ಸೈಮಾ 2024 (ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್) ನಿನ್ನೆ ಸಂಜೆ ಅದ್ಧೂರಿಯಾಗಿ ದುಬೈನಲ್ಲಿ ನಡೆದಿದೆ. ಕನ್ನಡದ ಹಲವು ನಟ-ನಟಿಯರು ದುಬೈಗೆ ತೆರಳಿ ಸೈಮಾನಲ್ಲಿ ಭಾಗಿಯಾಗಿದ್ದಾರೆ. ಕನ್ನಡದ ಹಲವು ಸಿನಿಮಾಗಳು ಸೈಮಾ 2024ಕ್ಕೆ ನಾಮಿನೇಟ್ ಆಗಿದ್ದವು, ಕೆಲವು ಸಿನಿಮಾಗಳು ಪ್ರಶಸ್ತಿ ಸಹ ಗೆದ್ದಿವೆ. ವಿಶೇಷವಾಗಿ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಎ ಸಿನಿಮಾ ಅಂತೂ ಹಲವು ವಿಭಾಗಗಳಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಸೈಮಾ 2024 ಪ್ರಶಸ್ತಿಗೆ ಭಾಜನವಾದ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.
ಅತ್ಯುತ್ತಮ ನಟ- ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ನಟಿ- ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ನಟಿ (ಕ್ರಿಟಿಕ್)- ಚೈತ್ರಾ ಆಚಾರ್ (ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ನಿರ್ದೇಶಕ- ಹೇಮಂತ್ ರಾವ್ (ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ವಿಲನ್- ರಮೇಶ್ ಇಂದಿರಾ (ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ಗಾಯಕ- ಕಪಿಲ್ (ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ಪೋಷಕ ನಟ- ನವೀನ್ ಶಂಕರ್ (ಹೊಂದಿಸಿ ಬರೆಯಿರಿ)
ಅತ್ಯುತ್ತಮ ಪೋಷಕ ನಟಿ- ಸಂಯುಕ್ತಾ ಹೊರನಾಡು (ಟೋಬಿ)
ಅತ್ಯುತ್ತಮ ಹೊಸ ನಿರ್ದೇಶಕ- ನಿತಿನ್ ಕೃಷ್ಣಮೂರ್ತಿ (ಹಾಸ್ಟೆಲ್ ಹುಡುಗರು)
ಅತ್ಯುತ್ತಮ ಹೊಸ ನಟ- ಶಿಶಿರ್ ಬೈಕಾಡಿ (ಡೇರ್ಡೆವಿಲ್ ಮುಸ್ತಫಾ)
ಅತ್ಯುತ್ತಮ ಭರವಸೆಯ ನಟಿ- ವೃಷಾ ಪಾಟೀಲ್ (ಲವ್)
ಅತ್ಯುತ್ತಮ ಹೊಸ ನಟಿ- ಆರಾಧನಾ (ಕಾಟೇರ)
ಅತ್ಯುತ್ತಮ ಸಂಗೀತ ನಿರ್ದೇಶಕ- ವಿ ಹರಿಕೃಷ್ಣ (ಕಾಟೇರ)
ಅತ್ಯುತ್ತಮ ಕನ್ನಡ ಸಿನಿಮಾ- ಕಾಟೇರ
ಅತ್ಯುತ್ತಮ ಗಾಯಕಿ: ಮಂಗ್ಲಿ (ಕಾಟೇರ)
ಅತ್ಯುತ್ತಮ ಸಾಹಿತ್ಯ- ಡಾಲಿ ಧನಂಜಯ್ (ಟಗರುಪಲ್ಯ)
ಅತ್ಯುತ್ತಮ ನಟ (ಕ್ರಿಟಿಕ್)- ಡಾಲಿ ಧನಂಜಯ್ (ಗುರುದೇವ ಹೊಯ್ಸಳ)
ಅತ್ಯುತ್ತಮ ಸಿನಿಮಾಟೊಗ್ರಫರ್- ಶ್ವೇತ ಪ್ರಿಯ (ಕೈವ)
ಅತ್ಯುತ್ತಮ ಹಾಸ್ಯನಟ- ಅನಿರುದ್ಧ್ ಆಚಾರ್ (ಆಚಾರ್ ಆಂಡ್ ಕೋ)
ಸಿನಿಮಾ ರಂಗಕ್ಕೆ ಸೇವೆ- ಶಿವರಾಜ್ ಕುಮಾರ್
ವರ್ಷದ ಅತ್ಯುತ್ತಮ ನಿರ್ಮಾಪಕ: ಪಿಬಿ ಸ್ಟುಡಿಯೋಸ್, ಅನ್ವಿತ್ ಸಿನಿಮಾಸ್
ಅತ್ಯುತ್ತಮ ಹೊಸ ನಿರ್ಮಾಣ ಸಂಸ್ಥೆ: ಅಭುವನಸ ಫಿಲಮ್ಸ್
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ