‘ಶಾಖಾಹಾರಿ’ ನಿರ್ದೇಶನಕ ಚಿತ್ರಕ್ಕೆ ಗೀತಾ ಶಿವರಾಜ್​ಕುಮಾರ್ ಬಂಡವಾಳ; ಹೀರೋ ಯಾರು?

ಗೀತಾ ಶಿವರಾಜ್​ಕುಮಾರ್ ಅವರು ಈ ಬಗ್ಗೆ ಘೋಷಣೆ ಮಾಡಿದ್ದಾರೆ. ‘ವೇದ’, ‘ಭೈರತಿ ರಣಗಲ್’ ರೀತಿಯು ಸಿನಿಮಾಗಳು ‘ಗೀತಾ ಪಿಕ್ಚರ್ಸ್’ ಮೂಲಕ ಮೂಡಿ ಬಂದಿದೆ. ಈಗ ಈ ಬ್ಯಾನರ್ ಅಡಿಯಲ್ಲಿ ನಾಲ್ಕನೇ ಸಿನಿಮಾ ಘೋಷಣೆ ಆಗಿದೆ.

‘ಶಾಖಾಹಾರಿ’ ನಿರ್ದೇಶನಕ ಚಿತ್ರಕ್ಕೆ ಗೀತಾ ಶಿವರಾಜ್​ಕುಮಾರ್ ಬಂಡವಾಳ; ಹೀರೋ ಯಾರು?
‘ಶಾಖಾಹಾರಿ’ ನಿರ್ದೇಶನಕ ಚಿತ್ರಕ್ಕೆ ಗೀತಾ ಶಿವರಾಜ್​ಕುಮಾರ್ ಬಂಡವಾಳ; ಹೀರೋ ಯಾರು?

Updated on: Dec 06, 2024 | 1:17 PM

‘ಶಾಖಾಹಾರಿ’ ಸ್ಯಾಂಡಲ್​ವುಡ್​ ಪ್ರೇಕ್ಷಕರಿಗೆ ಸಖತ್ ಇಷ್ಟ ಆದ ಚಿತ್ರ. ಈ ಸಿನಿಮಾ ಸಸ್ಪೆನ್ಸ್ ಶೈಲಿಯಲ್ಲಿ ಮೂಡಿ ಬಂದಿತ್ತು. ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರವನ್ನು ಕೊಂಡಾಡಿದ್ದರು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಸಂದೀಪ್ ಸುಕಂದ್ ಅವರು. ಅವರ ಬಿಗಿಯಾದ ನಿರ್ದೇಶನ ಚಿತ್ರವನ್ನು ಸುಂದರಗೊಳಿಸಿತ್ತು. ಈಗ ‘ಶಾಖಾಹಾರಿ’ ಸಿನಿಮಾ ನಿರ್ದೇಶಕನ ಜೊತೆ ಗೀತಾ ಶಿವರಾಜ್​ಕುಮಾರ್ ಅವರು ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ ಹೀರೋ ಯಾರು ಎಂಬುದು ಕೂಡ ರಿವೀಲ್ ಆಗಿದೆ.

ಗೀತಾ ಶಿವರಾಜ್​ಕುಮಾರ್ ಅವರು ಈ ಬಗ್ಗೆ ಘೋಷಣೆ ಮಾಡಿದ್ದಾರೆ. ‘ವೇದ’, ‘ಭೈರತಿ ರಣಗಲ್’ ರೀತಿಯು ಸಿನಿಮಾಗಳು ‘ಗೀತಾ ಪಿಕ್ಚರ್ಸ್’ ಮೂಲಕ ಮೂಡಿ ಬಂದಿದೆ. ಈಗ ಈ ಬ್ಯಾನರ್ ಅಡಿಯಲ್ಲಿ ನಾಲ್ಕನೇ ಸಿನಿಮಾ ಘೋಷಣೆ ಆಗಿದೆ. ಗೀತಾ ಶಿವರಾಜ್​ಕುಮಾರ್ ನಿರ್ಮಾಣ ಇರುವ ಈ ಚಿತ್ರಕ್ಕೆ ಸಂದೀಪ್ ನಿರ್ದೇಶನ ಇದೆ.

ಹಾಗಾದರೆ, ಈ ಚಿತ್ರಕ್ಕೆ ಹೀರೋ ಯಾರು? ಅದಕ್ಕೂ ಉತ್ತರ ಇದೆ. ಹಿರಿಯ ನಟ ರಾಮ್​ಕುಮಾರ್ ಅವರ ಪುತ್ರ ಧೀರೇನ್ ರಾಮ್​ಕುಮಾರ್ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಈ ಮೊದಲು ‘ಶಿವ 143’ ಸಿನಿಮಾದಲ್ಲಿ ನಟಿಸಿದ್ದರು. ಈಗ ಅವರು ಮತ್ತೊಂದು ಚಿತ್ರದಲ್ಲಿ ನಟಿಸಲು ರೆಡಿ ಆಗಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.

ಇದನ್ನೂ ಓದಿ: Shakhahaari Review: ‘ಶಾಖಾಹಾರಿ’ ಸಿನಿಮಾದಲ್ಲಿ ಹಲವು ಟ್ವಿಸ್ಟ್​; ರಂಗಾಯಣ ರಘು ಬೆಸ್ಟ್​

‘ಶಾಖಾಹಾರಿ’ ಚಿತ್ರಮಂದಿರದಲ್ಲಿ ರಿಲೀಸ್ ಆದಾಗ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. ಆ ಬಳಿಕ ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡಲಾಯಿತು. ಒಟಿಟಿಯಲ್ಲಿ ನೋಡಿದ ಅನೇಕರು ಈ ಚಿತ್ರವನ್ನು ಹೊಗಳಿದ್ದಾರೆ. ರಂಗಾಯಣ ರಘು ಅವರ ನಟನೆಯನ್ನು ಜನರು ಕೊಂಡಾಡಿದರು. ಈಗ ಧೀರೇನ್​ಗೆ ಸಂದೀಪ್ ಅವರು ನಿರ್ದೇಶನ ಮಾಡುತ್ತಿರುವುದು ಯಾವ ರೀತಿಯ ಸಿನಿಮಾ ಎಂಬ ಕುತೂಹಲವೂ ಇದೆ.

ಗೀತಾ ಶಿವರಾಜ್​ಕುಮಾರ್ ನಿರ್ಮಾಣ ಮಾಡಿದ ‘ಭೈರತಿ ರಣಗಲ್’ ಸಿನಿಮಾ ನವೆಂಬರ್ 15ರಂದು ತೆರೆಗೆ ಬಂತು. ಈ ಚಿತ್ರಕ್ಕೆ ನರ್ತನ್ ನಿರ್ದೇಶನ ಇದೆ. ಈ ಚಿತ್ರ ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:58 am, Fri, 6 December 24

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us