ಬಾಲಯ್ಯನ ಜೊತೆ ನಟಿಸ್ತಿಲ್ವಂತೆ ಸೋನಾಕ್ಷಿ, ಹೊಸ ಸಿನಿಮಾ ಬಗ್ಗೆ ಶೀಘ್ರವೇ ಕೊಡ್ತಾರಂತೆ ಸುದ್ದಿ

ಬಾಲಿವುಡ್ ಬೆಡಗಿ ಸೋನಾಕ್ಷಿ ಟಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡ್ತಾರೆ. ಬಾಲಯ್ಯನ ಜೊತೆ ರೋಮ್ಯಾನ್ಸ್ ಮಾಡಿ ಅಭಿಮಾನಿಗಳನ್ನ ಸಿಹಿ ಸುದ್ದಿ ನೀಡ್ತಾರೆ ಅನ್ನೋ ಸುದ್ದಿ ಹರಿದಾಡ್ತಿತ್ತು. ಆದ್ರೀಗ ಬಾಲಿವುಡ್ ಬೆಡಗಿ ಬಾಲಯ್ಯನ ಜೊತೆ ಸೊಂಟ ಬಳುಕಿಸೋ ಸುದ್ದಿಗೆ ಬ್ರೇಕ್ ಬಿದ್ದಿದೆ. ಮಾಸ್ ಸಿನಿಮಾಗಳ ಮೂಲಕ ಕಮಾಲ್ ಮಾಡಿ ಬೆಳ್ಳಿಪರದೆ ಮೇಲೆ ಅಬ್ಬರಿಸೋ ಟಾಲಿವುಡ್ ನಟ ಬಾಲಯ್ಯ ಸದ್ಯ ರೂಲರ್ ಆಗಿ ರಂಜಿಸೋಕೆ ರೆಡಿಯಾಗಿದ್ದಾರೆ. ಅಂದಹಾಗೆ ರೂಲರ್ ಆಗಿರೋ ಬಾಲಯ್ಯ ಮುಂದಿನ ಸಿನಿಮಾ ಇತ್ತಿಚೆಗಷ್ಟೇ ಅದ್ಧೂರಿಯಾಗಿ ಸೆಟ್ಟೇರಿದೆ. ಬಾಲಯ್ಯನ 106ನೇ […]

ಬಾಲಯ್ಯನ ಜೊತೆ ನಟಿಸ್ತಿಲ್ವಂತೆ ಸೋನಾಕ್ಷಿ, ಹೊಸ ಸಿನಿಮಾ ಬಗ್ಗೆ ಶೀಘ್ರವೇ ಕೊಡ್ತಾರಂತೆ ಸುದ್ದಿ
Follow us
ಸಾಧು ಶ್ರೀನಾಥ್​
|

Updated on: Dec 17, 2019 | 11:50 AM

ಬಾಲಿವುಡ್ ಬೆಡಗಿ ಸೋನಾಕ್ಷಿ ಟಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡ್ತಾರೆ. ಬಾಲಯ್ಯನ ಜೊತೆ ರೋಮ್ಯಾನ್ಸ್ ಮಾಡಿ ಅಭಿಮಾನಿಗಳನ್ನ ಸಿಹಿ ಸುದ್ದಿ ನೀಡ್ತಾರೆ ಅನ್ನೋ ಸುದ್ದಿ ಹರಿದಾಡ್ತಿತ್ತು. ಆದ್ರೀಗ ಬಾಲಿವುಡ್ ಬೆಡಗಿ ಬಾಲಯ್ಯನ ಜೊತೆ ಸೊಂಟ ಬಳುಕಿಸೋ ಸುದ್ದಿಗೆ ಬ್ರೇಕ್ ಬಿದ್ದಿದೆ.

ಮಾಸ್ ಸಿನಿಮಾಗಳ ಮೂಲಕ ಕಮಾಲ್ ಮಾಡಿ ಬೆಳ್ಳಿಪರದೆ ಮೇಲೆ ಅಬ್ಬರಿಸೋ ಟಾಲಿವುಡ್ ನಟ ಬಾಲಯ್ಯ ಸದ್ಯ ರೂಲರ್ ಆಗಿ ರಂಜಿಸೋಕೆ ರೆಡಿಯಾಗಿದ್ದಾರೆ. ಅಂದಹಾಗೆ ರೂಲರ್ ಆಗಿರೋ ಬಾಲಯ್ಯ ಮುಂದಿನ ಸಿನಿಮಾ ಇತ್ತಿಚೆಗಷ್ಟೇ ಅದ್ಧೂರಿಯಾಗಿ ಸೆಟ್ಟೇರಿದೆ. ಬಾಲಯ್ಯನ 106ನೇ ಸಿನಿಮಾಗೆ ಭರ್ಜರಿ ಸಿದ್ಧತೆ ನಡೀತಿದೆ.

ಅಂದಹಾಗೆ ಸದ್ಯ ಬಾಲಯ್ಯನ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಸೋನಾಕ್ಷಿ ಸೊಂಟ ಬಳುಕಿಸ್ತಾರೆ ಅನ್ನೋ ಸುದ್ದಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡ್ತಿದೆ. ಇನ್ನು, ನಿರ್ದೇಶಕ ಬೋಯಪಾಟಿ ಸೀನು ಹಾಗೂ ಚಿತ್ರತಂಡ ಸೋನಾಕ್ಷಿಯನ್ನ ಕರೆ ತರೋ ಪ್ಲಾನ್ ಮಾಡಿದೆಯಂತೆ. ಈಗಾಗ್ಲೇ ಒಂದು ಹಂತದ ಮಾತುಕತೆ ಕೂಡ ಮಾಡಲಾಗಿದೆ ಅನ್ನೋ ಸುದ್ದಿ ಕೇಳಿ ಬಂದಿತ್ತು.

ಆದ್ರೆ, ಸದ್ಯ ಹೀಗೆ ಹರಡಿದ್ದ ಸುದ್ದಿ ಸೋನಾಕ್ಷಿಗೂ ತಲುಪಿ ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಸದ್ಯಕ್ಕಂತೂ ಸೋನಾಕ್ಷಿ ಬಾಲಯ್ಯನ ಜೊತೆ ರೋಮ್ಯಾನ್ಸ್ ಮಾಡೋ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಸದ್ಯ ಹರಿದಾಡ್ತಿರೋ ಸುದ್ದಿ ಸುಳ್ಳು, ನಾನು ಟಾಲಿವುಡ್ ಸಿನಿಮಾದಲ್ಲಿ ಅಭಿನಯಿಸ್ತಿಲ್ಲ. ಸದ್ಯದಲ್ಲೇ ನನ್ನ ಮುಂದಿನ ಚಿತ್ರದ ಬಗ್ಗೆ ಹೇಳ್ತಿನಿ ಅಂತ ಟ್ವಿಟ್ಟರ್​​ನಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

ಹಾಗಾದ್ರೆ ಈ ಸದ್ಯಕ್ಕಂತೂ ಸೋನಾಕ್ಷಿ ಸ್ಪಷ್ಟನೆ ಕೊಟ್ಟು ಸುಮ್ಮನಾಗಿದ್ದಾರೆ. ಆದ್ರೆ, ಬಾಲಯ್ಯನ ಜತೆ ರೋಮ್ಯಾನ್ಸ್ ಮಾಡೋ ಬೆಡಗಿ ಯಾರು ಅನ್ನೋ ಕುತೂಹಲ ಮತ್ತಷ್ಟು ಹೆಚ್ಚಾಗ್ತಿದೆ. ಇದೆಲ್ಲದರ ನಡುವೆ ಸಂಜಯ್ ದತ್ ಕೂಡ ಬಾಲಯ್ಯನ ಎದುರು ವಿಲನ್ ಆಗಿ ಅಬ್ಬರಿಸ್ತಾರೆ ಅನ್ನೋ ಸುದ್ದಿ ಕೂಡ ಸದ್ದು ಮಾಡ್ತಿದೆ. ಹಾಗಾದ್ರೆ ಅದೇನ್ ಕಥೆ ನಿಜವಾಗಿಯೂ ಸಂಜಯ್ ದತ್ ಬಾಲಯ್ಯನ ವಿರುದ್ಧ ಸೆಣಸಾಟಕ್ಕೆ ಇಳೀತಾರಾ ಅಥವಾ ಈ ಸುದ್ದಿ ಕೂಡ ಸುಳ್ಳಾಗುತ್ತಾ ಅನ್ನೋದನ್ನ ಕಾದು ನೊಡ್ಬೇಕಿದೆ. https://twitter.com/sonakshisinha/status/1206458691517464576?s=20

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್