
ಶಿವರಾಜ್ಕುಮಾರ್ ಸಿನಿಮಾ ರಂಗದಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರು ವೈಲೆಂಟ್ ಲುಕ್ನಲ್ಲಿ ಕಾಣಿಸಿಕೊಂಡರೆ ಸಿನಿಮಾ ಹಿಟ್ ಆಗುತ್ತದೆ ಎನ್ನುವ ನಂಬಿಕೆ ಅನೇಕರಲ್ಲಿ ಇದೆ. ಇದು ಸತ್ಯ ಕೂಡ. ಈಗ ಅವರ ನಟನೆಯ ‘ಉತ್ತರಕಾಂಡ’ ಸಿನಿಮಾದ ಲುಕ್ ರಿವೀಲ್ ಆಗಿದೆ. ಈ ಲುಕ್ ಸಖತ್ ರಗಡ್ ಆಗಿದೆ. ಅವರ ಬರ್ತ್ಡೇಗೆ ಸಿಕ್ಕಿರುವ ಬೆಸ್ಟ್ ಗಿಫ್ಟ್ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.
ಶಿವರಾಜ್ಕುಮಾರ್ ಅವರು ‘ಉತ್ತರಕಾಂಡ’ ಚಿತ್ರದಲ್ಲಿ ‘ಮಾಲಿಕ್’ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಅವರ ಮುಖದ ಒಂದು ಭಾಗಕ್ಕೆ ರಕ್ತ ಬಡಿದಿದೆ. ಶರ್ಟ್ಗಳ ಮೇಲೂ ರಕ್ತದ ಕಲೆಗಳು ಇವೆ. ಮೈಮೇಲೆ ಬುಲೆಟ್ಗಳ ಸರಮಾಲೆ ಇದೆ. ಕೈಯಲ್ಲಿ ಅವರು ಸಿಗಾರ್ ಹಿಡಿದುಕೊಂಡಿದ್ದಾರೆ. ಅವರ ಪಕ್ಕದಲ್ಲೇ ಬಾಂಗ್ಗಳ ಬಾಕ್ಸ್ ಇದೆ. ಅವರ ಲುಕ್ ಫ್ಯಾನ್ಸ್ಗೆ ಸಖತ್ ಇಷ್ಟ ಆಗಿದೆ.
ಶಿವರಾಜ್ಕುಮಾರ್ ಅವರಿಗೆ ಜುಲೈ 12ರಂದು ಜನ್ಮದಿನ. ಈ ವಿಶೇಷ ದಿನ ಸಮೀಪಿಸಿರುವುದರಿಂದ ಅವರ ಸಿನಿಮಾಗಳ ತಂಡದಿಂದ ಹೊಸ ಹೊಸ ಲುಕ್ಗಳು ರಿವೀಲ್ ಆಗುತ್ತಿವೆ. ‘ಉತ್ತರಕಾಂಡ’ ಲುಕ್ ಎಲ್ಲರಿಗೂ ಇಷ್ಟ ಆಗಿದೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.
‘ಉತ್ತರಕಾಂಡ’ ಆ್ಯಕ್ಷನ್ ಡ್ರಾಮಾ ಶೈಲಿಯಲ್ಲಿ ಮೂಡಿ ಬರುತ್ತಿದೆ. ರೋಹಿತ್ ಪದಕಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ, ಅಧ್ವೈತ ಗುರುಮೂರ್ತಿ ಛಾಯಾಗ್ರಹಣ ಚಿತ್ರಕ್ಕೆ ಇದೆ. ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿದ್ದು, ಅನಿಲ್ ಅನಿರುದ್ಧ್ ಮುಖ್ಯ ಸಂಕಲನಕಾರರಾಗಿರುತ್ತಾರೆ. ಕೆಆರ್ಜಿ ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಚಿತ್ರವನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ: ಎಲ್ಲೆಲ್ಲೂ ಶಿವಣ್ಣ; ‘ಉತ್ತರಕಾಂಡ’ ಸೆಟ್ನಲ್ಲಿ ಶಿವರಾಜ್ಕುಮಾರ್ಗೆ ಅದ್ದೂರಿ ಸ್ವಾಗತ
ಈ ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗ ಇದೆ. ಶಿವರಾಜ್ಕುಮಾರ್, ಡಾಲಿ ಧನಂಜಯ, ಭಾವನಾ ಮೆನನ್, ಐಶ್ವರ್ಯ ರಾಜೇಶ್, ದಿಗಂತ್ ಮುಂತಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.