ನಟಿ ಪ್ರಣಿತಾ ಲಾಕ್ಡೌನ್ನಲ್ಲಿ ಯಾರಿಗೂ ಹೇಳದೇ ಕೇಳದೇ ಹಸೆಮಣೆ ಏರಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಕೊರೊನಾ ವೈರಸ್ ಲಾಕ್ಡೌನ್ ಇರುವುದರಿಂದ ಸಿಂಪಲ್ ಮದುವೆ ಆಗಿರುವುದಾಗಿ ಅವರು ತಿಳಿಸಿದ್ದಾರೆ. ಈಗ ಪ್ರಣಿತಾಗೆ ಶುಭಾಶಯಗಳ ಸುರಿಮಳೆ ಆಗುತ್ತಿದೆ. ಕರಾವಳಿ ಬೆಡಗಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಪ್ರಣಿತಾಗೆ ವಿಶ್ ಮಾಡಿದ್ದಾರೆ. ಹಾಗಾದರೆ, ಇವರ ನಡುವೆ ಗೆಳೆತನ ಬೆಳೆದಿದ್ದು ಹೇಗೆ? ಇಬ್ಬರೂ ಮೊದಲಿನಿಂದಲೂ ಗೆಳತಿಯರಾ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಶಿಲ್ಪಾ ಶೆಟ್ಟಿ ಮದುವೆ ಆದ ನಂತರದಲ್ಲಿ ಬಾಲಿವುಡ್ನಿಂದ ದೂರವೇ ಉಳಿದಿದ್ದರು. ಕುಟುಂಬ ಹಾಗೂ ಮಕ್ಕಳ ಜತೆಯಲ್ಲಿ ಶಿಲ್ಪಾ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಈಗ ಅವರು ಬಾಲಿವುಡ್ಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಪ್ರಿಯದರ್ಶನ್ ನಿರ್ದೇಶನದ ‘ಹಂಗಾಮಾ 2’ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಮತ್ತೊಂದು ಹೀರೋಯಿನ್ ಆಗಿ ಪ್ರಣಿತಾ ಕಾಣಿಸಿಕೊಂಡಿದ್ದಾರೆ.
‘ಹಂಗಾಮಾ 2’ ಚಿತ್ರದಲ್ಲಿ ಪ್ರಣಿತಾ ಹಾಗೂ ಶಿಲ್ಪಾ ನಡುವೆ ಸಾಕಷ್ಟು ಕಾಂಬಿನೇಷನ್ಗಳು ಬರಲಿವೆ. ಹೀಗಾಗಿ, ಸೆಟ್ನಲ್ಲಿ ಹೆಚ್ಚು ಸಮಯ ಒಟ್ಟಿಗೆ ಇದ್ದಿದ್ದರಿಂದ ಇಬ್ಬರು ನಡುವೆ ಒಳ್ಳೆಯ ಗೆಳೆತನ ಬೆಳೆದಿದೆ. ಸಿನಿಮಾ ಈಗಾಗಲೇ ಶೂಟಿಂಗ್ ಪೂರ್ಣಗೊಳಿಸಿಕೊಂಡಿದ್ದು, ಶೀಘ್ರವೇ ತೆರೆಗೆ ಬರಲಿದೆ. ಈಗ ಪ್ರಣಿತಾ ಮದುವೆ ಆಗಿರುವ ವಿಚಾರ ಕೇಳಿ ಶಿಲ್ಪಾ ಶೆಟ್ಟಿ ಖುಷಿಯಾಗಿದ್ದಾರೆ.
ಪ್ರಣಿತಾ ಹಾಗೂ ನಿತಿನ್ ರಾಜು ಮದುವೆ ಆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಶಿಲ್ಪಾ, ಶುಭಾಶಯ ಹೇಳಿದ್ದಾರೆ. ಈ ಸ್ಟೇಟಸ್ಅನ್ನು ತಮ್ಮ ಸ್ಟೇಟಸ್ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಪ್ರಣಿತಾ, ಧನ್ಯವಾದ ಹೇಳಿದ್ದಾರೆ.
ಕೆಲವು ವರ್ಷಗಳ ಹಿಂದೆ ಮ್ಯೂಚುವಲ್ ಫ್ರೆಂಡ್ ಮೂಲಕ ನಿತಿನ್ ರಾಜು ಅವರ ಗೆಳೆತನ ಪ್ರಣಿತಾಗೆ ಆಗಿತ್ತು. ಆ ನಂತರ ಇಬ್ಬರ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆದಿದೆ. ಆ ನಂತರ ಗೆಳೆತನ ಪ್ರೀತಿಯಾಗಿದೆ. ಈಗ ಇಬ್ಬರೂ ಪ್ರೀತಿಗೆ ಹೊಸ ಅರ್ಥ ನೀಡಿದ್ದಾರೆ. ಕನಕಪುರ ರಸ್ತೆಯಲ್ಲಿ ಇರುವ ರೆಸಾರ್ಟ್ವೊಂದರಲ್ಲಿ ಪ್ರಣಿತಾ ಮದುವೆ ನಡೆದಿದೆ. ನಿತಿನ್ ರಾಜು ಜತೆ ಅವರು ವೈವಾಹಿಕ ಜೀವನ ಆರಂಭಿಸಿದ್ದಾರೆ. ರಮ್ಯಾ ಸೇರಿ ಅನೇಕರು ಪ್ರಣಿತಾಗೆ ಶುಭ ಕೋರಿದ್ದಾರೆ.
ಇದನ್ನೂ ಓದಿ: Pranitha Marriage: ಪ್ರಣಿತಾ ಮದುವೆ ಬಳಿಕ ರಮ್ಯಾ ಕಡೆಗೆ ಪ್ರಶ್ನೆ ಎಸೆದ ಅಭಿಮಾನಿಗಳು; ಏನಿದು ಲಿಂಕ್?