‘ಶಿವಣ್ಣ ರೂಲ್ ಮಾಡ್ತಾರೆ’: ‘ಘೋಸ್ಟ್’ ಹೊಸ ಹಾಡಿನ ಮ್ಯೂಸಿಕ್ಗೆ ಫ್ಯಾನ್ಸ್ ಫಿದಾ
ಅರ್ಜುನ್ ಜನ್ಯಾ ಅವರು ಮ್ಯೂಸಿಕ್ ಕಂಪೋಸರ್ ಆಗಿ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಇದ್ದಾರೆ. ಅವರು ವಿವಿಧ ರೀತಿಯ ಹಾಡುಗಳನ್ನು ನೀಡಿ ಗಮನ ಸೆಳೆದಿದ್ದಾರೆ. ‘ಒಎಂಜಿ ಮ್ಯೂಸಿಕ್’ ರಿಲೀಸ್ ಮಾಡಲಾಗಿದೆ. ಒಂದೇ ವಿಡಿಯೋದಲ್ಲಿ ಕನ್ನಡ, ಮಲಯಾಳಂ, ತಮಿಳಿನ ಲಿರಿಕ್ಸ್ ಇದೆ.
ಶಿವರಾಜ್ಕುಮಾರ್ ಅವರು ‘ಘೋಸ್ಟ್’ ಸಿನಿಮಾ (Ghost Movie) ಮೂಲಕ ಪ್ರೇಕ್ಷಕರ ಎದುರು ಬರೋಕೆ ರೆಡಿ ಆಗಿದ್ದಾರೆ. ಈ ಚಿತ್ರದಲ್ಲಿ ಅವರು ಗ್ಯಾಂಗ್ಸ್ಟರ್ ಅವತಾರ ತಾಳಿದ್ದಾರೆ. ಶಿವಣ್ಣ ಅವರಿಗೆ ಈ ರೀತಿಯ ಪಾತ್ರಗಳು ಹೆಚ್ಚು ಹೊಂದುತ್ತವೆ ಅನ್ನೋದನ್ನು ಮತ್ತೆ ಹೇಳಬೇಕಿಲ್ಲ. ಈ ಕಾರಣದಿಂದಲೇ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈಗ ಈ ಚಿತ್ರದ ಸಾಂಗ್ ರಿಲೀಸ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ಸಾಂಗ್ ಕಂಪೋಸರ್ ಅರ್ಜುನ್ ಜನ್ಯಾಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಅರ್ಜುನ್ ಜನ್ಯಾ ಅವರು ಮ್ಯೂಸಿಕ್ ಕಂಪೋಸರ್ ಆಗಿ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಇದ್ದಾರೆ. ಅವರು ವಿವಿಧ ರೀತಿಯ ಹಾಡುಗಳನ್ನು ನೀಡಿ ಗಮನ ಸೆಳೆದಿದ್ದಾರೆ. ‘ಒಎಂಜಿ ಮ್ಯೂಸಿಕ್’ ರಿಲೀಸ್ ಮಾಡಲಾಗಿದೆ. ಒಂದೇ ವಿಡಿಯೋದಲ್ಲಿ ಕನ್ನಡ, ಮಲಯಾಳಂ, ತಮಿಳಿನ ಲಿರಿಕ್ಸ್ ಇದೆ. ಪೂರ್ತಿ ಹಾಡನ್ನು ಕೇಳೋಕೆ ಅಭಿಮಾನಿಗಳು ಕಾದಿದ್ದಾರೆ. ಸದ್ಯ, ಹಾಡಿನ ತುಣುಕಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಕೇಳಿ ಬರುತ್ತಿದೆ. ‘ಶಿವಣ್ಣ ರೂಲ್ ಮಾಡೋದು ಪಕ್ಕಾ’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಆ್ಯಕ್ಷನ್ ಸಿನಿಮಾಗಳಲ್ಲಿ ಬಿಜಿಎಂ ಪ್ರಮುಖ ಪಾತ್ರ ವಹಿಸುತ್ತದೆ. ಬಿಜಿಎಂ ಚೆನ್ನಾಗಿದ್ದರೆ ಸಿನಿಮಾದ ತೂಕ ಹೆಚ್ಚುತ್ತದೆ. ‘ಘೋಸ್ಟ್’ ಸಿನಿಮಾದಲ್ಲಿ ಬಿಜಿಎಂ ಭರ್ಜರಿಯಾಗಿದೆ ಅನ್ನೋದಕ್ಕೆ ಈ ಹಾಡು ಸಾಕ್ಷಿ ಒದಗಿಸುವಂತಿದೆ. ಪರಭಾಷಿಗರು ಈ ಹಾಡನ್ನು ಕೇಳಿ ಇಷ್ಟಪಡುತ್ತಿದ್ದಾರೆ.
“Original Gangster Music” is out now Ghost in Theatres this oct 19#GHOST #OGM@NimmaShivanna @SandeshPro @jayantilalgada @ArjunJanyaMusic @TSeries @baraju_SuperHit https://t.co/Kj7g9JmGRm pic.twitter.com/ti1BO9mtBj
— SRINI (@lordmgsrinivas) September 22, 2023
ಇದನ್ನೂ ಓದಿ: ಸಿನಿಮಾ ರಿಲೀಸ್ಗೂ ಮೊದಲೇ ದೊಡ್ಡ ಬಿಸ್ನೆಸ್ ಮಾಡಿದ ಶಿವಣ್ಣನ ‘ಘೋಸ್ಟ್’ ಸಿನಿಮಾ
‘ಘೋಸ್ಟ್’ ಚಿತ್ರವನ್ನು ಶ್ರೀನಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಶಿವರಾಜ್ಕುಮಾರ್, ಅನುಪಮ್ ಖೇರ್, ಪ್ರಶಾಂತ್ ನಾರಾಯಣ್, ಅರ್ಚನಾ ಜೋಯಿಸ್, ಸತ್ಯಪ್ರಕಾಶ್, ದತ್ತಣ್ಣ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಶ್ರೀನಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಮೂಲಕ ಸಂದೇಶ್ ನಾಗರಾಜ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ