ಮತ್ತೋರ್ವ ತೆಲುಗು ಸ್ಟಾರ್ ಹೀರೋ ಜೊತೆ ನಟಿಸೋಕೆ ರೆಡಿ ಆದ ರಶ್ಮಿಕಾ ಮಂದಣ್ಣ
ರವಿತೇಜ ಹಾಗೂ ನಿರ್ದೇಶಕ ಗೋಪಿಚಂದ್ ಮಲಿನೇನಿ ಅವರು ಒಟ್ಟಾಗಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಕೂಡ ಆಗಿದೆ. ಆದರೆ, ಈ ಚಿತ್ರದಲ್ಲಿ ಯಾರೆಲ್ಲ ನಟಿಸುತ್ತಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ. ಮೂಲಗಳ ಪ್ರಕಾರ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿಕೊಳ್ಳಲು ಚಿತ್ರತಂಡ ಆಸಕ್ತಿ ತೋರಿಸಿದೆ ಎಂದು ಹೇಳಲಾಗುತ್ತಿದೆ.
ರಶ್ಮಿಕಾ ಮಂದಣ್ಣಗೆ (Rashmika Mandanna) ಸೃಷ್ಟಿ ಆಗಿರುವ ಬೇಡಿಕೆ ತುಂಬಾನೇ ದೊಡ್ಡದು. ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಅವರಿಗೆ ಭರ್ಜರಿ ಬೇಡಿಕೆ ಇದೆ. ಈಗ ರಶ್ಮಿಕಾ ಮಂದಣ್ಣ ಅವರು ತೆಲುಗಿನ ಮತ್ತೋರ್ವ ಸ್ಟಾರ್ ಹೀರೋ ಜೊತೆ ನಟಿಸೋಕೆ ರೆಡಿ ಆಗಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಸಹಜವಾಗಿಯೇ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಹಾಗಾದರೆ ಯಾರು ಆ ಹೀರೋ? ರವಿ ತೇಜ.
ರವಿತೇಜ ಹಾಗೂ ನಿರ್ದೇಶಕ ಗೋಪಿಚಂದ್ ಮಲಿನೇನಿ ಅವರು ಒಟ್ಟಾಗಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಕೂಡ ಆಗಿದೆ. ಆದರೆ, ಈ ಚಿತ್ರದಲ್ಲಿ ಯಾರೆಲ್ಲ ನಟಿಸುತ್ತಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ. ಮೂಲಗಳ ಪ್ರಕಾರ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿಕೊಳ್ಳಲು ಚಿತ್ರತಂಡ ಆಸಕ್ತಿ ತೋರಿಸಿದೆ ಎಂದು ಹೇಳಲಾಗುತ್ತಿದೆ.
‘ಧಮಾಕ’ ಚಿತ್ರದಲ್ಲಿ ರವಿತೇಜ ಹಾಗೂ ಶ್ರೀಲೀಲಾ ಒಟ್ಟಾಗಿ ನಟಿಸಿದ್ದರು. ರವಿತೇಜ ಹಾಗೂ ಗೋಪಿಚಂದ್ ಚಿತ್ರದಲ್ಲೂ ಇದೇ ಜೋಡಿ ಮತ್ತೆ ಒಂದಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಈಗ ಶ್ರೀಲೀಲಾ ಬದಲು ರಶ್ಮಿಕಾಗೆ ನಿರ್ದೇಶಕರು ಮಣೆ ಹಾಕಿದ್ದಾರೆ. ನಟಿ ಕೇಳಿದಷ್ಟು ಸಂಭಾವನೆ ಕೊಡೋಕೆ ನಿರ್ಮಾಪಕರು ರೆಡಿ ಆಗಿದ್ದಾರೆ.
ಇನ್ನು, ವರಲಕ್ಷ್ಮಿ ಶರತ್ಕುಮಾರ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಒಂದಕ್ಕೆ ಬಣ್ಣ ಹಚ್ಚಲಿದ್ದಾರಂತೆ. ಆ ಬಗ್ಗೆಯೂ ಇನ್ನಷ್ಟೇ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ. ಸಿನಿಮಾ ತಂಡ ಈ ಬಗ್ಗೆ ಯಾವಾಗ ಅಧಿಕೃತ ಘೋಷಣೆ ಮಾಡಲಿದೆ ಎಂಬ ಬಗ್ಗೆ ಅಭಿಮಾನಿಗಳು ಕಾದಿದ್ದಾರೆ.
ಇದನ್ನೂ ಓದಿ: ‘ಹೋದ ಜೀವ ಬಂತು’; ಕಷ್ಟದಲ್ಲೂ ಖುಷಿಪಡುತ್ತಿದ್ದಾರೆ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಹೊಸ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಅವರ ನಟನೆಯ ‘ಪುಷ್ಪ 2’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಸಿನಿಮಾ ಮುಂದಿನ ವರ್ಷ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ಅವರ ನಟನೆಯ ‘ಅನಿಮಲ್’ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು, ಡಿಸೆಂಬರ್ 1ರಂದು ರಿಲೀಸ್ ಆಗಲಿದೆ. ‘ರೇನ್ಬೋ’ ಹೆಸರಿನ ಸಿನಿಮಾ ಕೂಡ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:06 pm, Thu, 21 September 23