‘ನೀವು ಕುಂದಾಪುರದವರು ಎಂದೇ ಅನಿಸುತ್ತದೆ’; ರಿಷಬ್-ಜೂ. ಎನ್ಟಿಆರ್ ಕನ್ನಡ ಸಂಭಾಣೆ ಹೇಗಿತ್ತು ನೋಡಿ
ಇತ್ತೀಚೆಗೆ ಸೈಮಾ ಅವಾರ್ಡ್ ಕಾರ್ಯಕ್ರಮ ನಡೆದಿದೆ. ರಿಷಬ್ ಶೆಟ್ಟಿ, ಜೂನಿಯರ್ ಎನ್ಟಿಆರ್ ಕೂಡ ಈ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದರು. ರಿಷಬ್ ನಟನೆಯ ‘ಕಾಂತಾರ’ ಸಿನಿಮಾಗೆ 10 ಪ್ರಶಸ್ತಿ ಸಿಕ್ಕಿದೆ. ರಿಷಬ್ ಕೂಡ ಅವಾರ್ಡ್ ಗೆದ್ದಿದ್ದಾರೆ. ರಿಷಬ್ ವೇದಿಕೆ ಮೇಲೆ ಮಾತನಾಡುವಾಗ ಜೂನಿಯರ್ ಎನ್ಟಿಆರ್ಗೆ ಧನ್ಯವಾದ ಹೇಳಿದ್ದಾರೆ.
ಜೂನಿಯರ್ ಎನ್ಟಿಆರ್ (Jr NTR) ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಇದೆ. ಅವರು ಅನೇಕ ಬಾರಿ ಕನ್ನಡದಲ್ಲಿ ಮಾತನಾಡಿದ್ದಿದೆ. ‘ಆರ್ಆರ್ಆರ್’ ಚಿತ್ರದಲ್ಲಿ ಅವರು ಮಾಡಿದ ಪಾತ್ರಕ್ಕೆ ಅವರೇ ಡಬ್ ಮಾಡಿದ್ದರು. ಪುನೀತ್ ರಾಜ್ಕುಮಾರ್ ನಟನೆಯ ‘ಚಕ್ರವ್ಯೂಹ’ ಸಿನಿಮಾದ ‘ಗೆಳೆಯ..’ ಹಾಡನ್ನು ಅವರೇ ಹಾಡಿದ್ದರು. ಈಗ ಜೂನಿಯರ್ ಎನ್ಟಿಆರ್ ಹಾಗೂ ರಿಷಬ್ ಶೆಟ್ಟಿ (Rishab Shetty) ಕನ್ನಡದಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳು ಇದನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಅವರು ಮುಖಾಮುಖಿ ಆಗಿದ್ದು ಎಲ್ಲಿ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.
ಇತ್ತೀಚೆಗೆ ಸೈಮಾ ಅವಾರ್ಡ್ ಕಾರ್ಯಕ್ರಮ ನಡೆದಿದೆ. ರಿಷಬ್ ಶೆಟ್ಟಿ, ಜೂನಿಯರ್ ಎನ್ಟಿಆರ್ ಕೂಡ ಈ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದರು. ರಿಷಬ್ ನಟನೆಯ ‘ಕಾಂತಾರ’ ಸಿನಿಮಾಗೆ 10 ಪ್ರಶಸ್ತಿ ಸಿಕ್ಕಿದೆ. ರಿಷಬ್ ಕೂಡ ಅವಾರ್ಡ್ ಗೆದ್ದಿದ್ದಾರೆ. ರಿಷಬ್ ವೇದಿಕೆ ಮೇಲೆ ಮಾತನಾಡುವಾಗ ಜೂನಿಯರ್ ಎನ್ಟಿಆರ್ಗೆ ಧನ್ಯವಾದ ಹೇಳಿದ್ದಾರೆ.
ರಿಷಬ್ಗೆ ‘ಕಂಗ್ರಾಜ್ಯುಲೇಷನ್ಸ್’ ಎಂದರು ಜೂನಿಯರ್ ಎನ್ಟಿಆರ್. ಆ ಬಳಿಕ ಅಕುಲ್ ಬಾಲಾಜಿ ಅವರು ಜೂನಿಯರ್ ಎನ್ಟಿಆರ್ ಬಳಿ ತೆರಳಿ, ‘ನಿಮ್ಮ ಬಾಯಲ್ಲಿ ಕನ್ನಡ ಕೇಳೋಕೆ ಖುಷಿ ಆಗುತ್ತದೆ. ಮನೆಯಲ್ಲಿ ಹೀಗೆಯೇ ಮಾತನಾಡೋದಾ’ ಎಂದು ಕೇಳಿದರು. ‘ಅಮ್ಮನ ಜೊತೆ ನಾನು ಹೀಗೆಯೇ ಮಾತನಾಡೋದು’ ಎಂದರು ಜೂನಿಯರ್ ಎನ್ಟಿಆರ್.
View this post on Instagram
ಇದನ್ನೂ ಓದಿ: ‘ಹ್ಯಾಪಿ ಬರ್ತ್ಡೇ ಸೈಫ್ ಸರ್..’: ಸೈಫ್ ಅಲಿ ಖಾನ್ಗೆ ಜನ್ಮದಿನದ ಶುಭ ಕೋರಿದ ಜೂನಿಯರ್ ಎನ್ಟಿಆರ್
‘ನೀವು ತುಂಬಾ ಚೆನ್ನಾಗಿ ಕನ್ನಡ ಮಾತನಾಡ್ತೀರ’ ಎಂದು ಜೂನಿಯರ್ ಎನ್ಟಿಆರ್ ಅವರನ್ನು ಹೊಗಳಿದರು ಅಕುಲ್. ‘ಅವರು (ರಿಷಬ್) ಕನ್ನಡ ಮಾತಾಡಿದ್ಮೇಲೆ ನಮ್ಮದೆಲ್ಲ ಎಲ್ಲಿ’ ಎಂದರು ಜೂ. ಎನ್ಟಿಆರ್. ಆಗ ವೇದಿಕೆ ಮೇಲಿದ್ದ ರಿಷಬ್ ಮಾತು ಆರಂಭಿಸಿದರು. ‘ನಿಮಗೆ ನೇರವಾಗಿ ಸಿಕ್ಕಿ ಧನ್ಯವಾದ ಹೇಳೋಕೆ ಚಾನ್ಸ್ ಸಿಗಲೇ ಇಲ್ಲ. ಕಿರಿಕ್ ಪಾರ್ಟಿ ಸಿನಿಮಾ ಸೈಮಾ ಗೆದ್ದಾಗ ನಮಗೆ ಅವಾರ್ಡ್ ನೀಡಿದ್ದು ನೀವೇ ಆಗಿತ್ತು. ನಿಮ್ಮ ತಾಯಿ ಊರು, ನಮ್ಮ ಊರು ಎರಡೂ ಒಂದೇ. ಹೀಗಾಗಿ, ನೀವು ಆಂಧ್ರದವರು ಅನಿಸುವುದೇ ಇಲ್ಲ. ನಿಮ್ಮದು ಕುಂದಾಪುರ ಎನ್ನುವುದೇ ನನ್ನ ಭಾವನೆ’ ಎಂದರು ರಿಷಬ್ ಶೆಟ್ಟಿ. ಈ ವೇಳೆ ಜೂನಿಯರ್ ಎನ್ಟಿಆರ್ ಮನಃಪೂರ್ತಿಯಾಗಿ ನಕ್ಕರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ