ಎಲ್ಲೆಲ್ಲೂ ಶಿವಣ್ಣ; ‘ಉತ್ತರಕಾಂಡ’ ಸೆಟ್​ನಲ್ಲಿ ಶಿವರಾಜ್​ಕುಮಾರ್​ಗೆ ಅದ್ದೂರಿ ಸ್ವಾಗತ

ಶಿವರಾಜ್​ಕುಮಾರ್ ಅವರಿಗೆ ತಮಟೆ, ವಾದ್ಯಗಳ ಬಾರಿಸಿ ಎಂಟ್ರಿ ಕೊಡಿಸಲಾಗಿದೆ. ಎಲ್ಲರೂ ಶಿವಣ್ಣ ಅವರ ಮುಖವಾಡ ಧರಿಸಿದ್ದರು. ಶಿವರಾಜ್​ಕುಮಾರ್​ಗೆ ಹಾರ ಹಾಕಿ ಸ್ವಾಗತ ಕೋರಲಾಗಿದೆ. ‘ಕೆಆರ್​ಜಿ ಕನೆಕ್ಟ್ಸ್’ ಮೂಲಕ ಈ ವಿಡಿಯೋ ರಿಲೀಸ್ ಮಾಡಲಾಗಿದೆ. ಈ ವಿಡಿಯೋ ಭರ್ಜರಿ ವೀವ್ಸ್ ಪಡೆದಿದೆ.

ಎಲ್ಲೆಲ್ಲೂ ಶಿವಣ್ಣ; ‘ಉತ್ತರಕಾಂಡ’ ಸೆಟ್​ನಲ್ಲಿ ಶಿವರಾಜ್​ಕುಮಾರ್​ಗೆ ಅದ್ದೂರಿ ಸ್ವಾಗತ
ಶಿವಣ್ಣ
Follow us
ರಾಜೇಶ್ ದುಗ್ಗುಮನೆ
|

Updated on:May 24, 2024 | 12:15 PM

ನಟ ಶಿವರಾಜ್​ಕುಮಾರ್​ಗೆ (Shivarajkumar) ಇರೋ ಕ್ರೇಜ್ ತುಂಬಾನೇ ದೊಡ್ಡದು. ಇಡೀ ಕರ್ನಾಟಕದದಾದ್ಯಂತ ಅವರಿಗೆ ಅಭಿಮಾನಿಗಳು ಇದ್ದಾರೆ. ಅವರು ಹೋದಲ್ಲೆಲ್ಲ ಫ್ಯಾನ್ಸ್ ಕಿಕ್ಕಿರುದು ನೆರೆಯುತ್ತಾರೆ. ಅವರು ಸಿನಿಮಾ ಸೆಟ್​ಗೆ ಬಂದರೆ ಅದ್ದೂರಿ ಸ್ವಾಗತ ಸಿಗುತ್ತದೆ. ಈಗ ಶಿವರಾಜ್​ಕುಮಾರ್ ಅವರು ‘ಉತ್ತರಕಾಂಡ’ ಸಿನಿಮಾ ಸೆಟ್​ಗೆ ಎಂಟ್ರಿ ಕೊಟ್ಟಿದ್ದಾರೆ. ಅವರನ್ನು ತಂಡದವರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.

ನಿರ್ಮಾಪಕರಾದ ಕಾರ್ತಿಕ್​ ಗೌಡ, ಯೋಗಿ ಜಿ. ರಾಜ್​ ಹಾಗೂ ನಟ ಡಾಲಿ ಧನಂಜಯ್ ಅವರು ‘ರತ್ನನ್ ಪ್ರಪಂಚ’ ಹಾಗೂ ‘ಗುರುದೇವ ಹೊಯ್ಸಳ’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಇವರ ಕಾಂಬಿನೇಷನ್​ನಲ್ಲಿ ‘ಉತ್ತರಕಾಂಡ’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದ ಪಾತ್ರವರ್ಗ ಹಿರಿದಾಗುತ್ತಿದೆ. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್, ಧನಂಜಯ್ ಜೊತೆಗೆ ಐಶ್ವರ್ಯಾ ರಾಜೇಶ್, ರಂಗಾಯಣ ರಘು, ಯೋಗರಾಜ್ ಭಟ್ ಮೊದಲಾದವರು ನಟಿಸುತ್ತಿದ್ದಾರೆ. ಈ ಚಿತ್ರದ ಸೆಟ್​ಗೆ ಶಿವಣ್ಣ ಎಂಟ್ರಿ ಕೊಟ್ಟಿದ್ದು, ಅದ್ದೂರಿ ಸ್ವಾಗತ ಸಿಕ್ಕಿದೆ.

ಶಿವರಾಜ್​ಕುಮಾರ್ ಅವರಿಗೆ ತಮಟೆ, ವಾದ್ಯಗಳ ಬಾರಿಸಿ ಎಂಟ್ರಿ ಕೊಡಿಸಲಾಗಿದೆ. ಎಲ್ಲರೂ ಶಿವಣ್ಣ ಅವರ ಮುಖವಾಡ ಧರಿಸಿದ್ದರು. ಶಿವರಾಜ್​ಕುಮಾರ್​ಗೆ ಹಾರ ಹಾಕಿ ಸ್ವಾಗತ ಕೋರಲಾಗಿದೆ. ‘ಕೆಆರ್​ಜಿ ಕನೆಕ್ಟ್ಸ್’ ಮೂಲಕ ಈ ವಿಡಿಯೋ ರಿಲೀಸ್ ಮಾಡಲಾಗಿದೆ. ಈ ವಿಡಿಯೋ ಭರ್ಜರಿ ವೀವ್ಸ್ ಪಡೆದಿದೆ. ರೋಹಿತ್ ಪದಕಿ ಅವರು ‘ಉತ್ತರಕಾಂಡ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಸಂಪೂರ್ಣ ಕಥೆ ಉತ್ತರ ಕರ್ನಾಟಕದ ಭಾಗದಲ್ಲಿ ಶೂಟ್ ಆಗಲಿದೆ. ಚರಣ್ ರಾಜ್ ಅವರ ಸಂಗೀತ ಸಂಯೋಜನೆ, ಸ್ವಾಮಿ ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಈ ಚಿತ್ರಕ್ಕೆ ಇರಲಿದೆ. ‘ಉತ್ತರಕಾಂಡ’ ಚಿತ್ರದ ಶೀರ್ಷಿಕೆ ವಿನ್ಯಾಸ ಮತ್ತು ಪೋಸ್ಟರ್ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ‘ಒಳ್ಳೆಯ ಅಂತರದಲ್ಲಿ ಗೀತಾ ಶಿವರಾಜ್​ಕುಮಾರ್​ ಗೆಲ್ಲುತ್ತಾರೆ’: ಭವಿಷ್ಯ ನುಡಿದ ಎಸ್​. ನಾರಾಯಣ್​

ಶಿವರಾಜ್​ಕುಮಾರ್ ಪತ್ನಿ ಗೀತಾ ಶಿವರಾಜ್​ಕುಮಾರ್ ಅವರು ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಹೀಗಾಗಿ ಶಿವಣ್ಣ ಅವರು ಇಷ್ಟು ದಿನ ಅಲ್ಲಿ ಪ್ರಚಾರ ಮಾಡುತ್ತಿದ್ದರು. ಈಗ ಅವರು ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:13 pm, Fri, 24 May 24

ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು