ಅಭಿಮಾನಿಗಳ ಎದುರಿನಲ್ಲಿ ಯಶ್ ಕುರಿತು ಮಾತಾಡಿದ್ದಾರೆ. ಯಶ್ ಅವರ ಡ್ಯಾನ್ಸ್ ಬಗ್ಗೆಯೂ ಅವರು ಹೊಗಳಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.

ಶಾರುಖ್ ಖಾನ್ ಅವರಿಗೆ ದುಬೈನಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಅಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಅವರು ಮನರಂಜನೆ ನೀಡಿದ್ದಾರೆ. ನೆರೆದಿದ್ದ ಅಂದಾಜು 80 ಸಾವಿರ ಅಭಿಮಾನಿಗಳ ಎದುರಿನಲ್ಲಿ ದಕ್ಷಿಣ ಭಾರತದ ಫ್ಯಾನ್ಸ್ ಬಗ್ಗೆಯೂ ಅವರು ಮಾತನಾಡಿದರು. ಕರ್ನಾಟಕ, ಕೇರಳ, ಆಂಧ್ರ, ತಮಿಳುನಾಡಿನ ಅಭಿಮಾನಿಗಳನ್ನು ಉದ್ದೇಶಿಸಿ ಅವರು ಈ ಸಂದೇಶ ನೀಡಿದರು.

‘ದಕ್ಷಿಣ ಭಾರತದ ನನ್ನ ಅಭಿಮಾನಿಗಳೇ.. ನನಗೆ ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರ, ತಮಿಳುನಾಡಿನಲ್ಲಿ ಸ್ನೇಹಿತರು ಇದ್ದಾರೆ. ಅಲ್ಲು ಅರ್ಜುನ್, ಪ್ರಭಾಸ್, ರಾಮ್ ಚರಣ್, ಯಶ್, ಮಹೇಶ್ ಬಾಬು, ದಳಪತಿ ವಿಜಯ್, ರಜನಿಕಾಂತ್, ಕಮಲ್ ಹಾಸನ್ ನನ್ನ ಸ್ನೇಹಿತರು. ಅವರಿಗೆಲ್ಲ ನಾನು ಒಂದು ಮನವಿ ಮಾಡುತ್ತೇನೆ. ಅವರೆಲ್ಲ ತುಂಬ ಫಾಸ್ಟ್​ ಆಗಿ ಡ್ಯಾನ್ಸ್ ಮಾಡುವುದು ನಿಲ್ಲಿಸಬೇಕು. ಅವರಿಗೆ ಸರಿಸಮನಾಗಿ ಡ್ಯಾನ್ಸ್ ಮಾಡಲು ನನಗೆ ಕಷ್ಟ ಆಗುತ್ತದೆ’ ಎಂದು ಶಾರುಖ್ ಖಾನ್ ಹೇಳಿದ್ದಾರೆ.

ಇದನ್ನೂ ಓದಿ: ಯಶ್​ಗೆ ಇನ್​ಸ್ಟಾಗ್ರಾಮ್​ನಲ್ಲಿ 14 ಮಿಲಿಯನ್ ಫಾಲೋವರ್ಸ್​

ಯಶ್ ಅವರು ಈಗ ‘ಟಾಕ್ಸಿಕ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾಗೆ ಗೀತು ಮೋಹನ್​ ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಧೂಳೆಬ್ಬಿಸಿದೆ. ಶಾರುಖ್ ಖಾನ್ ಅವರು ‘ಕಿಂಗ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿದ್ದಾರ್ಥ್ ಆನಂದ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಮನೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us