AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹ್ಯಾಪಿ ಬರ್ತ್​ಡೇ ಸೈಫ್​ ಸರ್​..’: ಸೈಫ್​ ಅಲಿ ಖಾನ್​ಗೆ ಜನ್ಮದಿನದ ಶುಭ ಕೋರಿದ ಜೂನಿಯರ್​ ಎನ್​ಟಿಆರ್​

‘ದೇವರ’ ಸಿನಿಮಾ ತಂಡದಿಂದ ಸೈಫ್​ ಅಲಿ ಖಾನ್​ ಅವರ ಫಸ್ಟ್​ ಲುಕ್​ ಪೋಸ್ಟರ್​ ಅನಾವರಣ ಮಾಡಲಾಗಿದೆ. ಇದನ್ನು ಜೂನಿಯರ್​ ಎನ್​ಟಿಆರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಶುಭ ಕೋರಿದ್ದಾರೆ. ‘ಹ್ಯಾಪಿ ಬರ್ತ್​ಡೇ ಸೈಫ್​ ಸರ್​..’ ಎಂದು ಗೌರವದಿಂದ ಅವರು ವಿಶ್​ ಮಾಡಿದ್ದಾರೆ. ಅಂದಹಾಗೆ, ಈ ಸಿನಿಮಾದಲ್ಲಿ ಸೈಫ್​ ಅಲಿ ಖಾನ್​ ಅವರು ಭೈರ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ.

‘ಹ್ಯಾಪಿ ಬರ್ತ್​ಡೇ ಸೈಫ್​ ಸರ್​..’: ಸೈಫ್​ ಅಲಿ ಖಾನ್​ಗೆ ಜನ್ಮದಿನದ ಶುಭ ಕೋರಿದ ಜೂನಿಯರ್​ ಎನ್​ಟಿಆರ್​
ಸೈಫ್​ ಅಲಿ ಖಾನ್​, ಜೂನಿಯರ್ ಎನ್​ಟಿಆರ್​
ಮದನ್​ ಕುಮಾರ್​
|

Updated on: Aug 16, 2023 | 5:46 PM

Share

ನಟ ಸೈಫ್​ ಅಲಿ ಖಾನ್​ (Saif Ali Khan) ಅವರು ಈಗ ಬಾಲಿವುಡ್​ಗೆ ಮಾತ್ರ ಸೀಮಿತವಾಗಿಲ್ಲ. ದಕ್ಷಿಣ ಭಾರತದಲ್ಲೂ ಅವರಿಗೆ ಸಖತ್​ ಬೇಡಿಕೆ ಸೃಷ್ಟಿ ಆಗಿದೆ. ಹಿಂದಿ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚುವ ಅವರು ಸೌತ್​ ಸಿನಿಮಾಗಳಲ್ಲಿ ವಿಲನ್​ ಅವತಾರ ತಾಳುತ್ತಿದ್ದಾರೆ. ಪ್ರಭಾಸ್​ ನಟನೆಯ ‘ಆದಿಪುರುಷ್​’ ಸಿನಿಮಾದಲ್ಲಿ ರಾವಣನ ಪಾತ್ರ ಮಾಡುವ ಮೂಲಕ ಅವರು ಗಮನ ಸೆಳೆದಿದ್ದರು. ಈಗ ಜೂನಿಯರ್​ ಎನ್​ಟಿಆರ್​ ಅಭಿನಯದ ದೇವರ’ (Devara) ಸಿನಿಮಾದಲ್ಲಿ ಕೂಡ ಸೈಫ್​ ಅಲಿ ಖಾನ್​ ಅವರು ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇಂದು (ಆಗಸ್ಟ್​ 16) ಅವರ ಜನ್ಮದಿನ. ಆ ಪ್ರಯುಕ್ತ ಎಲ್ಲರೂ ಅವರಿಗೆ ಶುಭ ಕೋರುತ್ತಿದ್ದಾರೆ. ‘ದೇವರ’ ಚಿತ್ರತಂಡದ ಪರವಾಗಿ ಜೂನಿಯರ್​ ಎನ್​ಟಿಆರ್​ (Jr NTR) ಕೂಡ ಸೈಫ್​ ಅಲಿ ಖಾನ್​ಗೆ ವಿಶ್​ ಮಾಡಿದ್ದಾರೆ.

‘ದೇವರ’ ಸಿನಿಮಾ ತಂಡದಿಂದ ಸೈಫ್​ ಅಲಿ ಖಾನ್​ ಅವರ ಫಸ್ಟ್​ ಲುಕ್​ ಪೋಸ್ಟರ್​ ಅನಾವರಣ ಮಾಡಲಾಗಿದೆ. ಜೂನಿಯರ್​ ಎನ್​ಟಿಆರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಶುಭ ಕೋರಿದ್ದಾರೆ. ‘ಹ್ಯಾಪಿ ಬರ್ತ್​ಡೇ ಸೈಫ್​ ಸರ್​..’ ಎಂದು ಗೌರವದಿಂದ ಅವರು ವಿಶ್​ ಮಾಡಿದ್ದಾರೆ. ಅಂದಹಾಗೆ, ಈ ಸಿನಿಮಾದಲ್ಲಿ ಸೈಫ್​ ಅಲಿ ಖಾನ್​ ಅವರು ಭೈರ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಹೊಸ ಪೋಸ್ಟರ್​ ಮೂಲಕ ಈ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ.

ಜೂನಿಯರ್​ ಎನ್​ಟಿಆರ್ ಟ್ವೀಟ್​:

ಸೈಫ್​ ಅಲಿ ಖಾನ್​ ಅವರಿಗೆ ಈಗ 53 ವರ್ಷ ವಯಸ್ಸು. ಯಾವ ಪಾತ್ರ ಸಿಕ್ಕರೂ ಅವರು ಅದಕ್ಕೆ ನ್ಯಾಯ ಸಲ್ಲಿಸುತ್ತಾರೆ. ಬಾಲಿವುಡ್​ನಲ್ಲೂ ಅವರು ನೆಗೆಟಿವ್​ ಶೇಡ್​ ಇರುವ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ವಿಲನ್​ ಪಾತ್ರಗಳನ್ನು ಮಾಡುವ ಮೂಲಕ ವೃತ್ತಿಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಅವರು ನಟಿಸುತ್ತಿರುವುದರಿಂದ ‘ದೇವರ’ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚುವಂತಾಗಿದೆ.

ಇದನ್ನೂ ಓದಿ: ‘ಹೃದಯಂ’ ರಿಮೇಕ್​ನಲ್ಲಿ ಸೈಫ್​ ಅಲಿ ಖಾನ್​ ಮಗ ಇಬ್ರಾಹಿಂ? ಲಾಂಚ್​ ಮಾಡ್ತಾರೆ ಕರಣ್​ ಜೋಹರ್​

‘ದೇವರ’ ಸಿನಿಮಾಗೆ ಕೊರಟಾಲ ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದು ಕೂಡ ‘ಆರ್​ಆರ್​ಆರ್​’ ರೀತಿ ಪ್ಯಾನ್​ ಇಂಡಿಯಾ ಸಿನಿಮಾ ಆದ್ದರಿಂದ ಬಾಲಿವುಡ್​ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜೂನಿಯರ್​ ಎನ್​ಟಿಆರ್​ ಅವರಿಗೆ ಜೋಡಿಯಾಗಿ ಜಾನ್ವಿ ಕಪೂರ್​ ನಟಿಸುತ್ತಿದ್ದಾರೆ. ಅವರಿಗೆ ಇದು ಮೊದಲ ದಕ್ಷಿಣ ಭಾರತದ ಸಿನಿಮಾ ಎಂಬುದು ವಿಶೇಷ. ‘ಆರ್​ಆರ್​ಆರ್​’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆದ ಬಳಿಕ ಜೂನಿಯರ್​ ಎನ್​ಟಿಆರ್​ ಅವರು ‘ದೇವರ’ ಸಿನಿಮಾವನ್ನು ಕೈಗೆತ್ತಿಕೊಂಡರು. ಈ ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?