‘ನಿಮ್ಮತ್ರ ಲ್ಯಾಂಬೋರ್ಗಿನಿ ಕಾರಿರಲಿ, ರಸ್ತೆಗೆ ಇಳಿದಾಗ..’ ಕಿಚ್ಚ ಸುದೀಪ್ ಹೀಗೆ ಹೇಳಿದ್ದೇಕೆ?

ಸುದೀಪ್ ಅವರ ಅಭಿಮಾನಿ ಬಳಗ ಹಿರಿದಾಗುತ್ತಿರುವುದಕ್ಕೆ ಅವರಿಗೆ ಖುಷಿ ಇದೆ. ಅವರು ಆಗಾಗ ಅಭಿಮಾನಿಗಳಿಗಾಗಿ ಕಿವಿಮಾತು ಹೇಳುತ್ತಾ ಇರುತ್ತಾರೆ. ಈ ಮೊದಲು ಅವರು ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನ ಒಂದರಲ್ಲಿ ನಾವು ಎಷ್ಟೇ ದೊಡ್ಡವರಾದರೂ ಜೀವನ ಅನ್ನೋದು ಬಂದಾಗ ಎಲ್ಲರೂ ಜೊತೆ ಸಾಗಬೇಕು ಎಂದಿದ್ದರು.

‘ನಿಮ್ಮತ್ರ ಲ್ಯಾಂಬೋರ್ಗಿನಿ ಕಾರಿರಲಿ, ರಸ್ತೆಗೆ ಇಳಿದಾಗ..’ ಕಿಚ್ಚ ಸುದೀಪ್ ಹೀಗೆ ಹೇಳಿದ್ದೇಕೆ?
ಸುದೀಪ್
Follow us
| Updated By: ರಾಜೇಶ್ ದುಗ್ಗುಮನೆ

Updated on:May 24, 2024 | 9:44 AM

ಕಿಚ್ಚ ಸುದೀಪ್ (Kichcha Sudeep) ಅವರು ಇತ್ತೀಚೆಗಷ್ಟೇ ‘ಮ್ಯಾಕ್ಸ್’ ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಈ ಚಿತ್ರದ ರಿಲೀಸ್​ಗಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಸುದೀಪ್ ಅವರು ಸಂದರ್ಶನಕ್ಕೆ ಕುಳಿತರೆ ಅನೇಕ ಕಿವಿಮಾತುಗಳನ್ನು ಹೇಳುತ್ತಾ ಇರುತ್ತಾರೆ. ಈ ಮೊದಲು ಅವರು ಹಲವು ಸಂದರ್ಶನಗಳಲ್ಲಿ ಕಿವಿಮಾತು ಹೇಳಿದ್ದರು. ಈಗ ಅವರು ಹೇಳಿದ ಜೀವನದ ಪಾಠದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸುದೀಪ್ ಅಭಿಮಾನಿಗಳು ಇದನ್ನು ಶೇರ್ ಮಾಡಿಕೊಳ್ಳುತ್ತಾ ಇದ್ದಾರೆ.

ಕಿಚ್ಚ ಸುದೀಪ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಕೋಟ್ಯಂತರ ಮಂದಿ ಆರಾಧಿಸುತ್ತಾರೆ. ಕರ್ನಾಟಕ ಮಾತ್ರವಲ್ಲದೆ ಪರಭಾಷೆಯಲ್ಲೂ ಅವರಿಗೆ ಫ್ಯಾನ್ಸ್ ಇದ್ದಾರೆ. ಸುದೀಪ್ ಅವರ ಅಭಿಮಾನಿ ಬಳಗ ಹಿರಿದಾಗುತ್ತಿರುವುದಕ್ಕೆ ಅವರಿಗೆ ಖುಷಿ ಇದೆ. ಅವರು ಆಗಾಗ ಅಭಿಮಾನಿಗಳಿಗಾಗಿ ಕಿವಿಮಾತು ಹೇಳುತ್ತಾ ಇರುತ್ತಾರೆ. ಈ ಮೊದಲು ಅವರು ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನ ಒಂದರಲ್ಲಿ ನಾವು ಎಷ್ಟೇ ದೊಡ್ಡವರಾದರೂ ಜೀವನ ಅನ್ನೋದು ಬಂದಾಗ ಎಲ್ಲರೂ ಜೊತೆ ಸಾಗಬೇಕು ಎಂದಿದ್ದರು.

‘ನಿಮ್ಮತ್ರ ಫರಾರಿ, ಲ್ಯಾಂಬೋರ್ಗಿನಿ ಇರಲಿ, ರೋಲ್ಸ್ ರಾಯ್ಸ್ ಇರಲಿ ಪಾಯಿಂಟ್ ಅದಲ್ಲ. ಲೈಫ್ ಅನ್ನೋ ರೋಡ್​ಗೆ ಇಳಿದರೆ ಎಲ್ಲರೂ ಹೋಗೋ ಸ್ಪೀಡ್​ನಲ್ಲಿ ನೀವು ಹೋಗಬೇಕು. ಫೆರಾರಿ ಬಂತು ಬಿಡ್ರಪ್ಪ ಎಂದು ಯಾರೂ ಹೇಳಲ್ಲ. ಸಿಗ್ನಲ್ ಬಂದಾಗ ನಿಲ್ಲಲೇಬೇಕು. ಎಮರ್ಜೆನ್ಸಿಯಲ್ಲಿ ಆ್ಯಂಬುಲೆನ್ಸ್ ಬಂದಾಗ ನೀವು ಅವರಿಗೆ ದಾರಿ ಬಿಟ್ಟುಕೊಡಬೇಕು’ ಎಂದು ಸುದೀಪ್ ಅವರು ಹೇಳಿದ್ದರು.

ಕಿಚ್ಚ ಸುದೀಪ್ ಅವರು ಚಿತ್ರರಂಗದಲ್ಲೇ 27 ವರ್ಷ ಕಳೆದಿದ್ದಾರೆ. ಅವರ ತಂದೆಗೆ ಚಿತ್ರರಂಗದವರ ಜೊತೆ ನಂಟು ಇದ್ದರೂ ಅದನ್ನು ಸುದೀಪ್ ಬಳಸಿಕೊಳ್ಳಲಿಲ್ಲ. ಅವರು ತಾವಾಗೇ ಮೇಲೆ ಬರೋಕೆ ಪ್ರಯತ್ನಿಸಿದರು. ಈ ಕಾರಣಕ್ಕೆ ಜೀವನದಲ್ಲಿ ಹಲವು ಪಾಠಗಳನ್ನು ಅವರು ಕಲಿತಿದ್ದಾರೆ. ಹೀಗಾಗಿ ಸುದೀಪ್ ಅವರು ಆಗಾಗ ಜೀವನದ ಪಾಠಗಳನ್ನು ಹೇಳಿಕೊಡುತ್ತಾ ಇರುತ್ತಾರೆ. ಇದನ್ನು ಅನೇಕರು ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ತೆಲುಗು ನಟನಿಗೆ ಶುಭ ಕೋರಿದ ದರ್ಶನ್, ಕಿಚ್ಚ ಸುದೀಪ್, ಯಾರು ಈ ‘ರಾಕಿಂಗ್ ಸ್ಟಾರ್’

ಕಿಚ್ಚ ಸುದೀಪ್ ಜೊತೆ ‘ಮ್ಯಾಕ್ಸ್’ ಸಿನಿಮಾದಲ್ಲಿ ವರಲಕ್ಷ್ಮಿ ಶರತ್​ಕುಮಾರ್, ಸಂಯುಕ್ತಾ ಹೊರನಾಡ್, ಸುನಿಲ್, ಇಳವರಸು ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಎಸ್​. ಧನು ನಿರ್ಮಾಣ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ವಿಜಯ್ ಕಾರ್ತಿಕೇಯನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:36 am, Fri, 24 May 24

ತಾಜಾ ಸುದ್ದಿ
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ರೇವಣ್ಣ
ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ರೇವಣ್ಣ
ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ
ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ
ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ರೇವಣ್ಣ
ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ರೇವಣ್ಣ