‘ಘೋಸ್ಟ್ ಸಿನಿಮಾದ ಹಿಂದಿ ರಿಲೀಸ್ ಕಥೆ ಏನು?’; ಶಿವಣ್ಣನಿಗೆ ಅನುಪಮ್ ಖೇರ್ ಪ್ರಶ್ನೆ

ಶಿವರಾಜ್​ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾದ ಟೀಸರ್ ಗಮನ ಸೆಳೆದಿದೆ. ಅವರು ಗ್ಯಾಂಗ್​ಸ್ಟರ್ ಆಗಿ ಮಿಂಚಲು ರೆಡಿ ಆಗಿದ್ದಾರೆ. ಶಿವಣ್ಣನಿಗೆ ಈ ರೀತಿಯ ಪಾತ್ರಗಳು ಹೆಚ್ಚು ಹೊಂದುತ್ತವೆ. ಈ ಕಾರಣದಿಂದಲೇ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ‘ಘೋಸ್ಟ್’ ಸಿನಿಮಾ ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುವ ಸೂಚನೆ ನೀಡಿದ್ದಾರೆ ಶಿವಣ್ಣ.

‘ಘೋಸ್ಟ್ ಸಿನಿಮಾದ ಹಿಂದಿ ರಿಲೀಸ್ ಕಥೆ ಏನು?’; ಶಿವಣ್ಣನಿಗೆ ಅನುಪಮ್ ಖೇರ್ ಪ್ರಶ್ನೆ
ಅನುಪಮ್-ಶಿವಣ್ಣ

Updated on: Sep 25, 2023 | 12:49 PM

ಶಿವರಾಜ್​ಕುಮಾರ್ (Shivarajkumar) ನಟನೆಯ ‘ಘೋಸ್ಟ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರ ಅಕ್ಟೋಬರ್ 19ರಂದು ಅದ್ದೂರಿಯಾಗಿ ರಿಲೀಸ್ ಆಗಲಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಶ್ರೀನಿ ನಿರ್ದೇಶನ ಮಾಡಿದ್ದಾರೆ. ‘ಘೋಸ್ಟ್’ ಸಿನಿಮಾದ ಹಿಂದಿ ಅವತರಣಿಕೆ​ ಅಕ್ಟೋಬರ್ 19ರಂದೇ ರಿಲೀಸ್ ಆಗಲಿದೆಯೇ ಎನ್ನುವ ಪ್ರಶ್ನೆ ಅನೇಕರಲ್ಲಿದೆ. ಇದೇ ಪ್ರಶ್ನೆಯನ್ನು ಶಿವಣ್ಣನಿಗೆ ಅನುಪಮ್ ಖೇರ್ ಅವರು ಕೇಳಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.

ಶಿವರಾಜ್​ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾದ ಟೀಸರ್ ಗಮನ ಸೆಳೆದಿದೆ. ಅವರು ಗ್ಯಾಂಗ್​ಸ್ಟರ್ ಆಗಿ ಮಿಂಚಲು ರೆಡಿ ಆಗಿದ್ದಾರೆ. ಶಿವಣ್ಣನಿಗೆ ಈ ರೀತಿಯ ಪಾತ್ರಗಳು ಹೆಚ್ಚು ಹೊಂದುತ್ತವೆ. ಈ ಕಾರಣದಿಂದಲೇ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ‘ಘೋಸ್ಟ್’ ಸಿನಿಮಾ ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುವ ಸೂಚನೆ ನೀಡಿದ್ದಾರೆ ಶಿವಣ್ಣ.

‘ಹೇಗಿದ್ದೀರಿ?’ ಎಂದು ಶಿವಣ್ಣನಿಗೆ ಕೇಳಿದರು ಅನುಪಮ್ ಖೇರ್. ಇದಕ್ಕೆ ಶಿವರಾಜ್​ಕುಮಾರ್ ಖುಷಿಖುಷಿಯಿಂದ ಉತ್ತರಿಸಿದರು. ‘ಘೋಸ್ಟ್ ಹಿಂದಿ ಸಿನಿಮಾ ರಿಲೀಸ್ ಕಥೆ ಏನು?’ ಎಂದು ಅನುಪಮ್ ಖೇರ್ ಪ್ರಶ್ನೆ ಮಾಡಿದರು. ‘ತಾಳ್ಮೆಯಿಂದ ಕಾಯಿರಿ. ಸರ್​ಪ್ರೈಸ್ ಇದೆ’ ಎಂದರು ಶಿವಣ್ಣ. ಇದೇನು ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ಪ್ರಶ್ನೆ ಇದೆ.

ಹಿಂದಿ ಭಾಷೆಯಲ್ಲಿ ‘ಪೆನ್ ಸ್ಟುಡಿಯೋಸ್’ ‘ಘೋಸ್ಟ್’ ಚಿತ್ರದ ಹಂಚಿಕೆ ಹಕ್ಕನ್ನು ಪಡೆದಿದೆ. ಮೂಲಗಳ ಪ್ರಕಾರ ದೊಡ್ಡ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಮಾಡಲು ಅವರು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ‘ಜೈಲರ್’ ಚಿತ್ರದಿಂದ ಶಿವಣ್ಣ ಅವರ ಖ್ಯಾತಿ ಹೆಚ್ಚಿದೆ. ಪರಭಾಷೆಯಲ್ಲಿ ‘ಘೋಸ್ಟ್’ ರಿಲೀಸ್ ಆಗಲು ಇದು ಸಹಕಾರಿ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಶಿವಣ್ಣ ರೂಲ್ ಮಾಡ್ತಾರೆ’: ‘ಘೋಸ್ಟ್’ ಹೊಸ ಹಾಡಿನ ಮ್ಯೂಸಿಕ್​ಗೆ ಫ್ಯಾನ್ಸ್ ಫಿದಾ

‘ಘೋಸ್ಟ್’ ಚಿತ್ರದ ಬಿಡುಗಡೆ ಹಕ್ಕು, ಡಿಜಿಟಲ್ ಹಕ್ಕು, ಸ್ಯಾಟಲೈಟ್ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟ ಆಗಿದೆ. ‘ಜವಾನ್’, ‘ಆರ್​ಆರ್​ಆರ್’ ಸಿನಿಮಾಗಳನ್ನು ವಿತರಣೆ ಮಾಡಿದ ಅನುಭವ ಪೆನ್ ಸ್ಟುಡಿಯೋಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us