Shiva Rajkumar: ಶಕ್ತಿಧಾಮದಲ್ಲಿ ಆಶ್ರಯ ಪಡೆಯಲಿದ್ದಾರೆ ಇನ್ನಷ್ಟು ಮಕ್ಕಳು; ಮಾಹಿತಿ ಹಂಚಿಕೊಂಡ ಶಿವಣ್ಣ

Puneeth Rajkumar: ಶಕ್ತಿಧಾಮದ ಮಕ್ಕಳೊಂದಿಗೆ ಶಿವರಾಜ್​ಕುಮಾರ್ ಹಾಗೂ ಗೀತಾ ಶಿವರಾಜ್​ಕುಮಾರ್ ದಂಪತಿ ನಂದಿ ಬೆಟ್ಟಕ್ಕೆ ಪ್ರವಾಸ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಶಿವಣ್ಣ, ಶಕ್ತಿಧಾಮದ ಕುರಿತು ಹಲವು ಮಾಹಿತಿ ಹಂಚಿಕೊಂಡಿದ್ದಾರೆ.

Shiva Rajkumar: ಶಕ್ತಿಧಾಮದಲ್ಲಿ ಆಶ್ರಯ ಪಡೆಯಲಿದ್ದಾರೆ ಇನ್ನಷ್ಟು ಮಕ್ಕಳು; ಮಾಹಿತಿ ಹಂಚಿಕೊಂಡ ಶಿವಣ್ಣ
ಭೋಗನಂದೀಶ್ವರ ದೇವಾಲಯದಲ್ಲಿ ಶಕ್ತಿಧಾಮದ ಮಕ್ಕಳು, ಶಿವರಾಜ್​ಕುಮಾರ್
Updated By: shivaprasad.hs

Updated on: Feb 03, 2022 | 12:18 PM

ಚಿಕ್ಕಬಳ್ಳಾಪುರ: ಡಾ.ರಾಜ್ ಕುಟುಂಬ ಆರಂಭಿಸಿದ ಸಂಸ್ಥೆ ಶಕ್ತಿಧಾಮ (Shaktidhama). ಮೈಸೂರಿನಲ್ಲಿರುವ ಈ ಸಂಸ್ಥೆಯ ಮಕ್ಕಳು ಇದೀಗ ಬೆಂಗಳೂರು, ಚಿಕ್ಕಬಳ್ಳಾಪುರ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸದ ಮುಂದಾಳತ್ವ ವಹಿಸಿದವರು ಸ್ವತಃ ಶಿವರಾಜ್​ಕುಮಾರ್ (Shiva Rajkumar) ಹಾಗೂ ಗೀತಾ ಶಿವರಾಜ್​ಕುಮಾರ್ (Geetha Shiva Rajkumar). ಇಂದು ಮಕ್ಕಳನ್ನು ಚಿಕ್ಕಬಳ್ಳಾಪುರದ ಭೋಗನಂದೀಶ್ವರ ದೇವಾಲಯ ಹಾಗೂ ನಂದಿ ಬೆಟ್ಟಕ್ಕೆ ಶಿವಣ್ಣ ದಂಪತಿ ಕರೆದೊಯ್ದಿದ್ದಾರೆ. ಮಕ್ಕಳಿಗೆ ಮತ್ತಷ್ಟು ಅರಿವು ಮೂಡಿಸಲು ಪ್ರವಾಸ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ ಶಿವಣ್ಣ. ಪುನೀತ್ ನೋಡಿಕೊಳ್ಳುತ್ತಿದ್ದ ಶಕ್ತಿಧಾಮದ ಮಕ್ಕಳೊಂದಿಗೆ ಶಿವರಾಜ್​ಕುಮಾರ್ ಆಪ್ತವಾಗಿ ಕಾಲಕಳೆಯುತ್ತಿದ್ದಾರೆ. ಅಲ್ಲದೇ ಸಂಸ್ಥೆಯಲ್ಲಿ ಇನ್ನಷ್ಟು ಮಕ್ಕಳಿಗೆ ಆಶ್ರಯ ನೀಡುವ ಕುರಿತೂ ಅವರು ಮಾಹಿತಿ ನೀಡಿದ್ದಾರೆ. ಇಲ್ಲಿಯವರೆಗೆ 150 ಮಕ್ಕಳು ಶಕ್ತಿಧಾಮದಲ್ಲಿದ್ದರು. ಮುಂದಿನ ವರ್ಷದಿಂದ ಈ ಸಂಖ್ಯೆ 200ಕ್ಕೇರಲಿದೆ ಎಂದು ಶಿವಣ್ಣ ಮಾಹಿತಿ ನೀಡಿದ್ದಾರೆ. ಭೋಗನಂದೀಶ್ವರ ದೇವಾಲಯಕ್ಕೆ ಭೇಟಿ ನೀಡಿದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್​ಕುಮಾರ್, ಹಲವು ವಿಚಾರ ಹಂಚಿಕೊಂಡಿದ್ದಾರೆ.

ಶಿವರಾಜ್​ಕುಮಾರ್ ಹೇಳಿದ್ದೇನು?

ನಂದಿ ಗ್ರಾಮದಲ್ಲಿ ನಟ ಶಿವರಾಜ್ ಕುಮಾರ್ ಮಾತನಾಡಿ, ‘‘ನಮ್ಮ ತಂದೆ ತಾಯಿ ಹಾಗೂ ಕೆಂಪಯ್ಯನವರು ಆರಂಭಿಸಿದ ಸಂಸ್ಥೆ ಶಕ್ತಿಧಾಮ. ಸಾಕಷ್ಟು ಟ್ರಸ್ಟಿಗಳು ಸೇರಿ ಆರಂಭ ಮಾಡಿದ ಸಂಸ್ಥೆ ಇದು. ಶಕ್ತಿಧಾಮ ಸಂಸ್ಥೆಯಲ್ಲಿ 150 ಮಂದಿ‌ ಮಕ್ಕಳಿದ್ದಾರೆ. ಈ ವರ್ಷದಲ್ಲಿ ಈ ಸಂಖ್ಯೆ 200ಕ್ಕೇರಲಿದೆ. ಅವರಿಗೆ ಊಟ ವಸತಿ ಶಾಲೆ ಎಲ್ಲಾ ಜವಾಬ್ದಾರಿ ನಮ್ಮದು. ಮಕ್ಕಳಿಗೆ ಅರಿವು ಮೂಡಿಸುವ ಸಲುವಾಗಿ ಪ್ರವಾಸ ಕೈಗೊಳ್ಳಲಾಗಿದೆ. ಬೆಂಗಳೂರು ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಜ್ಞಾನ ಇರಲಿ ಎಂದು ಪ್ರವಾಸ ಮಾಡುತ್ತಿದ್ದೇವೆ’’ ಎಂದು ಹೇಳಿದ್ದಾರೆ.

‘‘ಅಮ್ಮನ ನಂತರ ಗೀತಾ ಶಿವರಾಜ್​ಕುಮಾರ್ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಸ್ವಂತ ಮನೆ ಎಂಬ ಭಾವನೆ ಬರಲಿ, ಬೇರೆ ಎಂಬ ಭಾವನೆ ಬರಬಾರದು’’ ಎಂದು ಶಿವಣ್ಣ ಹೇಳಿದ್ದಾರೆ. ಪುನೀತ್ ಇಲ್ಲದ ನೋವು ಯಾವುತ್ತೂ ಹೋಗುವುದಿಲ್ಲ. ಅಪ್ಪು ಯಾವತ್ತು ನಮ್ಮ ಜೊತೆಯಲ್ಲಿ ಇದ್ದಾರೆ ಅನ್ನೋದೆ ನಮ್ಮ ಭಾವನೆ. ಅಪ್ಪುನಾ ಸುಲಭವಾಗಿ ಮರೆಯಲು ಸಾಧ್ಯವಿಲ್ಲ ಎಂದು ಶಿವರಾಜ್​ಕುಮಾರ್ ಹೇಳಿದ್ದಾರೆ.

ಶಿವರಾಜ್​ಕುಮಾರ್ ಮಾತು ಇಲ್ಲಿದೆ:

ಶಿವರಾಜ್​ಕುಮಾರ್ ನಿವಾಸದಲ್ಲಿಯೇ ಮಕ್ಕಳಿಗೆ ಊಟೋಪಚಾರ:

ಮೈಸೂರಿನಿಂದ ಆಗಮಿಸಿರುವ ಶಕ್ತಿಧಾಮದ ಮಕ್ಕಳು ಸದ್ಯ ಶಿವಣ್ಣ ನಿವಾಸದ ಸಮೀಪವಿರುವ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶಿವಣ್ಣ ಅವರ ಮನೆ ಮುಂದೆ ಪೆಂಡಾಲ್ ಹಾಕಿ ಮಕ್ಕಳಿಗೆ ಮಕ್ಕಳಿಗೆ ಭೋಜನ ವ್ಯವಸ್ಥೆಯನ್ನು ಮಾಡಲಾಗಿದೆ. ಮಕ್ಕಳಿಗೆ ಬೇಕಾದಂತೆ ಊಟದ ವ್ಯವಸ್ಥೆ ಇದ್ದು, 140ಕ್ಕೂ ಹೆಚ್ಚು ಮಂದಿ ಕುಳಿತು ಊಟ ಮಾಡುವಂತೆ ಸಿದ್ಧತೆ ಮಾಡಲಾಗಿದೆ.

ಇದನ್ನೂ ಓದಿ:

‘ಗೀತಾ ಅವರು ತಾಯಿ ಸ್ಥಾನದಲ್ಲಿ ಇದ್ದಾರೆ’; ಮೈಸೂರಿನ ಶಕ್ತಿಧಾಮದ ಬಗ್ಗೆ ಶಿವರಾಜ್​ಕುಮಾರ್​ ಮಾತು

Puneeth Rajkumar: ‘ಜೇಮ್ಸ್​​​’ ಚಿತ್ರದ ಪುನೀತ್ ಪಾತ್ರಕ್ಕೆ ಕಂಠದಾನ ಮಾಡಿದ ಶಿವಣ್ಣ; ಇಲ್ಲಿವೆ ಫೋಟೋಗಳು