ಸಿನಿಮಾ ರಿಲೀಸ್ಗೂ ಮೊದಲೇ ದೊಡ್ಡ ಬಿಸ್ನೆಸ್ ಮಾಡಿದ ಶಿವಣ್ಣನ ‘ಘೋಸ್ಟ್’ ಸಿನಿಮಾ
‘ಆರ್ಆರ್ಆರ್’, ‘ಜವಾನ್’ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಅನುಭವ ‘ಪೆನ್ ಸ್ಟುಡಿಯೋ’ ಸಂಸ್ಥೆಗೆ ಇದೆ. ಈ ಸಂಸ್ಥೆ ಈಗ ‘ಘೋಸ್ಟ್’ ಚಿತ್ರದ ತೆಲುಗು ಹಾಗೂ ಹಿಂದಿಯ ವಿತರಣಾ ಹಕ್ಕನ್ನು ಪಡೆದುಕೊಂಡಿದೆ ಎಂದು ಸಂದೇಶ್ ತಿಳಿಸಿದ್ದಾರೆ.
ಶಿವರಾಜ್ಕುಮಾರ್ ನಟನೆ ‘ಘೋಸ್ಟ್’ ಸಿನಿಮಾ (Ghost Movie) ಬಗ್ಗೆ ಭರ್ಜರಿ ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಬಿಸ್ನೆಸ್ ಮಾಡುವ ಸೂಚನೆ ನೀಡಿದೆ. ಈ ಚಿತ್ರದ ಬಗ್ಗೆ ಎಷ್ಟು ನಿರೀಕ್ಷೆ ಸೃಷ್ಟಿ ಆಗಿದೆ ಎಂಬುದಕ್ಕೆ ಈ ಚಿತ್ರ ರಿಲೀಸ್ಗೂ ಮೊದಲೇ ಮಾಡುತ್ತಿರುವ ಬಿಸ್ನೆಸ್ ಸಾಕ್ಷಿ. ‘ಘೋಸ್ಟ್’ ಸಿನಿಮಾದದ ಥಿಯೇಟರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟ ಆಗಿದೆಯಂತೆ. ಇದರಿಂದ ನಿರ್ಮಾಪಕರು ಲಾಭ ಕಂಡಿದ್ದಾರೆ.
ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ‘ಸಂದೇಶ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಸಂದೇಶ್ ಎನ್ ಅವರು ‘ಘೋಸ್ಟ್’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಶ್ರೀನಿ ಅವರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶಿವರಾಜಕುಮಾರ್, ಅನುಪಮ್ ಖೇರ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಘೋಸ್ಟ್’ ಸಿನಿಮಾ ಅಕ್ಟೋಬರ್ನಲ್ಲಿ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಚಿತ್ರ ಒಳ್ಳೆಯ ಬಿಸ್ನೆಸ್ ಮಾಡುತ್ತಿದೆ.
‘ಆರ್ಆರ್ಆರ್’, ‘ಜವಾನ್’ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಅನುಭವ ‘ಪೆನ್ ಸ್ಟುಡಿಯೋ’ ಸಂಸ್ಥೆಗೆ ಇದೆ. ಈ ಸಂಸ್ಥೆ ಈಗ ‘ಘೋಸ್ಟ್’ ಚಿತ್ರದ ತೆಲುಗು ಹಾಗೂ ಹಿಂದಿಯ ವಿತರಣಾ ಹಕ್ಕನ್ನು ಪಡೆದುಕೊಂಡಿದೆ ಎಂದು ಸಂದೇಶ್ ತಿಳಿಸಿದ್ದಾರೆ. ಅಂದಹಾಗೆ, ಎಷ್ಟು ಕೋಟಿ ಬಿಸ್ನೆಸ್ ಆಗಿದೆ ಎನ್ನುವ ಲೆಕ್ಕಾಚಾರವನ್ನು ತಂಡದವರು ನೀಡಿಲ್ಲ.
ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತದೆ ಎಂದರೆ ಅದಕ್ಕೆ ದೊಡ್ಡ ಮಟ್ಟದ ಪ್ರಚಾರ ನೀಡಬೇಕಾಗುತ್ತದೆ. ‘ಘೋಸ್ಟ್’ ತಂಡ ಕೂಡ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಲು ನಿರ್ಧರಿಸಿದೆ. ಶಿವರಾಜಕುಮಾರ್ ಅವರು ಅಕ್ಟೋಬರ್ ಮೊದಲ ವಾರದಲ್ಲಿ ಮುಂಬೈ, ದೆಹಲಿ ಮೊದಲಾದ ಕಡೆ ತೆರಳಿ ಚಿತ್ರದ ಪ್ರಚಾರ ಮಾಡಲಿದ್ದಾರೆ.
ಇದನ್ನೂ ಓದಿ: ‘ಘೋಸ್ಟ್’ ಎಂಟ್ರಿಗೆ ದಿನಾಂಕ ನಿಗದಿ; ಶಿವಣ್ಣನ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಖುಷಿ ಸುದ್ದಿ
ಎಂಜಿ ಶ್ರೀನಿವಾಸ್ (ಶ್ರೀನಿ) ಘೋಸ್ಟ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಮೊದಲು ಕೆಲವು ಸದಭಿರುಚಿ ಚಿತ್ರಗಳನ್ನು ಅವರು ನೀಡಿದ್ದಾರೆ. ಶಿವರಾಜ್ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾನ ತೆರೆಮೇಲೆ ತರೋಕೆ ಅವರು ರೆಡಿ ಆಗಿದ್ದಾರೆ. ಅಕ್ಟೋಬರ್ 19ರಂದು ಸಿನಿಮಾ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ