ತೆಲುಗಿನ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಜೊತೆ ಶ್ರೀಮುರಳಿ ಹೊಸ ಸಿನಿಮಾ ಅನೌನ್ಸ್

ಖ್ಯಾತ ನಟ ಶ್ರೀಮುರಳಿ ಅವರಿಗೆ ಇಂದು (ಡಿಸೆಂಬರ್​ 17) ಹುಟ್ಟುಹಬ್ಬದ ಸಂಭ್ರಮ. ಸಖತ್ ಸಡಗರದಿಂದ ಬರ್ತ್​ಡೇ ಆಚರಣೆ ಮಾಡಲಾಗಿದೆ. ಈ ವರ್ಷ ‘ಬಘೀರ’ ಸಿನಿಮಾ ಸೂಪರ್​ ಹಿಟ್​ ಆಗಿದ್ದರಿಂದ ಅವರಿಗೆ ಜನ್ಮದಿನದ ಖುಷಿ ಡಬಲ್ ಎನ್ನಬಹುದು. ಇದೇ ಖುಷಿಯಲ್ಲಿ ಅಭಿಮಾನಿಗಳಿಗೆ ಇನ್ನೊಂದು ಗುಡ್ ನ್ಯೂಸ್​ ಸಿಕ್ಕಿದೆ. ಶ್ರೀಮುರಳಿ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ.

ತೆಲುಗಿನ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಜೊತೆ ಶ್ರೀಮುರಳಿ ಹೊಸ ಸಿನಿಮಾ ಅನೌನ್ಸ್
ಶ್ರೀಮುರಳಿ

Updated on: Dec 17, 2024 | 7:32 PM

‘ರೋರಿಂಗ್ ಸ್ಟಾರ್​’ ಶ್ರೀಮುರಳಿ ಅವರು ಇಂದು (ಡಿ.17) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವರ್ಷ ತೆರೆಕಂಡ ‘ಬಘೀರ’ ಸಿನಿಮಾದಿಂದ ಅವರ ಖ್ಯಾತಿ ಹೆಚ್ಚಾಗಿದೆ. ಹಾಗಾಗಿ ಈ ವರ್ಷ ಬರ್ತ್​ಡೇ ಅವರಿಗೆ ಸ್ಪೆಷಲ್ ಆಗಿದೆ. ಅಭಿಮಾನಿಗಳ ಜೊತೆ ಅವರು ಬರ್ತ್​ಡೇ ಸೆಲೆಬ್ರೇಟ್​ ಮಾಡಿದ್ದಾರೆ. ‘ಬಘೀರ’ ಸೂಪರ್​ ಹಿಟ್​ ಆದ ಬಳಿಕ ಶ್ರೀಮುರಳಿ ಅವರ ಹೊಸ ಸಿನಿಮಾ ಯಾವುದು ಎಂದು ತಿಳಿಯಲು ಫ್ಯಾನ್ಸ್ ಕಾದಿದ್ದರು. ಆ ಬಗ್ಗೆ ಅಪ್​ಡೇಟ್​ ಸಿಕ್ಕಿದೆ. ಶ್ರೀಮುರಳಿ ಜನ್ಮದಿನದ ಪ್ರಯುಕ್ತ ಹೊಸ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಚಿತ್ರದ ನಿರ್ದೇಶಕರು ಯಾರು? ಶೀರ್ಷಿಕೆ ಏನು? ತಾರಾಗಣದಲ್ಲಿ ಮತ್ತು ತಾಂತ್ರಿಕ ಬಳಗದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ವಿಶೇಷ ಏನೆಂದರೆ, ಪರಭಾಷೆಯ ನಿರ್ಮಾಣ ಸಂಸ್ಥೆಗಳಿಂದ ಶ್ರೀಮುರಳಿ ಅವರಿಗೆ ಬೇಡಿಕೆ ಬಂದಿದೆ. ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ‌ಯಾದ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಜೊತೆ ಶ್ರೀಮುರಳಿ ಅವರು ಈಗ ಕೈ ಜೋಡಿಸಿದ್ದಾರೆ. ಈ ಸಂಸ್ಥೆ ನಿರ್ಮಾಣ ಮಾಡಲಿರುವ ಹೊಸ ಚಿತ್ರದಲ್ಲಿ ಹೀರೋ ಆಗಿ ಶ್ರೀಮುರಳಿ ಅಭಿನಯಿಸಲಿದ್ದಾರೆ. ಈ ಸುದ್ದಿ ತಿಳಿದು ಅಭಿಮಾನಿಗಳಿಗೆ ಖುಷಿ ಆಗಿದೆ.

ಶ್ರೀಮುರಳಿ ನಟಿಸಲಿರುವ ಈ ಸಿನಿಮಾದ ಮೂಲಕ ಟಾಲಿವುಡ್​ನ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಸಂಸ್ಥೆಯು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದೆ. ಈಗಾಗಲೇ ಕನ್ನಡದ ಕೆಲವು ನಿರ್ಮಾಣ ಸಂಸ್ಥೆಗಳು ಪರಭಾಷೆ ಚಿತ್ರಗಳ ನಿರ್ಮಾಣದಲ್ಲಿ‌ ತೊಡಗಿವೆ. ಅದೇ ರೀತಿ, ಬೇರೆ ಭಾಷೆಯಲ್ಲಿ ಸಕ್ರಿಯವಾಗಿರುವ ಪ್ರೊಡಕ್ಷನ್ ಹೌಸ್​ಗಳು ಕನ್ನಡಕ್ಕೆ ಆಗಮಿಸಿದೆ.

ಇದನ್ನೂ ಓದಿ: ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಶ್ರೀಮುರಳಿ

ಜನಮೆಚ್ಚಿದ ‘ಬಘೀರ’ ಸಿನಿಮಾದ ಗೆಲುವಿನ ನಂತರ ಶ್ರೀಮುರಳಿ ಅವರು ಮತ್ತೊಂದು ಬಿಗ್ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾ ಹೇಗಿರಲಿದೆ ಎಂದು ತಿಳಿಯುವ ಕುತೂಹಲ ಅಭಿಮಾನಿಗಳ ಮನದಲ್ಲಿ ಮೂಡಿದೆ. ಶ್ರೀಮುರಳಿ ಬರ್ತಡೇ ದಿನವೇ ಅಧಿಕೃತ ಪೋಸ್ಟರ್ ಅನಾವರಣ ಮಾಡಲಾಗಿದೆ. ಶ್ರೀಮುರಳಿ ಅವರ ವೃತ್ತಿ ಜೀವನದಲ್ಲಿ ಈ ಸಿನಿಮಾ ಸ್ಪೆಷಲ್ ಆಗಿರಲಿದೆ ಎಂಬ ಭರವಸೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us