‘ಕೆಜಿಎಫ್ 3’ ಯಾವಾಗ ಎಂದು ಯಶ್​ಗೆ ಪ್ರಶ್ನೆ ಮಾಡಿದ ಶುಭ್​ಮನ್​ ಗಿಲ್; ಉತ್ತರಿಸಿದ ರಾಕಿಂಗ್ ಸ್ಟಾರ್

|

Updated on: Oct 23, 2024 | 7:31 AM

‘ಹೊಂಬಾಳೆ ಫಿಲ್ಮ್ಸ್’ನ ವಿಜಯ್ ಕಿರಗಂದೂರು ಅವರು 3-4 ತಿಂಗಳಲ್ಲಿ ‘ಕೆಜಿಎಫ್ 3’ ಬಗ್ಗೆ ಅಪ್​ಡೇಟ್ ಕೋಡೋದಾಗಿ ಹೇಳಿದ್ದರು. ಕ್ರಿಕೆಟರ್ ಶುಭ್​ಮನ್​ ಗಿಲ್​ಗೆ ‘ಕೆಜಿಎಫ್ 3’ ಸಿನಿಮಾ ಬಗ್ಗೆ ಕುತೂಹಲ ಇದೆ. ಇದಕ್ಕೆ ಯಶ್ ಉತ್ತರ ಕೊಟ್ಟಿದ್ದಾರೆ.

‘ಕೆಜಿಎಫ್ 3’ ಯಾವಾಗ ಎಂದು ಯಶ್​ಗೆ ಪ್ರಶ್ನೆ ಮಾಡಿದ ಶುಭ್​ಮನ್​ ಗಿಲ್; ಉತ್ತರಿಸಿದ ರಾಕಿಂಗ್ ಸ್ಟಾರ್
ಶುಭ್​ಮನ್-ಯಶ್
Follow us on

‘ಕೆಜಿಎಫ್ 3 ಸಿನಿಮಾ ಸೆಟ್ಟೋರುದು ಯಾವಾಗ’ ಈ ಪ್ರಶ್ನೆ ಆಗಾಗ ಎಲ್ಲರಲ್ಲೂ ಮೂಡುತ್ತಲೇ ಇರುತ್ತದೆ. ಈಗಾಗಲೇ ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿ ಎರಡು ವರ್ಷಗಳು ಪೂರ್ಣಗೊಂಡಿವೆ. ಇತ್ತೀಚೆಗೆ ಮಾತನಾಡಿದ್ದ ‘ಹೊಂಬಾಳೆ ಫಿಲ್ಮ್ಸ್’ನ ವಿಜಯ್ ಕಿರಗಂದೂರು ಅವರು 3-4 ತಿಂಗಳಲ್ಲಿ ಈ ಬಗ್ಗೆ ಅಪ್​ಡೇಟ್ ಕೋಡೋದಾಗಿ ಹೇಳಿದ್ದರು. ಈಗ ಯಶ್ ಈ ಬಗ್ಗೆ ಮಾತನಾಡಿದ್ದಾರೆ.

‘ದಿ ಹಾಲಿವುಡ್​ ರಿಪೋರ್ಟರ್​ ಇಂಡಿಯಾ’ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಯಶ್ ಮಾತನಾಡಿದ್ದಾರೆ. ಸಂದರ್ಶಕಿ ಅವರು ಕ್ರಿಕೆಟರ್ ಶುಭ್​​ಮನ್ ಗಿಲ್​ ಕೇಳಿದ ಪ್ರಶ್ನೆಯನ್ನು ಯಶ್​ಗೆ ಕೇಳಿದ್ದಾರೆ. ‘ಶುಭ್​ಮನ್​ ಗಿಲ್ ಅವರು ಕೆಜಿಎಫ್ 3 ಯಾವಾಗ ಆಗುತ್ತದೆ ಎಂದು ಕೇಳಿದ್ದಾರೆ’ ಎಂದರು ಸಂದರ್ಶಕಿ. ಇದಕ್ಕೆ ಯಶ್ ಉತ್ತರ ಕೊಟ್ಟಿದ್ದಾರೆ.

‘ಕೆಜಿಎಫ್ 3 ಆಗೇ ಆಗುತ್ತದೆ. ಈ ಎರಡು (ಟಾಕ್ಸಿಕ್ ಹಾಗೂ ರಾಮಾಯಣ) ಸಿನಿಮಾಗಳ ಮೇಲೆ ಗಮನ ಹರಿಸುತ್ತಿದ್ದೇನೆ. ನಮ್ಮ ಬಳಿ ಒಂದು ಐಡಿಯಾ ಇದೆ. ನಾವು ಆ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಸರಿಯಾದ ಸಮಯದಲ್ಲಿ ಬರುತ್ತೇವೆ. ಪ್ರೇಕ್ಷಕರು ಸಾಕಷ್ಟು ನೀಡಿದ್ದಾರೆ. ಈ ಸಿನಿಮಾ ಕಲ್ಟ್​. ಹೀಗಾಗಿ ನಮ್ಮ ಬಗ್ಗೆ ಅವರು ಹೆಮ್ಮೆ ಪಡಬೇಕು. ಆ ರೀತಿಯಲ್ಲಿ ಸಿನಿಮಾ ಮಾಡುತ್ತೇವೆ. ಶುಭಮನ್​ ಗಿಲ್ ಸೇರಿ ಅನೇಕ ಕ್ರಿಕೆಟಿಗರು, ಸೆಲೆಬ್ರಿಟಿಗಳು ಈ ಬಗ್ಗೆ ಕೇಳಿದ್ದಾರೆ. ಎಲ್ಲರೂ ರಾಕಿಭಾಯ್ ಬರಬೇಕು ಎಂದು ಕೇಳುತ್ತಿದ್ದಾರೆ’ ಎಂದಿದ್ದಾರೆ ಯಶ್.

ಇದನ್ನೂ ಓದಿ: KGF 3: ‘ಕೆಜಿಎಫ್ 3’ ನಲ್ಲಿ ರಾಕಿಭಾಯ್ ಜೊತೆಗೆ ಮತ್ತೊಬ್ಬ ಪವರ್​ಫುಲ್ ಸ್ಟಾರ್

ಈ ಚಿತ್ರದ ಕಥೆಯ ಬಗ್ಗೆ, ಚಿತ್ರದ ಬಗ್ಗೆ ಯಶ್ ಹಾಗೂ ಪ್ರಶಾಂತ್ ನೀಲ್ ಚರ್ಚೆಗಳನ್ನು ನಡೆಸುತ್ತಾ ಇದ್ದಾರಂತೆ. ಇವರು ಕಥೆಯನ್ನು ಹೇಗೆ ಮುಂದುವರಿಸಿಕೊಂಡು ಹೋಗುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ಬಗ್ಗೆ ಶೀಘ್ರವೇ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:30 am, Wed, 23 October 24