ಕೊನೆಗೂ ಘೋಷಣೆಯಾಯ್ತು ಶ್ರೀಮುರಳಿಯ ‘ಬಘೀರ’ ಬಿಡುಗಡೆ ದಿನಾಂಕ

|

Updated on: Sep 11, 2024 | 6:36 PM

SriMurali: ಶ್ರೀಮುರಳಿ ನಟಿಸುತ್ತಿರುವ ‘ಬಘೀರ’ ಸಿನಿಮಾ ವರ್ಷಗಳಿಂದಲೂ ಚಿತ್ರೀಕರಣ ನಡೆಯುತ್ತಲೇ ಇದೆ. ಸಿನಿಮಾದ ಟೀಸರ್ ಕಳೆದ ವರ್ಷ ಬಿಡುಗಡೆ ಆಗಿತ್ತು. ಇದೀಗ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ ಹೊಂಬಾಳೆ.

ಕೊನೆಗೂ ಘೋಷಣೆಯಾಯ್ತು ಶ್ರೀಮುರಳಿಯ ‘ಬಘೀರ’ ಬಿಡುಗಡೆ ದಿನಾಂಕ
Follow us on

ಶ್ರೀಮುರಳಿ ನಾಯಕನಾಗಿ ನಟಿಸಿ, ಹೊಂಬಾಳೆ ಫಿಲಮ್ಸ್​ ಬಂಡವಾಳ ಹೂಡಿದ್ದ ‘ಬಘೀರ’ ಸಿನಿಮಾ ವರ್ಷಗಳಿಂದಲೂ ಚಿತ್ರೀಕರಣ ಚಾಲ್ತಿಯಲ್ಲಿತ್ತು. ಶ್ರೀಮುರಳಿಗೆ ಆದ ಗಾಯಗಳು ಇನ್ನಿತರೆ ಕಾರಣಗಳಿಂದ ಸಿನಿಮಾದ ಬಿಡುಗಡೆ ತಡವಾಗುತ್ತಲೇ ಬಂದಿತ್ತು. ಇದೀಗ ಕೊನೆಗೂ ಹೊಂಬಾಳೆ ಫಿಲಮ್ಸ್​ ‘ಬಘೀರ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಸಿನಿಮಾ ಕನ್ನಡ ಮಾತ್ರವಲ್ಲದೆ ಕೆಲ ಪರಭಾಷೆಗಳಲ್ಲಿಯೂ ಬಿಡುಗಡೆ ಆಗುತ್ತಿರುವುದು ವಿಶೇಷ.

ಇಂದು (ಸೆಪ್ಟೆಂಬರ್ 11) ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ‘ಬಘೀರ’ ಸಿನಿಮಾದ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಪ್ರಕಟ ಮಾಡಿದೆ. ಸಿನಿಮಾವು ಅಕ್ಟೋಬರ್ 31ರಂದು ಬಿಡುಗಡೆ ಆಗಲಿದೆ. ಕನ್ನಡ ಮಾತ್ರವಲ್ಲದೆ ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿಯೂ ಸಹ ಈ ಸಿನಿಮಾ ತೆರೆಗೆ ಬರಲಿರುವುದು ವಿಶೇಷ. ಬಿಡುಗಡೆ ದಿನಾಂಕ ಘೋಷಣೆಗೆ ಬಳಲಾಗಿರುವ ಪೋಸ್ಟರ್​ನಲ್ಲಿ ಕಪ್ಪು ಬಣ್ಣದ ಮಾಸ್ಕ್ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ:ನಟ ಶ್ರೀಮುರಳಿ ಕಾಲಿಗೆ ಮತ್ತೆ ಪೆಟ್ಟು; ಅರ್ಧಕ್ಕೆ ನಿಂತ ‘ಬಘೀರ’ ಶೂಟಿಂಗ್

‘ಬಘೀರ’ ಸಿನಿಮಾದಲ್ಲಿ ಶ್ರೀಮುರಳಿಗೆ ಎದುರಾಗಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಪ್ರಕಾಶ್ ರೈ, ಅಚ್ಯುತ್ ಕುಮಾರ್, ರಂಗಾಯಣ ರಘು, ಗರುಡ ರಾಮ್ ಇನ್ನೂ ಮುಂತಾದವರಿದ್ದಾರೆ. ಸಿನಿಮಾದ ಕತೆಯನ್ನು ಪ್ರಶಾಂತ್ ನೀಲ್ ಬರೆದಿದ್ದಾರೆ. ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದು ಡಾ ಸೂರಿ. ಸಿನಿಮಾದ ಬಿಡುಗಡೆ ದಿನಾಂಕ ಪೋಸ್ಟರ್​ನಲ್ಲಿ ಪ್ರಶಾಂತ್ ನೀಲ್ ಹೆಸರು ಹೈಲೆಟ್ ಆಗಿದೆ. ಪೋಸ್ಟರ್ ನೋಡಿದವರು ಪ್ರಶಾಂತ್ ನೀಲ್ ನಿರ್ದೇಶನ ಎಂದುಕೊಳ್ಳುವಂತಿದೆ ಡಿಸೈನ್.

‘ಬಘೀರ’ ಸಿನಿಮಾದ ಟೀಸರ್ ಕಳೆದ ವರ್ಷ ಡಿಸೆಂಬರ್​ನಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದ ಟೋನ್, ಕಲರ್ ಥೀಮ್ ‘ಕೆಜಿಎಫ್​’ ಮಾದರಿಯಲ್ಲಿಯೇ ಇರುವುದು ಟೀಸರ್​ನಿಂದ ಗೊತ್ತಾಗುತ್ತಿತ್ತು. ಟೀಸರ್ ಬಿಡುಗಡೆ ಮಾಡಿ ತಿಂಗಳುಗಳ ಬಳಿಕ ಈಗ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ. ಸಿನಿಮಾದ ಟ್ರೈಲರ್ ಮುಂದಿನ ತಿಂಗಳು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ