
ಪುಟ್ಟಣ್ಣ ಕಣಗಾಲ್ (Puttanna Kanagal) ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು. ಅವರು ಹಲವು ಯಶಸ್ವಿ ಚಿತ್ರಗಳನ್ನು ನೀಡಿದ್ದರು. ‘ನಾಗರಹಾವು’ ಸಿನಿಮಾ ಶ್ರೇಷ್ಠ ಚಿತ್ರಗಳಲ್ಲಿ ಒಂದು ಎನ್ನಬಹುದು. ಅದೇ ರೀತಿ ‘ಮಾನಸ ಸರೋವರ’ ಚಿತ್ರ ಕೂಡ ಒಂದು. ಈ ಸಿನಿಮಾ ಆಗಿನ ಕಾಲಕ್ಕೆ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಶ್ರೀನಾಥ್ ಅವರು ವೈದ್ಯನ ಪಾತ್ರ ಮಾಡಿದ್ದರು. ‘ಸರಿಗಮಪ’ ವೇದಿಕೆ ಮೇಲೆ ಬಂದ ಅವರು ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ವೇದಿಕೆ ಮೇಲೆ ಎಸ್ಪಿಬಿ ಅವರನ್ನು ನೆನಪಿಸಿಕೊಂಡಿದ್ದಾರೆ.
‘ಮಾನಸ ಸರೋವರ’ ಸಿನಿಮಾ ಮಾತ್ರ ಯಶಸ್ಸು ಕಂಡಿರಲಿಲ್ಲ. ಆ ಚಿತ್ರದ ಹಾಡುಗಳು ಕೂಡ ಹಿಟ್ ಆದವು. ಇದೊಂದು ಟ್ರಯಾಂಗಲ್ ಲವ್ ಸ್ಟೋರಿಯ ಕಥೆ ಎನ್ನಬಹುದು. ಈ ಚಿತ್ರದಲ್ಲಿ ಬರೋ ‘ನೀನೇ ಸಾಕಿದಾ ಗಿಣಿ..’ ಹಾಡು ಸೂಪರ್ ಹಿಟ್ ಆಗಿತ್ತು. ಇದನ್ನು ಹಾಡಿದ್ದು ಶ್ರೇಷ್ಠ ಗಾಯಕ ಎಸ್ಪಿ ಬಾಲ ಸುಬ್ರಹ್ಮಣ್ಯಂ ಆಗಿತ್ತು. ಅಂದಿನ ಘಟನೆಯನ್ನು ಶ್ರೀನಾಥ್ ನೆನಪಿಸಿಕೊಂಡಿದ್ದಾರೆ.
ಜೀ ಕನ್ನಡ ನಡೆಸಿಕೊಡೋ ಸರಿಗಮಪ ವೇದಿಕೆ ಮೇಲೆ ಶ್ರೀನಾಥ್ ಅವರು ಆಗಮಿಸಿದರು. ಅವರು ಹಾಡಿನ ಬಗ್ಗೆ ಮಾತನಾಡಿದ್ದಾರೆ. ‘ಬಾಲು ನಮ್ಮ ಆತ್ಮದ ಜೊತೆ ಸೇರಿಕೊಂಡ್ನಾ ಅಥವಾ ಅವನ ಆತ್ಮದ ಜೊತೆ ನಮ್ಮನ್ನು ಸೇರಿಸಿಕೊಂಡನಾ ಗೊತ್ತಾಗಲಿಲ್ಲ. ಮಾನಸ ಸರೋವರ ನೀನೆ ಸಾಕಿದ ಗಿಣಿ ಹಾಡನ್ನು ಹಾಡಿದರು. ನಾಲ್ಕು ಲೈನ್ ಹಾಡುವ ಮೂಲಕ ಪುಟ್ಟಣ್ಣ ಕಣ್ಣಲ್ಲಿ ನೀರು ಬಂತು. ಅವರು ಅಳುತ್ತಾ ಹೊರ ಹೋದರು’ ಎಂದಿದ್ದಾರೆ ಶ್ರೀನಾಥ್.
‘ಹಾಡು ಮುಗಿಸಿ ಎಸ್ಪಿಬಿ ಬಂದರು. ನಾನು ಹೋಗಿ ಬರ್ತೀನಿ ಎಂದರು. ಪುಟ್ಟಣ್ಣ ಹೊರಗೆ ಹೋಗಿದ್ದಾರೆ ಬರ್ತಾರೆ ಎಂದೆ. ಲೈಫ್ ಅಲ್ಲಿ ಒಂದೊಳ್ಳೆಯ ಹಾಡು ಕೊಟ್ಟಿದ್ದು ಪುಟ್ಟಣ್ಣ ಅಂತ ಅವರಿಗೆ ಹೇಳಿಬಿಡು. ನನಗೆ ಸಂಭಾವನೆಯೂ ಬೇಡ ಎಂದು ಎಸ್ಪಿಬಿ ಹೊರಗೆ ಹೋದರು’ ಎಂದು ಶ್ರೀನಾಥ್ ಹೇಳಿದ್ದಾರೆ.
ಇದನ್ನೂ ಓದಿ: ಎಸ್ಪಿ ಬಾಲಸುಬ್ರಹ್ಮಣ್ಯಂ ನಾಲ್ಕನೇ ಪುಣ್ಯತಿಥಿ; ಮುಖ್ಯ ರಸ್ತೆಯೊಂದಕ್ಕೆ ಗಾಯಕನ ಹೆಸರಿಟ್ಟ ಸಿಎಂ
‘ಈ ಹಾಡು ಪ್ರತಿ ಬಾರಿ ನೆನಪಿಸಿಕೊಂಡಾಗ ಎಸ್ಪಿಬಿ ನೆನಪಿಗೆ ಬರುತ್ತಾರೆ. ಅವರು ನೆನಪಿಗೆ ಬಂದಾಗ ನಾನು ಭಾವುಕನಾಗುತ್ತೇನೆ’ ಎಂದು ಶ್ರೀನಾಥ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್
Published On - 7:59 am, Tue, 29 April 25