Shivarajkumar: ಶಿವಣ್ಣ ಬರ್ತ್​ಡೇಗೆ ಸಾಲುಸಾಲು ಸಿನಿಮಾ ಅನೌನ್ಸ್​; ಫ್ಯಾನ್ಸ್​ಗೆ ಸರ್​ಪ್ರೈಸ್​ ಮೇಲೆ ಸರ್​ಪ್ರೈಸ್

ಶಿವಣ್ಣನ ಬರ್ತ್​​ಡೇ ದಿನ ಅಭಿಮಾನಿಗಳಿಗೆ ಸರ್​ಪ್ರೈಸ್ ಮೇಲೆ ಸರ್​ಪ್ರೈಸ್ ಸಿಗುತ್ತಿದೆ. ಸದ್ಯ ಅವರ ಕೈಯಲ್ಲಿ 10 ಸಿನಿಮಾಗಳಿವೆ. ಇದರ ಜೊತೆಗೆ ಒಂದಷ್ಟು ಹೊಸ ಸಿನಿಮಾ ಘೋಷಣೆ ಆಗಿದೆ.

Shivarajkumar: ಶಿವಣ್ಣ ಬರ್ತ್​ಡೇಗೆ ಸಾಲುಸಾಲು ಸಿನಿಮಾ ಅನೌನ್ಸ್​; ಫ್ಯಾನ್ಸ್​ಗೆ ಸರ್​ಪ್ರೈಸ್​ ಮೇಲೆ ಸರ್​ಪ್ರೈಸ್
ಶಿವಣ್ಣನ ಹೊಸ ಸಿನಿಮಾ

Updated on: Jul 12, 2023 | 10:18 AM

ಶಿವರಾಜ್​ಕುಮಾರ್ (Shivarajkumar) ಅವರಿಗೆ ಇಂದು (ಜುಲೈ 12) ಬರ್ತ್​ಡೇ ಸಂಭ್ರಮ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಶುಭಾಶಯಗಳು ಬರುತ್ತಿವೆ. ಸ್ಟಾರ್ ಹೀರೋಗಳ ಬರ್ತ್​ಡೇ ಎಂದರೆ ಸಿನಿಮಾ ತಂಡದಿಂದ ಹೊಸ ಟೀಸರ್, ಪೋಸ್ಟರ್ ರಿಲೀಸ್ ಆಗುತ್ತವೆ. ಹೊಸ ಹೊಸ ಸಿನಿಮಾಗಳು ಕೂಡ ಘೋಷಣೆ ಆಗುತ್ತವೆ. ಅದೇ ರೀತಿ ಶಿವರಾಜ್​ಕುಮಾರ್ ಅವರ ಬರ್ತ್​​ಡೇ ಪ್ರಯುಕ್ತ ಹೊಸಹೊಸ ಸಿನಿಮಾಗಳು ಘೋಷಣೆ ಆಗುತ್ತಿವೆ. ಅಭಿಮಾನಿಗಳಿಗೆ ಸರ್​ಪ್ರೈಸ್ ಮೇಲೆ ಸರ್​ಪ್ರೈಸ್ ಸಿಗುತ್ತಿದೆ. ಸದ್ಯ ಅವರ ಕೈಯಲ್ಲಿ 10 ಸಿನಿಮಾಗಳಿವೆ. ಇದರ ಜೊತೆಗೆ ಒಂದಷ್ಟು ಹೊಸ ಸಿನಿಮಾ ಘೋಷಣೆ ಆಗಿದೆ.

ಗಣೇಶ್ ಜೊತೆ ಹೊಸ ಸಿನಿಮಾ

ಶಿವರಾಜ್​ಕುಮಾರ್ ಹಾಗೂ ಗಣೇಶ್ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ, ಇವರಿಗೆ ಒಟ್ಟಾಗಿ ಸಿನಿಮಾ ಮಾಡೋಕೆ ಸಾಧ್ಯವಾಗಿರಲಿಲ್ಲ. ಈಗ ಇವರು ಒಂದಾಗಿದ್ದಾರೆ. ‘ಪ್ರೊಡಕ್ಷನ್ ನಂಬರ್ 6’ ಎಂದು ತಾತ್ಕಾಲಿಕವಾಗಿ ಶೀರ್ಷಿಕೆ ಇಡಲಾಗಿದೆ. ಇಂದು ರಿಲೀಸ್ ಆದ ಹೊಸ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ. ಕೆಎಸ್​ ರವಿಕುಮಾರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂಬಿ ಬಾಬು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಲಕ್ಕಿ ಗೋಪಾಲ್ ಸಿನಿಮಾಗೆ ಟೈಟಲ್

ಲಕ್ಕಿ ಗೋಪಾಲ್ ಅವರು ಶಿವರಾಜ್​ಕುಮಾರ್ ಅವರ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಮೈಲಾರಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘IV Returns’ ಎಂದು ಟೈಟಲ್ ಇಡಲಾಗಿದೆ.


ಇದನ್ನೂ ಓದಿ:  ಶಿವಣ್ಣ ನಟಿಸಬೇಕಿದ್ದ ಆಕಸ್ಮಿಕ ಸಿನಿಮಾದಲ್ಲಿ ಅಣ್ಣಾವ್ರು ನಟಿಸಿದ್ದು ಹೇಗೆ?

ಇನ್ನೂ ಅನೇಕ ಸಿನಿಮಾ ಘೋಷಣೆ

ರಾಮ್ ಧೂಲಿಪುಡಿ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ಅವರು ಸೈನಿಕನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಗಮನ ಸೆಳೆಯುತ್ತಿದೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ತಮಿಳು ನಿರ್ದೇಶಕ ಕಾರ್ತಿಕ್ ಅದ್ವೈತ್ ಅವರು ಶಿವಣ್ಣನ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಇನ್ನೂ ಅನೇಕ ಚಿತ್ರಗಳು ಘೋಷಣೆ ಆಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us